ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐ

Siraj was offered option to fly back from Australia after his fathers demise but he decided to stay

ಟೀಮ್ ಇಂಡಿಯಾದ ಯುವ ಆಟಗಾರ ಮೊಹಮ್ಮದ್ ಸಿರಾಜ್ ಆಸಿಸ್ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ನೆಲದಲ್ಲಿ ಅಭ್ಯಾಸದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿರಾಜ್ ತಂದೆ ಮೊಹಮ್ಮದ್ ಘೌಸ್ ಕಳೆದ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮೊಹಮ್ದ್ ಸಿರಾಜ್ ಅವರಿಗೆ ತವರಿಗೆ ಮರಳಿ ಕುಟುಂಬವನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಿತ್ತು. ಆದರೆ ಸಿರಾಜ್ ತಂಡದ ಜೊತೆಯಲ್ಲೇ ಉಳಿದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಈ ಬಗ್ಗೆ ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

"ಅನಾರೋಗ್ಯದ ಕಾರಣ ಟೀಮ್ ಇಂಡಿಯಾದ ವೇಗಿ ಮಹಮ್ಮದ್ ಸಿರಾಜ್ ಅವರ ತಂದೆ ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮೊಹಮ್ಮದ್ ಸಿರಾಜ್ ಅವರ ಜೊತೆಯಲ್ಲಿ ಮಾತನಾಡಿದೆ. ಆತನಿಗೆ ತವರಿಗೆ ಮರಳಿ ಕುಟುಂಬವನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಿತ್ತು. ಆದರೆ ವೇಗದ ಬೌಲರ್ ಭಾರತೀಯ ತಂಡದೊಂದಿಗೆ ಉಳಿದುಕೊಂಡು ರಾಷ್ಟ್ರೀಯ ತಂಡದ ಪರವಾಗಿ ದೇಶ ಸೇವೆ ಮಾಡಲು ನಿರ್ಧರಿಸಿದ್ದಾರೆ. ಸಿರಾಜ್ ಅವರ ದುಃಖವನ್ನು ಬಿಸಿಸಿಐ ಭಾಗಿಯಾಗುತ್ತದೆ ಜೊತೆಗೆ ಈ ಕಠಿಣ ಸಂದರ್ಭದಲ್ಲಿ ಬಿಸಿಸಿಐ ಸಿರಾಜ್ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ" ಎಂದು ಬಿಸಿಸಿಐ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನಭಾರತದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನ

ಇನ್ನು ಇದೇ ಸಂದರ್ಭದಲ್ಲಿ ಬಿಸಿಸಿಐ ಮಾಧ್ಯಮಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದೆ. ಮೊಹಮ್ಮದ್ ಸಿರಾಜ್ ಅವರು ಹಾಗೂ ಅವರ ಕುಟುಂಬ ನೋವಿನಲ್ಲಿರುವ ಈ ಸಂದರ್ಭದಲ್ಲಿ ಅವರಿಗೆ ಅವಕಾಶ ಹಾಗೂ ಖಾಸಗೀತನಕ್ಕಾಗಿ ಮನವಿಯನ್ನು ಬಿಸಿಸಿಐ ಮಾಡಿಕೊಂಡಿದೆ.

ಇದಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್‌ ಮೂಲಕ ಸಿರಾಜ್ ಅವರಿಗೆ ದೈರ್ಯ ತುಂಬದ್ದರು. "ಈ ದೊಡ್ಡ ನಷ್ಟವನ್ನು ಭರಿಸಿಕೊಳ್ಳಲು ಮೊಹಮ್ಮದ್ ಸಿರಾಜ್ ಅವರಿಗೆ ಸಾಕಷ್ಟು ಶಕ್ತೊ ದೊರೆಯಲಿ. ಈ ಪ್ರವಾಸದ ಯಶಸ್ಸಿಗೆ ಸುಭಹಾರೈಸುತ್ತಿದ್ದೇನೆ. ಅದ್ಭುತವಾಗಿ ವ್ಯಕ್ತಿತ್ವ" ಎಂದು ಸಿರಾಜ್ ಅವರ ನಿರ್ಧಾರಕ್ಕೆ ಗೌರವಿಸಿ ಶುಭಹಾರೈಸಿದ್ದರು.

Story first published: Monday, November 23, 2020, 10:07 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X