ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021 ಫೈನಲ್ : ಟಾಸ್ ಗೆದ್ದ ತಮಿಳುನಾಡು ಬೌಲಿಂಗ್ ಆಯ್ಕೆ, ಕರ್ನಾಟಕ ಬ್ಯಾಟಿಂಗ್

SMAT FINAL

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಟಾಸ್‌ ಗೆದ್ದ ತಮಿಳುನಾಡು ತಂಡ ಬೌಲಿಂಗ್ ಆಯ್ಕೆಗೊಂಡಿದೆ. ಪರಿಣಾಮ ಕರ್ನಾಟಕ ತಂಡವು ಮೊದಲ ಬ್ಯಾಟಿಂಗ್ ಮಾಡಲಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉಭಯ ತಂಡಗಳು ಕೆಲ ಬದಲಾವಣೆ ಮಾಡಿದ್ದು, ಕರ್ನಾಟಕ ಎರಡು ಆಟಗಾರರನ್ನು ಬದಲಾವಣೆ ಮಾಡಿದ್ದು, ತಮಿಳುನಾಡು ಪರ ಟಿ. ನಟರಾಜನ್ ಕಂಬ್ಯಾಕ್ ಮಾಡಿದ್ದಾರೆ.

ಟಿ20 ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ಎರಡು ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗಿವೆ. ಕಳೆದ ಬಾರಿ 2019-20ರಲ್ಲಿ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಾಗಿದ್ದವು. ಈ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಮೇಲುಗೈ ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಫೈನಲ್‌ನಲ್ಲಿ ಆಡುತ್ತಿರುವ ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗಿದೆ:

ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಕೆಸಿ ಕರಿಯಪ್ಪ, ದರ್ಶನ್ ಎಂಬಿ, ಪ್ರವೀಣ್ ದುಬೆ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ಶರತ್ ಬಿಆರ್, ಜಗದೇಶ ಸುಚಿತ್, ಪ್ರತೀಕ್ ಜೈನ್

ತಮಿಳುನಾಡು ತಂಡ: ವಿಜಯ ಶಂಕರ್ (ನಾಯಕ), ಹರಿನಿಶಾಂತ್, ಎನ್. ಜಗದೀಶನ್ (ವಿಕೆಟ್ ಕೀಪರ್), ಸಂಜಯ್ ಯಾದವ್, ಶಾರುಖ್ ಖಾನ್, ಎಂ ಮೊಹಮ್ಮದ್, ಮುರುಗನ್ ಅಶ್ವಿನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸಂದೀಪ್ ವಾರಿಯರ್, ಟಿ ನಟರಾಜನ್

Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!

ತಮಿಳುನಾಡು ಒಟ್ಟಾರೆ ನಾಲ್ಕನೇ ಬಾರಿ ಹಾಗೂ ಸತತ ಮೂರನೇ ಬಾರಿಗೆ SMAT ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ತಮಿಳುನಾಡು ತಂಡ ಟ್ರೋಫಿಯನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದೆ.

ಕರ್ನಾಟಕ ತಂಡವು ಅನನುಭವಿ ಬೌಲಿಂಗ್ ತಂಡವನ್ನು ಹೊಂದಿದ್ದು, ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಮನೀಷ್ ಪಾಂಡೆ , ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್ ಉತ್ತಮ ಲಯದಲ್ಲಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಜೊತೆಗೆ ಮನೀಷ್‌ರ ಚುರುಕು ಫೀಲ್ಡಿಂಗ್ ಕಾಣಬಹುದು.

ಇನ್ನು ವಿಜಯ್ ಶಂಕರ್ ನಾಯಕತ್ವದ ತಮಿಳುನಾಡು ತಂಡಕ್ಕೆ ಶಾರೂಖ್ ಖಾನ್, ನಾಯಕ ವಿಜಯ್ ಶಂಕರ್, ಎಸ್‌. ಜಗದೀಶನ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲರು. ಇನ್ನು ಸೆಮಿಫೈನಲ್‌ನಲ್ಲಿ ಐದು ವಿಕೆಟ್ ಪಡೆದ ಪಿ. ಸರವಣನ್ ಮತ್ತು ಸಂದೀಪ್ ವರಿಯರ್ ಪ್ರಮುಖ ಬೌಲರ್‌ಗಳಾಗಿದ್ದು, ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಟಿ. ನಟರಾಜನ್ ಫೈನಲ್‌ನಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ.

ಇನ್ನೊಂದು ವಿಶೇಷ ಏನಂದ್ರೆ ಕರ್ನಾಟಕ ತಂಡವು 2017ರಿಂದ ತಮಿಳುನಾಡು ತಂಡದ ವಿರುದ್ಧ ಸೋಲನ್ನ ಕಾಣದಿರುವುದು ವಿಶೇಷ. ಹೀಗಾಗಿ 2021ರ ಟೂರ್ನಿಯಲ್ಲೂ ಈ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಛಲದಲ್ಲಿದೆ.

ಉಭಯ ತಂಡಗಳು ಇದುವರೆಗೂ 10 ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಕರ್ನಾಟಕ 6 ಪಂದ್ಯದಲ್ಲಿ ಜಯ ಸಾಧಿಸಿದರೆ, ತಮಿಳುನಾಡು 3 ಪಂದ್ಯವನ್ನ ಗೆದ್ದಿದೆ ಮತ್ತು 1 ಪಂದ್ಯ ಟೈ ಆಗಿದೆ.

Story first published: Monday, November 22, 2021, 15:20 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X