ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 25 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್ ಗಿಲ್

Shubman gill and sachin
Shubman Gill ಆಟ ನೋಡಿ ಟೀಮ್ ಇಂಡಿಯಾ ಅಭಿಮಾನಿಗಳು ಏನ್ ಹೇಳ್ತಾರೆ | *Cricket | OneIndia Kannada

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಆರಂಭ ಪಡೆದಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಸೋತರೂ ಸಹ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಟೀಂ ಇಂಡಿಯಾ ಪರ ಯುವ ಸ್ಟಾರ್‌ ಬ್ಯಾಟರ್ ಶುಭಮನ್ ಗಿಲ್ ಹಾಗೂ ಶಿಖರ್ ಧವನ್ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಮೊದಲ ವಿಕೆಟ್‌ಗೆ 119ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಕೆರಿಬಿಯನ್ನರಿಗೆ ಸಾಕಷ್ಟು ತೊಂದರೆ ನೀಡಿದರು.

ಹೀಗೆ ಉತ್ತಮವಾಗಿ ಆಟವಾಡುತ್ತಿದ್ದ ಶುಭಮನ್ ಗಿಲ್‌ ತಾನೇ ಮಾಡಿದ ತಪ್ಪಿಗೆ 64ರನ್‌ಗಳಿಸಿ ರನೌಟ್ ಆದರು. ಆದ್ರೆ ಇದೇ ವೇಳೆಯಲ್ಲಿ ಶುಭಮನ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಅತ್ಯಂತ ಯುವ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.

ಹೀಗೆ ವೆಸ್ಟ್ ಇಂಡೀಸ್ ಅಂಗಳದಲ್ಲಿ ಅರ್ಧಶತಕ ಸಿಡಿಸಿದ ಮೂವರು ಯುವ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸಚಿನ್‌ ತೆಂಡೂಲ್ಕರ್

ಸಚಿನ್‌ ತೆಂಡೂಲ್ಕರ್

ಏಕದಿನ ಕ್ರಿಕೆಟ್‌ನಲ್ಲಿ ಅನೇಕ ಸಾರ್ವಕಾಲಿಕ ದಾಖಲೆಗಳ ಒಡೆಯನಾಗಿರುವ ಸಚಿನ್ ತೆಂಡೂಲ್ಕರ್, ಈ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಅತಿ ಹೆಚ್ಚಿನ ಶತಕಗಳು ಹಾಗೂ ಅರ್ಧಶತಕಗಳ ದಾಖಲೆಯನ್ನು ಹೊಂದಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳಲ್ಲಿ ಇವರು ಸಹ ಒಬ್ಬರು.

ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷ 3 ದಿನಗಳ ವಯಸ್ಸಿನವರಾಗಿದ್ದಾಗ ವೆಸ್ಟ್ ಇಂಡೀಸ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು.

Ind vs WI: ಫೀಲ್ಡಿಂಗ್ ವೇಳೆಯಲ್ಲಿ ಪುಶ್ ಅಪ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ ಶಿಖರ್ ಧವನ್‌

ಶುಭಮನ್ ಗಿಲ್‌

ಶುಭಮನ್ ಗಿಲ್‌

ವೆಸ್ಟ್‌ ಇಂಡೀಸ್ ವಿರುದ್ಧ ಟಿನಿಡಾಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯುವ ಬ್ಯಾಟರ್ ಶುಭಮನ್ ಗಿಲ್ ಈ ಸಾಧಕರ ಪಟ್ಟಿಯಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದರು. ಇಷ್ಟಲ್ಲದೆ ಲೆಜೆಂಡ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆಯನ್ನು ಸಹ ಮುರಿದು ಎರಡನೇ ಸ್ಥಾನಕ್ಕೇರಿದರು.

ಸಚಿನ್ ತೆಂಡೂಲ್ಕರ್ ತಮ್ಮ 24ನೇ ವಯಸ್ಸಿನಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ರೆ, ಶುಭಮನ್ ಗಿಲ್ ಇದೇ ಸಾಧನೆಯನ್ನ ಕೇವಲ 22 ವರ್ಷ 317 ದಿನಗಳ ವಯಸ್ಸಿನಲ್ಲೇ ತಲುಪುವ ಮೂಲಕ ಸಾಧನೆ ಮೆರೆದಿದ್ದಾರೆ.

ನಿರಾಸೆಯಾಗಿದೆ, ಆದರೆ.. : 3 ರನ್‌ನಿಂದ ಶತಕ ತಪ್ಪಿಸಿಕೊಂಡ ಬಗ್ಗೆ ಧವನ್ ಹೇಳಿದ್ದಿಷ್ಟು!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ನಲ್ಲಿ ಅರ್ಧಶತಕ ದಾಖಲಿಸಿದ ಟೀಂ ಇಂಡಿಯಾದ ಅತ್ಯಂತ ಯುವ ಬ್ಯಾಟರ್ ಎಂಬ ಸಾಧನೆಯನ್ನ ಮಾಡಿದ್ದಾರೆ. ಅನೇಕ ವಿಶ್ವದಾಖಲೆಯಲ್ಲಿ ತನ್ನ ಹೆಸರನ್ನ ದಾಖಲಿಸಿರುವ ವಿರಾಟ್ ಕೊಹ್ಲಿ, ವಿಂಡೀಸ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಯುವ ಬ್ಯಾಟರ್ ಆಗಿದ್ದಾರೆ.

ಕೊಹ್ಲಿ ತನ್ನ 22 ವರ್ಷ ಮತ್ತು 215 ದಿನಗಳ ಚಿಕ್ಕ ವಯಸ್ಸಿನಲ್ಲಿಯೇ ಕೆರಿಬಿಯನ್ ಅಂಗಳದಲ್ಲಿ ಅರ್ಧಶತಕ ದಾಖಲಿಸಿದ ಟೀಂ ಇಂಡಿಯಾದ ಯುವ ಬ್ಯಾಟರ್ ಎಂಬ ಸಾಧನೆ ಹೊಂದಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ವಿರಾಟ್ ಅಗ್ರಸ್ಥಾನದಲ್ಲಿದ್ದಾರೆ.

Story first published: Saturday, July 23, 2022, 13:53 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X