ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐಯ '2 ಕಿ.ಮೀ. ರನ್' ಫಿಟ್ನೆಸ್ ಪರೀಕ್ಷೆಯಲ್ಲಿ 6 ಆಟಗಾರರು ಫೇಲ್!

Six cricketers fail BCCI’s new 2km-run fitness test

ಬೆಂಗಳೂರು: ಪ್ರಮುಖ ಅಂತಾರಾಷ್ಟ್ರೀಯ ಸರಣಿಗಳಿಗೆ ಟೀಮ್ ಇಂಡಿಯಾ ಪರ ಆಯ್ಕೆಯಾಗಬೇಕಾದರೆ ಆಟಗಾರರು ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗಬೇಕು. ಈ ಯೋ-ಯೋ ಟೆಸ್ಟ್‌ನ ಭಾಗವಾಗಿ ಬೋರ್ಡ್ ಆಫ್ ಕಂಟ್ರೋಲ್ ಪಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನೂತನ ಫಿಟ್‌ನೆಸ್ ಪರೀಕ್ಷೆಯೊಂದನ್ನು ಪರಿಚಯಿಸಿದೆ. 2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್ ಇದರ ಹೆಸರು. ಇತ್ತೀಚೆಗೆ ನಡೆದ ಈ ಪರೀಕ್ಷೆಯಲ್ಲಿ ಭಾರತೀಯ ಆರು ಆಟಗಾರರು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಐಪಿಎಲ್ ಹರಾಜು 2021: ಸಂಪೂರ್ಣ ಪಟ್ಟಿ ಪ್ರಕಟ, ಶ್ರೀಶಾಂತ್ ಇಲ್ಲ!ಐಪಿಎಲ್ ಹರಾಜು 2021: ಸಂಪೂರ್ಣ ಪಟ್ಟಿ ಪ್ರಕಟ, ಶ್ರೀಶಾಂತ್ ಇಲ್ಲ!

2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್ ಪ್ರಕಾರ, ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್ ಅಥವಾ ಸ್ಪಿನ್ ಬೌಲರ್‌ಗಳೆಲ್ಲ 2 ಕಿ.ಮೀ. ದೂರವನ್ನು 8 ನಿಮಿಷ 30 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕು. ವೇಗದ ಬೌಲರ್ ಆಗಿದ್ದರೆ ಆತ ಪರೀಕ್ಷೆಯಲ್ಲಿ ಪಾಸ್ ಆಗಲು 2 ಕಿ.ಮೀ. ದೂರವನ್ನು 8 ನಿಮಿಷ 15 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕು.

ಟಿ20ಐನಲ್ಲಿ ದಾಖಲೆಯ ಶತಕ ಚಚ್ಚಿದ ಪಾಕ್‌ನ ಮೊಹಮ್ಮದ್ ರಿಝ್ವಾನ್ಟಿ20ಐನಲ್ಲಿ ದಾಖಲೆಯ ಶತಕ ಚಚ್ಚಿದ ಪಾಕ್‌ನ ಮೊಹಮ್ಮದ್ ರಿಝ್ವಾನ್

2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್ ಯಾರೆಲ್ಲಾ ಫೇಲ್ ಆಗಿದ್ದಾರೆ, ಫೇಲಾದರೆ ಏನಾಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ಆಟಗಾರರು ಫೇಲ್?

ಯಾವ ಆಟಗಾರರು ಫೇಲ್?

ಬಲ್ಲ ಮಾಹಿತಿಯ ಪ್ರಕಾರ, ಯುವ ವಿಕೆಟ್ ಕೀಪರ್/ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಬ್ಯಾಟ್ಸ್‌ಮನ್ ನಿತೀಶ್ ರಾಣಾ, ಆಲ್ ರೌಂಡರ್ ರಾಹುಲ್ ತೆವಾಟಿಯಾ, ವೇಗಿ ಸಿದ್ಧಾರ್ಥ್ ಕೌಲ್, ಜಯದೇವ್ ಉನಾದ್ಕತ್ 2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿಲ್ಲ.

ಟೆಸ್ಟ್ ಫೇಲಾದರೆ ಏನಾಗುತ್ತದೆ?

ಟೆಸ್ಟ್ ಫೇಲಾದರೆ ಏನಾಗುತ್ತದೆ?

'2 ಕಿ.ಮೀ ರನ್ ಫಿಟ್ನೆಸ್ ಟೆಸ್ಟ್‌ ನೂತನ ಫಿಟ್ನೆಸ್ ಟೆಸ್ಟ್ ಆಗಿರುವುದರಿಂದ ಫೇಲ್ ಆದ ಆಟಗಾರರಿಗೆ ಕೊಂಚ ದಿನ ಬಿಡುವಿನ ಬಳಿಕ ಎರಡನೇ ಅವಕಾಶ ನೀಡಲಾಗುತ್ತದೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ. ಎರಡನೇ ಪರೀಕ್ಷೆಯಲ್ಲೂ ಫೇಲ್ ಆದರೆ ಇಂಗ್ಲೆಂಡ್ ವಿರುದ್ಧ ಮುಂಬರಲಿರುವ ನಿಯಮಿತ ಓವರ್‌ಗಳ ಸರಣಿಯಲ್ಲಿ (5 ಟಿ20ಐ ಮತ್ತು 3 ಏಕದಿನ) ಆಟಗಾರರು ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಅಂದ್ಹಾಗೆ ಈ ಟೆಸ್ಟ್‌ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಡೆಯುತ್ತದೆ.

2018ರಲ್ಲೂ ಟೆಸ್ಟ್‌ನಲ್ಲಿ ಫೇಲ್

2018ರಲ್ಲೂ ಟೆಸ್ಟ್‌ನಲ್ಲಿ ಫೇಲ್

ಸಂಜು ಸ್ಯಾಮ್ಸನ್, ವೇಗಿ ಮೊಹಮ್ಮದ್ ಶಮಿ ಮತ್ತು ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು 2018ರಲ್ಲೂ ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆಗಿದ್ದರು. ಆ ಬಳಿಕ ನಡೆದ ಇಂಗ್ಲೆಂಡ್‌ ಪ್ರವಾಸ ಸರಣಿಯಲ್ಲಿ ಈ ಮೂವರೂ ಆಟಗಾರರು ಟೀಮ್ ಇಂಡಿಯಾದ ಭಾಗವಾಗಿರಲಿಲ್ಲ. ಮೂವರನ್ನೂ ತಂಡದಿಂದ ಹೊರಗಿಡಲಾಗಿತ್ತು.

Story first published: Friday, February 12, 2021, 15:42 [IST]
Other articles published on Feb 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X