ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶ್ರೀಲಂಕಾ ವೇಗಿ ಮಧುಶಂಕಾ ಅಮಾನತು

SLC suspends pacer Shehan Madushanka from all forms of cricket

ಕೊಲಂಬೋ, ಮೇ 26: ಯುವ ವೇಗಿ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. ಪ್ರತಿಭಾನ್ವಿತ ಆಟಗಾರ ಮಧುಶಂಕಾ ಅಕ್ರಮ ಡ್ರಗ್ ಹೊಂದಿರುವುದಾಗಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ (ಮೇ 26) ಅಮಾನತು ಗೊಳಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.

'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!

'ಈ ಕೂಡಲೇ ಶೆಹನ್ ಮಧುಶಂಕಾ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ ನಿರ್ಧರಿಸಿದೆ. ಅಕ್ರಮ ಡ್ರಗ್ ಹೊಂದಿದ್ದ ಆರೋಪದಡಿಯಲ್ಲಿ ಮಧುಶಂಕಾ ಅವರನ್ನು ಪೊಲೀಸರು ಬಂದಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತಾಳಲಾಗಿದೆ,' ಎಂದು ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ 'ಕ್ರಿಕೆಟ್‌ ಎಲ್‌ಕೆ'ಯಲ್ಲಿ ಬರೆಯಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

'ಈ ಬಗ್ಗೆ ಎಸ್‌ಎಲ್‌ಸಿ ಪೂರ್ಣ ವಿಚಾರಣೆ ನಡೆಸುವವರೆಗೆ ಅಮಾನತುಗೊಳಿಸುವ ನಿರ್ಧಾರ ಹಾಗೇ ಇರುತ್ತದೆ,' ಎಂದು ವೆಬ್‌ಸೈಟ್‌ನಲ್ಲಿ ಬರೆದಿದೆ. ಸೈಕ್ಲೋನ್ ಟುಡೇ ನ್ಯೂಸ್‌ಪೇಪರ್‌ನ ಪ್ರಕಾರ, ಲಂಕಾ ನಗರ ಪನ್ನಾಲದಲ್ಲಿ ಮಧುಶಂಕಾ ಅವರನ್ನು ಪೊಲೀಸರು ಬಂಧಿಸುವಾಗ 2 ಗ್ರಾಮ್‌ನಷ್ಟು ಹೆರಾಯಿನ್ ಪತ್ತೆಯಾಗಿತ್ತು.

ಈ ದಿನ ಅಂದು 1999: ಲಂಕಾ ವಿರುದ್ಧ ಗಂಗೂಲಿ, ದ್ರಾವಿಡ್ 312 ರನ್‌ಗಳ ವಿಶ್ವದಾಖಲೆಯ ಜೊತೆಯಾಟಈ ದಿನ ಅಂದು 1999: ಲಂಕಾ ವಿರುದ್ಧ ಗಂಗೂಲಿ, ದ್ರಾವಿಡ್ 312 ರನ್‌ಗಳ ವಿಶ್ವದಾಖಲೆಯ ಜೊತೆಯಾಟ

ಬಾಂಗ್ಲಾದೇಶ, ಪಾಕಿಸ್ತಾನ ನಡುವಣ ತ್ರಿಕೋನ ಸರಣಿಯಲ್ಲಿ ಲಂಕಾ ತಂಡಕ್ಕೆ ಶೆಹನ್ ಮಧುಶಂಕಾ ಆಯ್ಕೆಯಾಗಿದ್ದರು. ಅಸಲಿಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲೇ ಮಶ್ರಫ್ ಮೊರ್ಟಾಜಾ, ರುಬೆಲ್ ಹೊಸೈನ್ ಮತ್ತು ಮಹಮದುಲ್ಲ ವಿಕೆಟ್‌ಗಳನ್ನು ಮುರಿದು ಹ್ಯಾಟ್ರಿಕ್ ದಾಖಲೆಯೊಂದಿಗೆ ಮಧುಶಂಕಾ ಮಿಂಚಿದ್ದರು.

Story first published: Tuesday, May 26, 2020, 20:12 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X