ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟನ್ನು ವೀರೇಂದ್ರ ಸೆಹ್ವಾಗ್ ರೋಮ್ಯಾನ್ಸ್‌ಗೆ ಹೋಲಿಸಿದ್ದೇಕೆ?

Virendra Sehwag compares test cricket to Romance | VIRENDRA SEHWAG | TEST | ONEINDIA KANNADA
Small Innovations Are Fine, But Five Day Test Cricket Is Romance, States Virender Sehwag

ಕ್ರಿಕೆಟ್‌ನಲ್ಲಿ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಡೇ-ನೈಟ್‌ ಟೆಸ್ಟ್‌ನ ನಂತರ ಇದೀಗ ನಾಲ್ಕು ದಿನಗಳ ಟೆಸ್ಟ್‌ ಸರಣಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಮಾಜಿ ಹಾಲಿ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಗುಂಪಿಗೆ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಸೇರ್ಪಡೆಯಾಗಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಇತ್ತೀಚೆಗಷ್ಟೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಈ ಪ್ರಸ್ತಾಪಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದೀಗ ವಿರೇಂದ್ರ ಸೆಹ್ವಾಗ್ ಕೂಡ ಇದೇ ರೀತಿ ವಿರೋಧವನ್ನು ವ್ಯಕ್ತ ಪಡಿಸಿ ಹೇಳಿಕೆಯನ್ನು ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ದೇವರ ದೊಡ್ಡ ದಾಖಲೆ ಮೇಲೆ ಕೊಹ್ಲಿ ಕಣ್ಣು!ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ದೇವರ ದೊಡ್ಡ ದಾಖಲೆ ಮೇಲೆ ಕೊಹ್ಲಿ ಕಣ್ಣು!

ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ 4 ದಿನದ ಟೆಸ್ಟ್‌ ಪಂದ್ಯಕ್ಕೆ ವಿರೋಧವನ್ನು ವ್ಯಕ್ತ ಪಡಸಿದ್ದಾರೆ. ಐದು ದಿನದ ಟೆಸ್ಟ್‌ ಕ್ರಿಕೆಟ್‌ನ ಅಂತ್ಯವಾಗಿಲ್ಲ. ಅದು 143 ವರ್ಷಗಳ ಹಳೆಯ ಬಲಿಷ್ಟ ವ್ಯಕ್ತಿತ್ವ. ಅದಕ್ಕೊಂದು ಆತ್ಮವಿದೆ. ನಾಲ್ಕು ದಿನಗಳ ಚಂದಿರನ ಬೆಳಕು ಚಂದ, ಟೆಸ್ಟ್‌ ಕ್ರಿಕೆಟ್‌ ಅಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.

ಬದಲಾವಣೆಗೆ ತಾನು ವಿರೋಧಿಯಲ್ಲ ಎಂದು ಸೆಹ್ವಾಗ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದು, ಟೀಮ್ ಇಂಡಿಯಾದ ಮೊದಲ ಟಿ20 ಪಂದ್ಯದ ನಾಯಕನಾಗಿದ್ದೆ. ಮೊದಲ ವಿಶ್ವಕಪ್ ಗೆದ್ದ ತಂಡದ ಸದಸ್ಯನೂ ಆಗಿದ್ದೆ. ಐದು ದಿನಗಳ ಕ್ರಿಕೆಟ್‌ ಅಂದ್ರೆ ಅದು ರೋಮ್ಯಾನ್ಸ್ ರೀತಿ. ಪಿಂಕ್ ಬಾಲ್ ಟೆಸ್ಟ್, ಜರ್ಸಿಯಲ್ಲಿ ಹೆಸರು ಸೆರ್ಪಡೆಯಂತಾ ಬದಲಾವಣೆಗಳು ಪೂರಕವಾಗಿದೆ. ಆದರೆ ನಾಲ್ಕು ದಿನಗಳ ಟೆಸ್ಟ್‌ ಟೆಸ್ಟ್‌ನ ಕಾಲ ಅಂತ್ಯವಾಯಿತು ಎನ್ನುವಾಗ ಆಗಬೇಕು ಈಗ ಅಲ್ಲ ಎಂದಿದ್ದಾರೆ.

ಭಾರತ vs ಶ್ರೀಲಂಕಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!ಭಾರತ vs ಶ್ರೀಲಂಕಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!

ಕಳೆದವಾರವಷ್ಟೇ ಟೀಮ್ ಇಂಡಿಯಾದ ಮತ್ತೋರ್ವ ಮಾಜಿ ಆಟಗಾರ ಅನಿಲ್ ಕುಂಬ್ಳೆ ಈ ವಿಚಾರವಾಗ ಐಸಿಸಿ ತನ್ನ ಮುಂದಿನ ಸಭೆಯಲ್ಲಿ ಚರ್ಚೆಯನ್ನು ನಡೆಸಲಿದೆ ಎಂಬ ಸುಳಿವನ್ನು ನೀಡಿದ್ದರು. ಕುಂಬ್ಳೆ ನೀಡಿದ ಮಾಹಿತಿಯ ಪ್ರಕಾರ ಮುಂದಿನ ಮಾರ್ಚ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಐಸಿಸಿ ಸ್ಪಷ್ಟ ಚರ್ಚಿಸಿ ಈ ಚರ್ಚೆಗೆ ಅಂತ್ಯ ಹಾಡುವ ಸಾಧ್ಯತೆಯಿದೆ.

Story first published: Monday, January 13, 2020, 20:48 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X