ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್ ಬಳಿ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್

Slapgate Incident: Harbhajan Singh Apologizes To S Sreesanth 14 Years After

2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ಸಂಭವಿಸಿದ ಕಪಾಳಮೋಕ್ಷ ಪ್ರಕರಣ (ಸ್ಲ್ಯಾಪ್‌ಗೇಟ್) ಘಟನೆಗಾಗಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎಸ್. ಶ್ರೀಶಾಂತ್‌ಗೆ ಕ್ಷಮೆಯಾಚಿಸಿದ್ದಾರೆ.

2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ಸಂಭವಿಸಿದ 'ಕಪಾಳಮೋಕ್ಷ ಪ್ರಕರಣ' ಘಟನೆಗಾಗಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಮ್ಮದೇ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ಕಿಂಗ್ಸ್ XI ಪಂಜಾಬ್ (ಪಂಜಾಬ್ ಕಿಂಗ್ಸ್) ವಿರುದ್ಧದ ಪಂದ್ಯದಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಹರ್ಭಜನ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಮೊಹಾಲಿಯಲ್ಲಿ ಪಂಜಾಬ್ 66 ರನ್‌ಗಳಿಂದ ಗೆದ್ದ ನಂತ, ಕೊನೆಯಲ್ಲಿ ಕೇರಳದ ಬೌಲರ್ ಅವರನ್ನು ಭೇಟಿಯಾದಾಗ ಮುಂಬೈ ಇಂಡಿಯನ್ಸ್ ಬ್ಯಾಟರ್ ಜೊತೆ ಶ್ರೀಶಾಂತ್ ಆಕ್ರಮಣಕಾರಿ ನಡೆದುಕೊಂಡಿದ್ದರ ಬಗ್ಗೆ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಆಕ್ರೋಶಗೊಂಡರು ಮತ್ತು ಅವರ ಕೋಪವನ್ನು ಕಪಾಳಮೋಕ್ಷ ಮೂಲಕ ಹೊರಹಾಕಿದರು.

Slapgate Incident: Harbhajan Singh Apologizes To S Sreesanth 14 Years After

ಈ ಘಟನೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ ಜನರು, ಹರ್ಭಜನ್ ಸಿಂಗ್‌ರಿಂದ ಕಪಾಳಮೋಕ್ಷ ಮಾಡಿದ ನಂತರ ಭಾವುಕರಾದ ಎಸ್. ಶ್ರೀಶಾಂತ್‌ನ ಚಿತ್ರಗಳನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಶನಿವಾರದಂದು ಹರ್ಭಜನ್ ಸಿಂಗ್ ಗ್ಲಾನ್ಸ್ ಲೈವ್ ಫೆಸ್ಟ್‌ನಲ್ಲಿ ಕ್ರಿಕೆಟ್ ನಿರೂಪಕ ವಿಕ್ರಮ್ ಸಾಥಾಯೆ ಅವರೊಂದಿಗೆ ವಿಡಿಯೋ ಚಾಟ್‌ನಲ್ಲಿ ಎಸ್. ಶ್ರೀಶಾಂತ್ ಜೊತೆ ಸೇರಿಕೊಂಡರು ಮತ್ತು ಘಟನೆಯ ಬಗ್ಗೆ ಅವರು ಎಷ್ಟು "ಮುಜುಗರ' ಅನುಭವಿಸಿದ್ದಾರೆಂದು 14 ವರ್ಷಗಳ ಬಳಿಕ ಬಹಿರಂಗಪಡಿಸಿದರು.

"ಅಂದು ನಡೆದದ್ದು ತಪ್ಪಾಗಿದೆ. ನಾನು ತಪ್ಪು ಮಾಡಿದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಸಹ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಬೇಕಾದರೆ ಮೈದಾನದಲ್ಲಿ ಶ್ರೀಶಾಂತ್ ಅವರನ್ನು ನಾನು ಹೇಗೆ ನಡೆಸಿಕೊಂಡೆ. ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗ, ಅದರ (ಕಪಾಳಮೋಕ್ಷ) ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಹರ್ಭಜನ್ ಸಿಂಗ್ ಹೇಳಿದರು.

Mohammad Siraj ಅಂದು Riyan Paragಗೆ ಹಾಗೆ ಹೇಳಿದ್ದೇಕೆ | OneIndia Kannada

ಇಬ್ಬರು ಕ್ರಿಕೆಟಿಗರು ಆನಂತರ 2008ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಹರ್ಭಜನ್ ಭಾರತದ ಪರ 367 ಅಂತರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 711 ವಿಕೆಟ್ ಪಡೆದಿದ್ದರೆ, ಎಸ್. ಶ್ರೀಶಾಂತ್ 90 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 169 ವಿಕೆಟ್ ಪಡೆದಿದ್ದಾರೆ. ಈಗ ಇಬ್ಬರೂ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.

Story first published: Monday, June 6, 2022, 9:37 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X