ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕಿಸ್ತಾನ ಪಂದ್ಯಗಳಲ್ಲಿ ಈ ಅಚ್ಚರಿಯ ಸಂಗತಿಗಳು ನಡೆದಿದ್ದವು!

Similar coincidents between India-Pakistan match of Austral-Asia Cup 1986 and Asia Cup 2014

ಬೆಂಗಳೂರು: ಬಾಲ್ಯದ ದಿನಗಳನ್ನ ನೆನಪಿಸಿಕೊಳ್ಳಿ (ನೀವು, ನಿಮ್ಮ ಸ್ನೇಹಿತರು, ಅಥವಾ ಪರಿಚಿತರಿಗೆ ಒಬ್ಬರಿಗಾದರೂ ಇಂಥದ್ದಾಗಿರಬಹುದು). ನಾವು ನಮ್ಮ ಪಾಡಿಗೆ ನಡೆಯುತ್ತಾ ಹೋಗುತ್ತಿರುತ್ತೇವೆ. ಹಾಗೆ ನಡೆಯುತ್ತಿದ್ದಾಗ ನಮ್ಮ ತಲೆಯ ಮೇಲೆಯೋ ಇಲ್ಲವೆ ಭುಜದ ಮೇಲೆಯೋ ಸರಕ್ಕನೆ ಏನೋ ಬೆಚ್ಚಗಿನದ್ದು ಬಿದ್ದಂತೆ ಅನ್ನಿಸುತ್ತದೆ. ನಾವು ತಲೆಯೆತ್ತಿ ನೋಡುವ ಹೊತ್ತಿಗೆ ಮೇಲಿನಿಂದ ಕಾಗೆಯೋ, ಯಾವುದೋ ಹಕ್ಕಿಯೋ ಹಾರಿ ಹೋಗಿದ್ದು ಕಾಣಿಸುತ್ತದೆ. ಆ ಕ್ಷಣ ನಾವು 'ಥತ್' ಅಂತ ಗೊಣಗಿಕೊಳ್ಳುತ್ತೇವೆಯೇ ಹೊರತು, ಕಾಕತಾಳೀಯ ಘಟನೆಯ ಬಗ್ಗೆ, ಅದರ ಟೈಮಿಂಗಿನ ಬಗ್ಗೆ ಯೋಚಿಸಲು ಹೋಗುವುದೇ ಇಲ್ಲ.

ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!

ಮೇಲಿನಿಂದ ಹಾರಿ ಹೋಗುತ್ತಿದ್ದ ಹಕ್ಕಿ, ಕೆಳಗಿನಿಂದ ನಡೆದು ಹೋಗುತ್ತಿದ್ದ ನಮ್ಮ ಮೇಲೆಯೇ ಬೀಳುವ ಹಾಗೆ ಗಲೀಜು ಮಾಡುತ್ತದೆ ಎಂದರೆ ಕಾಕತಾಳೀಯತೆ ಸೃಷ್ಟಿಸುವ ಟೈಮಿಂಗ್ ಎಂಥಾ ಖತರ್ನಾಕ್ ಆಗಿರುತ್ತದೆ ಅಲ್ಲವೆ? ಅದೂ ನಮ್ಮ ಸುತ್ತಮುತ್ತ ಅಷ್ಟಷ್ಟಗಲ ಜಾಗ ಇದ್ದರೂ ಗಲೀಜು ಸೀದಾ ನಮ್ಮ ಮೇಲೆಯೇ ಕೂತಿರುತ್ತದೆ. ಕ್ರಿಕೆಟ್‌ ಜಗತ್ತಿನಲ್ಲೂ ಇಂಥದ್ದೇ ಹಲವಾರು ನಂಬಲಾಗದ ಘಟನೆಗಳಾಗಿವೆ.

ರಾಹುಲ್ ದ್ರಾವಿಡ್, ಸೌರವ್ ಗಂಗೂಲಿಯನ್ನೇ ತಂಡದಿಂದ ಹೊರಗಿಟ್ಟಿದ್ದರು ಧೋನಿ!ರಾಹುಲ್ ದ್ರಾವಿಡ್, ಸೌರವ್ ಗಂಗೂಲಿಯನ್ನೇ ತಂಡದಿಂದ ಹೊರಗಿಟ್ಟಿದ್ದರು ಧೋನಿ!

ಭಾರತ-ಪಾಕಿಸ್ತಾನ ತಂಡಗಳ ನಡುವಿನ ಎರಡು ಪಂದ್ಯಗಳ ಮಧ್ಯೆ ಒಂದೇ ರೀತಿ ಅನ್ನಿಸುವಂತ ಹಲವಾರು ಕಾಕತಾಳೀಯ ಸಂಗತಿಗಳು ನಡೆದಿವೆ. ಆ ಕುತೂಹಲಕಾರಿ ಸಂಗತಿಗಳು ಕೆಳಗಿವೆ ನೋಡಿ.

ಎರಡೂ ಪಂದ್ಯಗಳಲ್ಲೂ ಒಂದೇ ರೀತಿ

ಎರಡೂ ಪಂದ್ಯಗಳಲ್ಲೂ ಒಂದೇ ರೀತಿ

* ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಿದ್ದ ಎರಡೂ ಪಂದ್ಯಗಳಲ್ಲೂ ಒಂದೇ ರೀತಿ ಅನ್ನಿಸುವಂತೆ ಅಚ್ಚರಿಗೀಡು ಮಾಡುವಂತ ಹಲವಾರು ಕಾಕತಾಳೀಯ ಘಟನೆಗಳು ನಡೆದಿದ್ದವು.
* ಈ ಎರಡು ಪಂದ್ಯಗಳೆಂದರೆ 1986ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಡೆದಿದ್ದ ಆಸ್ಟ್ರೇಲ್-ಏಷ್ಯಕಪ್ ಫೈನಲ್ ಪಂದ್ಯ ಮತ್ತು 2014ರಲ್ಲಿ ಬಾಂಗ್ಲಾದೇಶದ ಧಾಕಾದಲ್ಲಿ ನಡೆದಿದ್ದ ಏಷ್ಯಾಕಪ್ 6ನೇ ಪಂದ್ಯ.
* 1986ರ ಆಸ್ಟ್ರೇಲ್-ಏಷ್ಯಕಪ್ ಫೈನಲ್ ಪಂದ್ಯ ಮತ್ತು 2014ರ ಏಷ್ಯಾಕಪ್ ಪಂದ್ಯ ಎರಡೂ ನಡೆದಿದ್ದು ತಟಸ್ಥ ತಾಣಗಳಾದ ಶಾರ್ಜಾ ಮತ್ತು ಧಾಕಾದಲ್ಲಿ.
* ಎರಡೂ ಪಂದ್ಯಗಳ ವೇಳೆಯೂ ಪಾಕಿಸ್ತಾನ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 245 ರನ್ ಗಳಿಸಿತ್ತು.

ಸಿಕ್ಸ್, ಅರ್ಧ ಶತಕ ಸೇಮ್ ಟು ಸೇಮ್

ಸಿಕ್ಸ್, ಅರ್ಧ ಶತಕ ಸೇಮ್ ಟು ಸೇಮ್

* 1986ರ ಆಸ್ಟ್ರೇಲ್-ಏಷ್ಯಕಪ್ ಫೈನಲ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಶ್ ಶ್ರೀಕಾಂತ್ 2 ಸಿಕ್ಸ್‌ಗಳನ್ನು ಬಾರಿಸಿದ್ದರು. 2014ರ ಏಷ್ಯಾಕಪ್‌ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 2 ಸಿಕ್ಸ್‌ಗಳನ್ನು ಬಾರಿಸಿದ್ದರು.
* ಎರಡೂ ಪಂದ್ಯಗಳಲ್ಲೂ ಭಾರತದ ಮೂರು ಬ್ಯಾಟ್ಸ್‌ಮನ್‌ಗಳು ಅರ್ಧ ಶತಕ ಬಾರಿಸಿದ್ದರು (ಆಸ್ಟ್ರೇಲ್-ಏಷ್ಯಕಪ್‌ನಲ್ಲಿ ಶ್ರೀಕಾಂತ್, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ವೆಂಗ್ ಸರ್ಕಾರ್, 2014ರ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ, ಅಂಬಾಟಿ ರಾಯುಡು ಮತ್ತು ರವೀಂದ್ರ ಜಡೇಜಾ).

ಅಲ್ಲೂ ರನ್ ಔಟ್, ಇಲ್ಲೂ ರನ್ ಔಟ್

ಅಲ್ಲೂ ರನ್ ಔಟ್, ಇಲ್ಲೂ ರನ್ ಔಟ್

* 1986ರ ಆಸ್ಟ್ರೇಲ್-ಏಷ್ಯಕಪ್ ಮತ್ತು 2014ರ ಏಷ್ಯಾಕಪ್ ಎರಡರಲ್ಲೂ ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಇಬ್ಬರು ಆಟಗಾರರು ರನ್ ಔಟ್ ಆಗಿದ್ದರು.
* ಆಸ್ಟ್ರೇಲ್-ಏಷ್ಯಕಪ್‌ನಲ್ಲಿ ಪಾಕಿಸ್ತಾನದ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಜುಲ್ಕರ್ನೈನ್ ಅವರು ಚೇತನ್ ಶರ್ಮಾ ಅವರ ಮೊದಲ ಎಸೆತಕ್ಕೆ ಸೊನ್ನೆ ರನ್‌ಗೆ ಬೌಲ್ಡ್ ಆಗಿದ್ದರು. ಏಷ್ಯಾಕಪ್‌ನಲ್ಲೂ ಪಾಕಿಸ್ತಾನ ತಂಡದ 10ನೇ ಬ್ಯಾಟ್ಸ್‌ಮನ್ ಸಾಯಿದ್ ಅಜ್ಮಲ್ ಅವರು ಆರ್ ಅಶ್ವಿನ್ ಅವರ ಮೊದಲ ಎಸೆತಕ್ಕೆ ಸೊನ್ನೆ ರನ್‌ಗೆ ಬೌಲ್ಡ್ ಆಗಿದ್ದರು.
* ಆಸ್ಟ್ರೇಲ್-ಏಷ್ಯಕಪ್‌ನಲ್ಲಿ ಪಾಕ್‌ನ 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ತೌಸೀಫ್ ಅವರು ಪ್ರಮುಖ 1 ರನ್ ಗಳಿಸಿ ಜಾವೆದ್ ಮಿಯಾಂದಾದ್‌ಗೆ ಸ್ಟ್ರೈಕ್ ನೀಡಿದ್ದರು. ಏಷ್ಯಾಕಪ್ ನಲ್ಲಿ 11ನೇ ಕ್ರಮಾಂಕದ ಪಾಕ್ ಆಟಗಾರ ಜುನೈದ್ ಅವರು ಅತೀ ಪ್ರಮುಖ ಸಿಂಗಲ್ ರನ್ ಗಳಿಸಿ ಶಾಹಿದ್ ಅಫ್ರಿದಿಗೆ ಸ್ಟ್ರೈಕ್ ನೀಡಿದ್ದರು (ತೌಸೀಫ್ ಮತ್ತು ಜುನೈದ್ ಇಬ್ಬರೂ 1ನೇ ರನ್ ಗಳಿಸಿದ್ದು).

ಅಲ್ಲಿ ಜಾವೆದ್, ಇಲ್ಲಿ ಶಾಹಿದ್ ಮಿಂಚು

ಅಲ್ಲಿ ಜಾವೆದ್, ಇಲ್ಲಿ ಶಾಹಿದ್ ಮಿಂಚು

* ಆಸ್ಟ್ರೇಲ್-ಏಷ್ಯಕಪ್‌ನಲ್ಲಿ ಭಾರತದ ಚೇತನ್ ಶರ್ಮಾ ಅವರು ಕೊನೆಯ ಓವರ್‌ನಲ್ಲಿ ಪಾಕ್ ತಂಡದ 3 ವಿಕೆಟ್ ಪಡೆದಿದ್ದರು. ಏಷ್ಯಾಕಪ್‌ನಲ್ಲಿ ಕೊನೇಯ ಓವರ್ ಎಸೆದಿದ್ದ ಭಾರತದ ಆರ್ ಅಶ್ವಿನ್ 3ವಿಕೆಟ್‌ಗಳನ್ನು ಉರುಳಿಸಿದ್ದರು.
* ಆಸ್ಟ್ರೇಲ್-ಏಷ್ಯಕಪ್‌ನಲ್ಲಿ ಪಾಕ್ ಬ್ಯಾಟ್ಸ್‌ಮನ್ ಜಾವೆದ್ ಮಿಯಾಂದಾದ್ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು (ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಬಾರಿಸಿದ್ದರು). ಏಷ್ಯಾಕಪ್‌ನಲ್ಲಿ ಪಾಕ್‌ನ ಶಾಹಿದ್ ಅಫ್ರಿದಿ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು (ಇವರೂ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಬಾರಿಸಿದ್ದರು).
* ಎರಡೂ ಪಂದ್ಯಗಳಲ್ಲೂ ಕೊನೇ ಓವರ್‌ನಲ್ಲಿ ಪಂದ್ಯ ಕೊನೆಗೊಂಡಿತ್ತು, ಎರಡರಲ್ಲೂ ಪಾಕಿಸ್ತಾನ ತಂಡ 1 ವಿಕೆಟ್ ಗೆಲುವು ದಾಖಲಿಸಿತ್ತು.

(ಸ್ಟೋರಿ ಓದಿ ಮುಗಿಸಿದ ಮೇಲೆ ಡೌಟ್ ಬಂದರೆ ಚೆಕ್ ಮಾಡಿ: 1986ರ ಆಸ್ಟ್ರೇಲ್-ಏಷ್ಯಕಪ್ ಫೈನಲ್‌ ಸ್ಕೋರ್‌ಕಾರ್ಡ್ | 2014ರ ಏಷ್ಯಾಕಪ್ ಸ್ಕೋರ್‌ ಕಾರ್ಡ್)

Story first published: Saturday, July 4, 2020, 9:58 [IST]
Other articles published on Jul 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X