ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದಲ್ಲಿರುವ 6 ಅನ್‌ಕ್ಯಾಪ್ಡ್ ಆಟಗಾರರಿವರು!

ಶ್ರೀಲಂಕ ವಿರುದ್ಧ ಮೀಸೆ ತಿರುವಲು ಗಬ್ಬರ್ ಶಿಖರ್ ಧವನ್ ರೆಡಿ | India vs Sri Lanka | Oneindia Kannada

ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 20 ಮಂದಿಯ ಬಲಿಷ್ಠ ತಂಡವನ್ನು ಶುಕ್ರವಾರ (ಜೂನ್ 10) ಪ್ರಕಟಿಸಿದೆ. ಅನುಭವಿ ಬ್ಯಾಟ್ಸ್‌ಮನ್‌ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್‌ಗಳ ಈ ಕ್ರಿಕೆಟ್ ಸರಣಿಗಳಿಗೆ ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.

ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್

ಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ತಂಡ ಅಲ್ಲಿ ಜುಲೈ 13ರಿಂದ ಜುಲೈ 25ರ ವರೆಗೆ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್‌ ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಗ್ರೇಟ್ ವಾಲ್ ರಾಹುಲ್ ಸಾರಥ್ಯ

ಗ್ರೇಟ್ ವಾಲ್ ರಾಹುಲ್ ಸಾರಥ್ಯ

ಟೀಮ್ ಇಂಡಿಯಾ ಇವತ್ತು ವಿಶ್ವದ ಬಲಿಷ್ಠ ತಂಡಗಳಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳಲು ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಕೊಡುಗೆ ತುಂಬಾ ಇದೆ ಎಂದು ಅನೇಕ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಕಾರಣ, ಯುವ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರು ಬಲಿಷ್ಠ ಆಟಗಾರರಾಗಿ ಬೆಳೆಯುವಲ್ಲಿ ದ್ರಾವಿಡ್ ಶ್ರಮವಿದೆ. ಉದಯೋನ್ಮುಖ ಆಟಗಾರರು ಸಾಕಷ್ಟು ಮಂದಿಯಿರುವ ಈ ಶ್ರೀಲಂಕಾ ಪ್ರವಾಸದ ಭಾರತೀಯ ತಂಡಕ್ಕೆ ದ್ರಾವಿಡ್ ಕೋಚ್ ಆಗಿ ತಂಡದ ಜೊತೆಗಿರಲಿದ್ದಾರೆ.

6 ಅನ್‌ಕ್ಯಾಪ್ಡ್ ಆಟಗಾರರಿಗೆ ಸ್ಥಾನ

6 ಅನ್‌ಕ್ಯಾಪ್ಡ್ ಆಟಗಾರರಿಗೆ ಸ್ಥಾನ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್‌ ಅಶ್ವಿನ್ ಇಂಥ ಅನುಭವಿಗಳಿರುವ ಒಂದು ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ತಂಡದಲ್ಲಿ 6 ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆ ಆರು ಅನ್‌ಲ್ಯಾಪ್ಡ್‌ ಆಟಗಾರರೆಂದರೆ ದೇವದತ್ ಪಡಿಕ್ಕಲ್, ಚೇತನ್ ಸಕರಿಯಾ, ನಿತೀಶ್ ರಾಣಾ, ಕೃಷ್ಣಪ್ಪ ಗೌತಮ್, ಋತುರಾಜ್ ಗಾಯಕ್ವಾಡ್ ಮತ್ತು ವರುಣ್ ಚಕ್ರವರ್ತಿ. ಇನ್ನು ಸಂಜು ಸ್ಯಾಮ್ಸನ್, ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ಮನೀಶ್ ಪಾಂಡೆ ಮೊದಲಾದ ಪ್ರತಿಭಾನ್ವಿತರೂ ತಂಡದಲ್ಲಿದ್ದಾರೆ.

ಭಾರತ-ಶ್ರೀಲಂಕಾ ಸರಣಿಗೆ ಭಾರತ ತಂಡ

ಭಾರತ-ಶ್ರೀಲಂಕಾ ಸರಣಿಗೆ ಭಾರತ ತಂಡ

ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್.

For Quick Alerts
ALLOW NOTIFICATIONS
For Daily Alerts
Story first published: Friday, June 11, 2021, 1:38 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X