ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಂಚಿದ ಗಿಲ್, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ' ಉತ್ತಮ ಮೊತ್ತ

Shubman Gill shines again, India A reach 233/3 at stumps against South Africa A

ಮೈಸೂರು, ಸೆಪ್ಟೆಂಬರ್ 17: ನಾಯಕ ಶುಬ್‌ಮಾನ್‌ ಗಿಲ್, ಕರುಣ್ ನಾಯರ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ' ತಂಡ ಉತ್ತಮ ರನ್ ಕಲೆ ಹಾಕಿದೆ. ಮಂಗಳವಾರ (ಸೆಪ್ಟೆಂಬರ್ 17) ಮೊದಲ ದಿನದಾಟದ ಅಂತ್ಯದ ವೇಳೆ ಭಾರತ 74 ಓವರ್‌ಗೆ 3 ವಿಕೆಟ್ ಕಳೆದು 233 ರನ್ ಗಳಿಸಿತ್ತು.

ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಈ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಎ' ತಂಡದಿಂದ ಅಭಿಮನ್ಯು ಈಶ್ವರನ್ 5, ಶುಬ್‌ಮಾನ್‌ ಗಿಲ್ 92, ಪ್ರಿಯಾಂಕ್ ಪಾಂಚಲ್ 6 ರನ್‌ ಗಳಿಸಿ ಔಟಾಗಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ: 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ‍‍XIಭಾರತ vs ದಕ್ಷಿಣ ಆಫ್ರಿಕಾ: 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ‍‍XI

ಕರುಣ್ ನಾಯರ್ 78, ವೃದ್ಧಿಮಾನ್ ಸಹಾ 32 ರನ್‌ಗಳಿಸಿ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ 'ಎ' ತಂಡದ ಲುಂಗಿ ಸಾನಿ ಎನ್‌ಗಿಡಿ, ವಿಯಾನ್ ಮುಲ್ಡರ್ ಮತ್ತು ಲೂತೊ ಸಿಪಂಮ್ಲಾ ತಲಾ 1 ವಿಕೆಟ್‌ ಪಡೆದಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಭಾರತ ದೊಡ್ಡ ರನ್ ಕಲೆ ಹಾಕುವ ನಿರೀಕ್ಷೆಯಿದೆ.

ಭಾರತ vs ದ.ಆಫ್ರಿಕಾ: 2ನೇ ಟಿ20 ಪಂದ್ಯದ ವೇಳೆಯ ಹವಾಮಾನ ವರದಿಭಾರತ vs ದ.ಆಫ್ರಿಕಾ: 2ನೇ ಟಿ20 ಪಂದ್ಯದ ವೇಳೆಯ ಹವಾಮಾನ ವರದಿ

ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಭಾರತ 'ಎ' ತಂಡ 7 ವಿಕೆಟ್ ಗೆಲುವನ್ನಾಚರಿಸಿತ್ತು. ಅದಕ್ಕೂ ಮುನ್ನ ಐದು ಪಂದ್ಯಗಳ ಏಕದಿನ ಸರಣಿಯನ್ನೂ ಭಾರತ 4-1ರಿಂದ ಜಯಿಸಿತ್ತು.

Story first published: Tuesday, September 17, 2019, 21:45 [IST]
Other articles published on Sep 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X