ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕ

SMAT 2021-22: Karnataka registered their third victory after winning against services

ಒಂದೆಡೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದರೆ ಮತ್ತೊಂದೆಡೆ ದೇಸಿ ಚುಟುಕು ಕ್ರಿಕೆಟ್ ಸಮರ ಎಂದೇ ಖ್ಯಾತಿಯನ್ನು ಪಡೆದಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ನಡೆಯುತ್ತಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2021 - 22ರಲ್ಲಿ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಸತತವಾಗಿ 3 ಪಂದ್ಯಗಳಲ್ಲಿ ಗೆಲ್ಲುವುದರ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

SMAT 2021-22: ಶರತ್-ಕಾರಿಯಪ್ಪ ಅಬ್ಬರ, 28 ಎಸೆತಗಳಲ್ಲಿ 68 ರನ್!; ಕರ್ನಾಟಕಕ್ಕೆ ಸತತ ಎರಡನೇ ಜಯSMAT 2021-22: ಶರತ್-ಕಾರಿಯಪ್ಪ ಅಬ್ಬರ, 28 ಎಸೆತಗಳಲ್ಲಿ 68 ರನ್!; ಕರ್ನಾಟಕಕ್ಕೆ ಸತತ ಎರಡನೇ ಜಯ

ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಮುಂಬೈ ವಿರುದ್ಧ ಆಡಿದ ಕರ್ನಾಟಕ 9 ರನ್‌ಗಳ ರೋಚಕ ಗೆಲುವನ್ನು ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿತ್ತು. ಹೀಗೆ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿಯೇ ಜಯ ಗಳಿಸಿದ್ದ ಕರ್ನಾಟಕ ತನ್ನ ದ್ವಿತೀಯ ಪಂದ್ಯದಲ್ಲಿಯೂ ಕೂಡ ಛತ್ತೀಸ್ ಗಢ ವಿರುದ್ಧ 4 ವಿಕೆಟ್‍ಗಳ ರೋಚಕ ಗೆಲುವನ್ನು ದಾಖಲಿಸಿತ್ತು. ಇನ್ನು ಇಂದು ( ನವೆಂಬರ್‌ 6 ) ಸರ್ವಿಸಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಕೂಡ ಕರ್ನಾಟಕ 33 ರನ್‌ಗಳ ದೊಡ್ಡ ಗೆಲುವನ್ನು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಿದೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮತ್ತು ಸರ್ವಿಸಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸರ್ವಿಸಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಟಿ20 ವಿಶ್ವಕಪ್: ರಾಹುಲ್ ದಾಖಲೆ, ಭಾರತಕ್ಕೆ ಭರ್ಜರಿ ಜಯ; ಸೆಮಿಫೈನಲ್‌ ಪ್ರವೇಶಕ್ಕೆ ಇದೊಂದೇ ಮಾರ್ಗ!ಟಿ20 ವಿಶ್ವಕಪ್: ರಾಹುಲ್ ದಾಖಲೆ, ಭಾರತಕ್ಕೆ ಭರ್ಜರಿ ಜಯ; ಸೆಮಿಫೈನಲ್‌ ಪ್ರವೇಶಕ್ಕೆ ಇದೊಂದೇ ಮಾರ್ಗ!

ಹೀಗೆ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 6 ಮತ್ತು ಮಯಾಂಕ್ ಅಗರ್ವಾಲ್ 28 ರನ್ ಗಳಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮನೀಷ್ ಪಾಂಡೆ 51 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನು ಆಡಿದರು. ಇನ್ನುಳಿದಂತೆ ಕರುಣ್ ನಾಯರ್ 6, ಅನಿರುದ್ಧ ಜೋಶಿ 23, ಕೃಷ್ಣಪ್ಪ ಗೌತಮ್ 7, ಶರತ್ ಬಿಆರ್ ಅಜೇಯ 7 ಮತ್ತು ಜಗದೀಶ್ ಸುಚಿತ್ ಅಜೇಯ 6 ರನ್ ಕಲೆ ಹಾಕಿದರು. ಈ ಮೂಲಕ ಕರ್ನಾಟಕ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.

ಬ್ಯಾಟಿಂಗ್‌ನಲ್ಲಿ ಎಡವಿದ ಸರ್ವಿಸಸ್

ಬ್ಯಾಟಿಂಗ್‌ನಲ್ಲಿ ಎಡವಿದ ಸರ್ವಿಸಸ್

ಕರ್ನಾಟಕ ತಂಡ ನೀಡಿದ 143 ರನ್‌ಗಳ ಗುರಿಯನ್ನು ಬೆನ್ನತ್ತಿದ ಸರ್ವಿಸಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಸರ್ವಿಸಸ್ ಪರ ರವಿ ಚವ್ಹಾಣ್ 4, ಲಖನ್ ಸಿಂಗ್ 0, ನಾಯಕ ಜಿ ರಾಹುಲ್ ಸಿಂಗ್ 34, ರಜತ್ ಪಲಿವಾಲ್ 12, ಮೋಹಿತ್ ಅಹಲಾವತ್ 0, ಅಮಿತ್ ಪಚ್ಚಾರ 23, ದಿವೇಶ್ ಪಠಾಣಿಯಾ 14, ಸಚ್ಚಿದಾನಂದ ಪಾಂಡೆ 8, ವಿಕಾಸ್ ಯಾದವ್ ಅಜೇಯ 1 ಮತ್ತು ರಾಹುಲ್ ಸಿಂಗ್ ಅಜೇಯ 5 ರನ್ ಕಲೆ ಹಾಕಿದರು. ಈ ಮೂಲಕ ಸರ್ವಿಸಸ್ ತಂಡದ ಪರ ಯಾವೊಬ್ಬ ಆಟಗಾರನೂ ಕೂಡ ಅಬ್ಬರದ ಬ್ಯಾಟಿಂಗ್ ನಡೆಸದ ಕಾರಣ ಕರ್ನಾಟಕ ವಿರುದ್ಧ ಸರ್ವಿಸಸ್ ಸೋಲುಂಡಿದೆ.

ಕರ್ನಾಟಕ ಬೌಲರ್‌ಗಳ ಅದ್ಭುತ ಪ್ರದರ್ಶನ

ಕರ್ನಾಟಕ ಬೌಲರ್‌ಗಳ ಅದ್ಭುತ ಪ್ರದರ್ಶನ

ಕರ್ನಾಟಕ ಸರ್ವಿಸಸ್ ತಂಡಕ್ಕೆ ಗೆಲ್ಲಲು 143 ರನ್‌ಗಳ ಸಾಧಾರಣ ಗುರಿಯನ್ನು ನೀಡಿದ್ದರೂ ಸಹ ಸರ್ವಿಸಸ್ ತಂಡ ಆ ಗುರಿಯನ್ನು ಮುಟ್ಟುವಲ್ಲಿ ವಿಫಲವಾಯಿತು. ಸರ್ವಿಸಸ್ ತಂಡದ ಮೇಲೆ ಕರ್ನಾಟಕ ಬೌಲರ್‌ಗಳು ನಡೆಸಿದ ಅದ್ಭುತ ಬೌಲಿಂಗ್ ದಾಳಿಯಿಂದ ಸರ್ವಿಸಸ್ ತಂಡವನ್ನು ಕೇವಲ 109 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಕರ್ನಾಟಕ ಯಶಸ್ವಿಯಾಯಿತು. 20 ಓವರ್‌ಗಳಲ್ಲಿ ಸರ್ವಿಸಸ್ ತಂಡದ 8 ವಿಕೆಟ್‍ಗಳನ್ನು ಪಡೆದ ಕರ್ನಾಟಕ ಬೌಲರ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ತಂಡ ವಿಜಯ್ ಕುಮಾರ್ ವೈಶಾಖ್ 3 ವಿಕೆಟ್, ದರ್ಶನ್ ಎಂಬಿ 2 ವಿಕೆಟ್, ಕೃಷ್ಣಪ್ಪ ಗೌತಮ್ ಮತ್ತು ಜಗದೀಶ್ ಸುಚಿತ್ ತಲಾ 1 ವಿಕೆಟ್ ಕಬಳಿಸಿದರು.

ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಮತ್ತು ಛತ್ತೀಸ್ ಗಢ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ಇದೀಗ ಸರ್ವಿಸಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಗೆಲುವನ್ನು ಕಂಡಿದೆ. ಅಷ್ಟೇ ಅಲ್ಲದೆ 12 ಅಂಕಗಳನ್ನು ಪಡೆಯುವುದರ ಮೂಲಕ ಅಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.

Scotland ನಾಯಕನ ಕನಸನ್ನ ನನಸು ಮಾಡಿದ ವಿರಾಟ್ | Oneindia Kannada

Story first published: Saturday, November 6, 2021, 13:13 [IST]
Other articles published on Nov 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X