ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ರಿಕೋನ ಸರಣಿ: ಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಸಿಂಗಾಪುರ!

Singapore make history with maiden T20I win over ICC full member

ಸಿಂಗಾಪುರ, ಸೆಪ್ಟೆಂಬರ್ 30: ಮುಂದಿನ ತಿಂಗಳಿನಲ್ಲಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯಲಿರುವಾಗಲೇ, ಸಿಂಗಾಪುರ ಕ್ರಿಕೆಟ್‌ ತಂಡ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಐಸಿಸಿ ಪೂರ್ಣ ಸದಸ್ಯ ತಂಡವಾದ ಜಿಂಬಾಬ್ವೆ ವಿರುದ್ಧ ಸಿಂಗಾಪುರ ಚೊಚ್ಚಲ ಜಯ ದಾಖಲಿಸಿದೆ.

ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!

ಸಿಂಗಾಪುರದ ಇಂಡಿಯನ್ ಅಸೋಸಿಯೇಷನ್ ಗ್ರೌಂಡ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 29) ಸಿಂಗಾಪುರ-ಜಿಂಬಾಬ್ವೆ-ನೇಪಾಳ ನಡುವಿನ ತ್ರಿಕೋನ ಸರಣಿಯ 3ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸಿಂಗಾಪುರ 4 ರನ್ ರೋಚಕ ಜಯ ಗಳಿಸಿದೆ.

ಬಿಜೆಪಿ ಸಂಸದ, ಮಾಜಿ ನಾಯಕ ಗಂಭೀರ್ ವಿರುದ್ಧ ವಂಚನೆ ಪ್ರಕರಣಬಿಜೆಪಿ ಸಂಸದ, ಮಾಜಿ ನಾಯಕ ಗಂಭೀರ್ ವಿರುದ್ಧ ವಂಚನೆ ಪ್ರಕರಣ

ಸೆಪ್ಟೆಂಬರ್ 28ರಂದು ನಡೆದಿದ್ದ ಪಂದ್ಯದಲ್ಲಿ ನೇಪಾಳ ವಿರುದ್ಧ ಸೋತಿದ್ದ ಸಿಂಗಾಪುರ, ಈ ಟಿ20ಐ ಜಯದೊಂದಿಗೆ ವಿಶ್ವದ ಗಮನ ಸೆಳೆದಿದೆ.

18 ಓವರ್‌ಗೆ 181 ರನ್

18 ಓವರ್‌ಗೆ 181 ರನ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸಿಂಗಾಪುರ, ಆರಂಭಿಕ ಆಟಗಾರ ರೋಹನ್ ರಂಗರಾಜನ್ 39, ಸುರೇಂದ್ರನ್ ಚಂದ್ರಮೋಹನ್ 23, ಟಿಮ್ ಡೇವಿಡ್ 41, ಮನ್‌ಪ್ರೀತ್‌ ಸಿಂಗ್ 41, ಜನಕ್ ಪ್ರಕಾಶ್ 10 ರನ್‌ ನೊಂದಿಗೆ 18 ಓವರ್‌ಗೆ 9 ವಿಕೆಟ್ ಕಳೆದು 181 ರನ್ ಮಾಡಿತು.

ಫುಲ್ ಮೆಂಬರ್ಸ್ ತಂಡಗಳು ಎಂದರೇನು?

ಫುಲ್ ಮೆಂಬರ್ಸ್ ತಂಡಗಳು ಎಂದರೇನು?

ಐಸಿಸಿ ಪೂರ್ಣ ಸದಸ್ಯರು ಎಂದರೆ ಒಂದು ದೇಶದಲ್ಲಿನ ಕ್ರಿಕೆಟ್‌ ಆಡಳಿತ ಮಂಡಳಿಗಳು ಅಥವಾ ಭೌಗೋಳಿಕ ಪ್ರದೇಶವನ್ನು ಪ್ರತಿನಿಧಿಸುವುದಕ್ಕೆ ಸಂಬಂಧಿಸಿದ ದೇಶಗಳ ಗುಂಪು. ಐಸಿಸಿ ಪೂರ್ಣ ಸದಸ್ಯರಿಗೆ ಅಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲು ಒಂದು ಪ್ರತಿನಿಧಿ ತಂಡವನ್ನು ಕಳುಹಿಸುವ ಹಕ್ಕಿದೆ ಮತ್ತು ಐಸಿಸಿಯ ಸಭೆಗಳಲ್ಲಿ ಪೂರ್ಣ ಮತದಾನದ ಹಕ್ಕಿರುತ್ತದೆ.

ವಿಲಿಯಮ್ಸ್ ಅರ್ಧ ಶತಕ ವ್ಯರ್ಥ

ವಿಲಿಯಮ್ಸ್ ಅರ್ಧ ಶತಕ ವ್ಯರ್ಥ

ಗುರಿ ಬೆನ್ನಟ್ಟಿದ ಜಿಂಬಾಬ್ವೆ, ರೆಗಿಸ್ ಚಕಾಬ್ವಾ 48, ಸೀನ್ ವಿಲಿಯಮ್ಸ್ 66 (35 ಎಸೆತ), ಟಿನೋಟೆಂಡಾ ಮುಟೊಂಬೊಡ್ಜಿ 32 ರನ್ ಕೊಡುಗೆಯೊಂದಿಗೆ 18 ಓವರ್‌ಗೆ 7 ವಿಕೆಟ್‌ ನಷ್ಟದಲ್ಲಿ 177 ರನ್ ಪೇರಿಸಿ ಶರಣಾಯಿತು (ಪಂದ್ಯವನ್ನು 18 ಓವರ್‌ಗೆ ಸೀಮಿತಗೊಳಿಸಲಾಗಿತ್ತು).

ಐಸಿಸಿ ಫುಲ್ ಮೆಂಬರ್ಸ್ ತಂಡಗಳು

ಐಸಿಸಿ ಫುಲ್ ಮೆಂಬರ್ಸ್ ತಂಡಗಳು

ಐಸಿಸಿ ಫುಲ್ ಮೆಂಬರ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳಿವೆ. ಸಿಂಗಾಪುರ, ಜಾಂಬಿಯಾ ಇತ್ಯಾದಿ ಅನೇಕ ದೇಶಗಳು ಐಸಿಸಿ ಸಹ ಸದಸ್ಯರ ಪಟ್ಟಿಯಲ್ಲಿವೆ.

Story first published: Monday, September 30, 2019, 18:28 [IST]
Other articles published on Sep 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X