ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐ: ಬೇಡದ ದಾಖಲೆ ಬರೆದ ಲಂಕಾದ ಬೌಲರ್ ಕಸುನ್ ರಜಿತಾ

SL Bowler Kasun Rajitha unwanted record in T20i against Australia

ಅಡಿಲೇಡ್, ಅಕ್ಟೋಬರ್ 27: ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಜೊತೆಗೆ ಶ್ರೀಲಂಕಾದ ಬೌಲರ್ ಕಸುನ್ ರಜಿತಾ ಅವರು ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.

ಟಿ20 ಕ್ರಿಕೆಟ್​ ಪಂದ್ಯವೊಂದರಲ್ಲಿ ಅತಿ ಹಚ್ಚು ರನ್​ ಚೆಚ್ಚಿಸಿಕೊಂಡ ಬೌಲರ್​ ಎಂಬ ಅಪಕೀರ್ತಿ ಕಸುನ್ ಪಾಲಾಗಿದೆ. ಭಾನುವಾರ ನಡೆದ ಈ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳು ಅದರಲ್ಲೂ ಡೇವಿಡ್ ವಾರ್ನರ್ ಭರ್ಜರಿ ಪ್ರದರ್ಶನ ನೀಡಿ ಶ್ರೀಲಂಕಾ ಬೌಲರ್ ಗಳನ್ನು ಕಾಡಿದರು.

ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 1ಟಿ20 ಸ್ಕೋರ್ ಕಾರ್ಡ್

ಕಸುನ್ 4 ಓವರ್​ಗಳಲ್ಲಿ 75 ರನ್ ಹೊಡೆಸಿಕೊಂಡರು. 7 ಬೌಂಡರಿ ಹಾಗೂ 6 ಸಿಕ್ಸರ್​ ಚೆಚ್ಚಿಸಿಕೊಂಡ ಕಸುನ್ ಯಾವುದೆ ವಿಕೆಟ್ ಪಡೆಯಲಿಲ್ಲ.


ಕಸುನ್ ಗೂ ಮುನ್ನ ಟರ್ಕಿ ಬೌಲರ್​ ತುನಾಹನ್​ ತರನ್​ ಹೆಸರಿನಲ್ಲಿ ಅತ್ಯಧಿಕ ರನ್ ನೀಡಿದ ದಾಖಲೆಯಿತ್ತು. ತರನ್ 4 ಓವರ್ ಗಳಲ್ಲಿ 7ರನ್ ನೀಡಿದ್ದರು. ಈಗ ರಜಿತಾ ಹೊಸ ದಾಖಲೆ ಬರೆದಿದ್ದಾರೆ.

ಟಾಸ್​ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಅವರ ಅಜೇಯ 100ರನ್ ಆಸರೆಯಾಯಿತು.



ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 233 ರನ್​ಗಳ ಬಾರಿಸಿತು. ಬೃಹತ್ ಮೊತ್ತವನ್ನು ಚೇಸ್ ಮಾಡಲು ಯತ್ನಿಸಿದ ಶ್ರೀಲಂಕಾದ ಬ್ಯಾಟ್ಸ್ ಮನ್ ಗಳು 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 99 ರನ್​ ಗಳಿಸಲಷ್ಟೇ ಸಾಧ್ಯವಾಯಿತು.

Story first published: Sunday, October 27, 2019, 20:06 [IST]
Other articles published on Oct 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X