ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021-22: ಮುಂಬೈಯನ್ನು ಮಣಿಸಿದ ಕರ್ನಾಟಕ: ಮನೀಶ್ ಹುಡುಗರ ಭರ್ಜರಿ ಆರಂಭ

SMAT 2021-22, Karnataka won the match By 9 runs against Mumbai

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಭರ್ಜರಿ ಆರಂಭವನ್ನು ಪಡೆದಿದೆ. ಅಜಿಂಕ್ಯಾ ರಹಾನೆ ನೇತೃತ್ವದ ಮುಂಬೈ ತಂಡದ ವಿರುದ್ಧ ನಡೆದ ರೋಚಕ ಕದನದಲ್ಲಿ ಮನೀಶ್ ಪಾಂಡೆ ಬಳಗ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಕರ್ನಾಟಕ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಸವಾಲು ಸ್ವೀಕರಿಸಿದ ಕರ್ನಾಟಕ ಪರವಾಗಿ ಉತ್ತಮ ಆರಂಭ ಬರಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಮಯಾಂಕ್ ಅಗರ್ವಾಕ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ರನ್ ಗಳಿಸುವ ಮೊದಲೇ ಬೇರ್ಪಟ್ಟಿತ್ತು. ಮಯಾಂಕ್ ಪಂದ್ಯದ ಮೊದಲ ಎಸೆತದಲ್ಲಿಯೇ ಮೋಹಿತ್ ಅವಸ್ತಿ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ದೇವದತ್ ಪಡಿಕ್ಕಲ್ ಕೂಡ ತಂಡದ ಮೊತ್ತ 15 ರನ್ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದ್ದರು. ಕರ್ನಾಟಕದ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿತ್ತು.

ಟಿ20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಅಮೋಘ ಜಯ: ಸೆಮಿಫೈನಲ್ ಕನಸು ಜೀವಂತಟಿ20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಅಮೋಘ ಜಯ: ಸೆಮಿಫೈನಲ್ ಕನಸು ಜೀವಂತ

ಅನುಭವದ ಆಟವಾಡಿದ ಮನೀಶ್, ಕರುಣ್: ಈ ಸಂದರ್ಭದಲ್ಲಿ ಜೊತೆಯಾಗಿದ್ದು ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್. ಈ ಜೋಡಿ ಕರ್ನಾಟಕ ಪರವಾಗಿ ಅಮೋಘ ಜೊತೆಯಾಟವನ್ನು ನೀಡಿದರು. ಮುಂಬೈ ತಂಡದ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿರ ಈ ಜೋಡಿ ಬೃಹತ್ ಜೊತೆಯಾಟವನ್ನು ನೀಡಿದರು. ಬಹುತೇಕ ಇನ್ನಿಂಗ್ಸ್‌ನ ಕೊನೆಯ ವರೆಗೂ ಆಡಿದ್ದ ಈ ಜೋಡಿ ಇನ್ನುಂಗ್ಸ್‌ನ ಅಂತಿಮ ಓವರ್‌ನ ನಾಲ್ಕನೇ ಹಾಗೂ ಆರನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಅಷ್ಟರಲ್ಲಿ ಇವರಿಬ್ಬರು ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದರು.

ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಭರ್ಜರಿ 149 ರನ್‌ಗಳ ಜೊತೆಯಾಟವನ್ನು ತಂಡಕ್ಕೆ ನೀಡಿದರು. ನಾಯಕ ಮನೀಶ್ ಪಾಂಡೆ ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ್ದು 84 ರನ್ ಸಿಡಿಸಿದ್ದಾರೆ. ಕರುಣ್ ನಾಯರ್ 53 ಎಸೆತಗಳಲ್ಲಿ 72 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಅನುಭವಿಗಳಿಬ್ಬರು ಕರ್ನಾಟಕ ತಂಡಕ್ಕೆ ಆಸರೆಯಾದರು.

ಮುಂಬೈಗೆ ನಾಯಕ ರಹಾನೆ ಬಲ: ಇನ್ನು ಕರ್ನಾಟಕ ತಂಡ ನೀಡಿದ್ದ 167 ರನ್‌ಗಳ ಸವಾಲಿನ ಗುರಿ ಸ್ವೀಕರಿಸಿದ ಮುಂಬೈ ತಂಡ ಕೂಡ ಆರಂಭಿಕ ಆಟಗಾರ ಪೃಥ್ವಿ ಶಾ ವಿಕೆಟ್‌ಅನ್ನು ಶೀಘ್ರದಲ್ಲಿಯೇ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 13 ರನ್‌ಗಳ ಕೊಡುಗೆ ನೀಡಲಷ್ಟೇ ಶಕ್ತವಾದರು. ಆದರೆ ಮತ್ತೊಂದು ತುದಿಯಲ್ಲಿ ನಾಯಕ ಅಜಿಂಕ್ಯಾ ರಹಾನೆ ಏಕಾಂಗಿಯಾಗಿ ಹೋರಾಡುತ್ತಾ ಸಾಗಿದರು. ಮೂರನೇ ವಿಕೆಟ್‌ಗೆ ರಹಾನೆಗೆ ಸಿದ್ದೇಶ್ ಲಾಡ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಪಂದ್ಯವನ್ನು ಕರ್ನಾಟಕದಿಂದ ಕಸಿಯುವಂತೆ ಕಾಣಿಸಿತ್ತು. ಈ ಸಂದರ್ಭದಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ್ದ ಕೆ ಗೌತಮ್. ಸಿದ್ದೇಶ್ ಲಾಡ್ 32 ರನ್‌ಗಳಸಿ ಔಟಾದರು. ಈ ಸಂದರ್ಭದಲ್ಲಿ ಮುಂಬೈ ತಂಡ 15.2 ಓವರ್‌ಗಳಲ್ಲಿ 125 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಮಾಡಿದ ಮಾರ್ಟಿನ್ ಗಪ್ಟಿಲ್ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಮಾಡಿದ ಮಾರ್ಟಿನ್ ಗಪ್ಟಿಲ್

ಮತ್ತೆ ಯಶಸ್ಸು ಸಾಧಿಸಿದ ಕರ್ನಾಟದ ಬೌಲರ್‌ಗಳು: ಈ ಜೋಡಿಯನ್ನು ಬೇರ್ಪಡಿಸಿದ ನಂತರ ಕರ್ನಾಟಕದ ಬೌಲರ್‌ಗಳು ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಆರಂಭಿಸಿದ್ದರು. ನಂತರ ನಾಲ್ಕು ರನ್ ಸೇರ್ಪಡೆಯಾಗುವಷ್ಟರಲ್ಲಿ ಮುಂಬೈ ನಾಯಕ ಅಜಿಂಕ್ಯ ರಹಾನೆ ಕೂಡ ಔಟಾದರು. 54 ಎಸೆತಗಳನ್ನು ಎದುರಿಸಿದ ಅಜಿಂಕ್ಯಾ ರಹಾನೆ 75 ರನ್‌ಗಳ ಕೊಡುಗೆ ನೀಡಿದರು. ನಂತರ ಶಿವಂ ದುಬೆ ಕೂಡ 3 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದಿತ್ಯ ತಾರೆ ಹಾಗೂ ಅಥರ್ವ ಅಂಕೋಲೆಕರ್ ಅವರು ಹೆಚ್ಚಿನ ರನ್ ಗಳಿಸದಂತೆ ನೋಡಿಕೊಳ್ಳುವಲ್ಲಿ ಕರ್ನಾಟಕ ಬೌಲರ್‌ಗಳು ಯಶಸ್ವಿಯಾದರು. ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 157 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಕರ್ನಾಟಕಕ್ಕೆ ಶರಣಾಯಿತು.

ಮಿಂಚಿದ ಬೌಲಿಂಗ್ ಪಡೆ: ಈ ಗೆಲುವಿನೊಂದಿಗೆ ದೇಶೀಯ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಮುಂಬೈ ವಿರುದ್ಧ ಕರ್ನಾಟಕ ಗೆಲುವಿನ ಅಂತರವನ್ನು 4-1ಕ್ಕೆ ಹೆಚ್ಚಿಸಿಕೊಂಡಿದೆ. ಬೌಲಿಂಗ್‌ನಲ್ಲಿ ಕರ್ನಾಟಕದ ಪರವಾಗಿ ಕೆಸಿ ಕರಿಯಪ್ಪ 26 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಕೆ ಗೌತನ್ ಕೂಡ ಇಷ್ಟೇ ರನ್ ನೀಡಿ 2 ವಿಕೆಟ್ ಸಂಪಾದಿಸಿದರು. ಮೊದಲ ಪಂದ್ಯವನ್ನಾಡಿದ ವಿದ್ಯಾಧರ್ ಪಾಟೀಲ್ ರನ್‌ ನಿಯಂತ್ರದಲ್ಲಿಯೂ ಮಿಂಚಿದ್ದು 1 ವಿಕೆಟ್ ಕೂಡ ಪೊಡೆದುಕೊಂಡಿದ್ದಾರೆ. ಭರವಸೆಯ ಬೌಲರ್ ಪ್ರಸಿದ್ಧ್ ಕೃಷ್ಣ ಮಾತ್ರ ನಾಲ್ಕು ಓವರ್‌ಗಳ ಕೋಟಾದಲ್ಲಿ 41 ರನ್ ನೀಡುವ ಮೂಲಕ ದುಬಾರಿ ಎನಿಸಿದ್ದಾರೆ.

ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ಅನಿರುದ್ಧ ಜೋಶಿ, ಪ್ರತೀಕ್ ಜೈನ್, ಕೆಸಿ ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ
ಬೆಂಚ್: ರೋಹನ್ ಕದಂ, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಜಗದೀಶ ಸುಚಿತ್, ವಿಜಯ್‌ಕುಮಾರ್ ವೈಶಾಕ್, ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೃಷ್ಣಮೂರ್ತಿ ಸಿದ್ಧಾರ್ಥ್, ದರ್ಶನ್ ಎಂ.ಬಿ.

ಮುಂಬೈ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಅಜಿಂಕ್ಯ ರಹಾನೆ (ನಾಯಕ), ಆದಿತ್ಯ ತಾರೆ (ವಿಕೆಟ್ ಕೀಪರ್), ಶಿವಂ ದುಬೆ, ತುಷಾರ್ ದೇಶಪಾಂಡೆ, ಸಿದ್ಧೇಶ್ ಲಾಡ್, ಅಥರ್ವ ಅಂಕೋಲೆಕರ್, ಅಮನ್ ಹಕೀಮ್ ಖಾನ್, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ
ಬೆಂಚ್: ಧವಳ್ ಕುಲಕರ್ಣಿ, ರಾಯ್ಸ್ಟನ್ ಡಯಾಸ್, ಅರ್ಮಾನ್ ಜಾಫರ್, ಸಾಯಿರಾಜ್ ಪಾಟೀಲ್, ಪ್ರಶಾಂತ್ ಸೋಲಂಕಿ, ಹಾರ್ದಿಕ್ ತಮೋರ್, ದೀಪಕ್ ಶೆಟ್ಟಿ

Team Indiaಗೆ ಸಿಕ್ಕೇಬಿಡ್ತು ಸೆಮಿಫೈನಲ್ ಗೆ ಎಂಟ್ರಿಯಾಗೋ ಅವಕಾಶ | Oneindia Kannada

Story first published: Thursday, November 4, 2021, 16:42 [IST]
Other articles published on Nov 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X