ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021: ಪ್ರಿ ಕ್ವಾರ್ಟರ್ ಫೈನಲ್: ಕರ್ನಾಟಕ vs ಸೌರಾಷ್ಟ್ರ, ಟಾಸ್ ರಿಪೋರ್ಟ್, ಆಡುವ ಬಳಗ

SMAT-2021, Pre Quarter Final 2 Karnataka vs Saurashtra, Toss report and Playing XI

ಸಯ್ಯದ್ ಮುಷ್ತಾಕ್ ಟ್ರೋಫಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಟಾಸ್ ಗೆಲ್ಲುವಲ್ಲಿ ವಿಫಲವಾಗಿದ್ದು ಮೊದಲಿಗೆ ಬೌಲಿಂಗ್ ದಾಳಿ ನಡೆಸುವ ಸವಾಲು ಸ್ವೀಕರಿಸಿದೆ. ಸೌರಾಷ್ಟ್ರ ತಂಡದ ನಾಯಕ ಜಯ್‌ದೇವ್ ಉನಾದ್ಕಟ್ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಪಂದ್ಯ ಎರಡು ತಂಡಗಳಿಗೂ ಅಕ್ಷರಶಃ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆಲುವು ಸಾಧಿಸಿದ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡರೆ ಸೋತ ತಂಡ ತನ್ನ ಹೋರಾಟವನ್ನು ಇಲ್ಲಿಗೆ ಅಂತ್ಯಗೊಳಿಸಲಿದೆ. ಹೀಗಾಗಿ ಇಂದಿನ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ನಾಯಕ ಮನೀಶ್ ಪಾಂಡೆ, ಅನುಭವಿ ಆಟಗಾರ ಕರುಣ್ ನಾಯರ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
9917-nonopta-202197

SMAT 2021: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ: ಪಂದ್ಯದ ಆರಂಭ, ನೇರಪ್ರಸಾರದ ಮಾಹಿತಿSMAT 2021: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ: ಪಂದ್ಯದ ಆರಂಭ, ನೇರಪ್ರಸಾರದ ಮಾಹಿತಿ

'ಎಲೈಟ್ ಗ್ರೂಪ್ ಬಿ'ಯಲ್ಲಿ ಇದ್ದ ಕರ್ನಾಟಕ ಲೀಗ್ ಹಂತದಲ್ಲಿ 16 ಅಂಕಗಳನ್ನು ಗಳಿಸುವ ಮೂಲಕ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಕರ್ನಾಟಕ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬೆಂಗಾಲ್ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಮಾತ್ರವೇ ಕರ್ನಾಟಕ 7 ವಿಕೆಟ್‌ಗಳ ಅಂತರದ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಕೇವಲ 134/8 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಯಿತು. ಕರ್ನಾಟಕದ ಪರವಾಗಿ ಮನೀಶ್ ಪಾಂಡೆ ಹಾಘೂ ಕರುಣ್ ನಾಯರ್ ಮಾತ್ರವೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಈ ಗುರಿಯನ್ನು ಬೆಂಗಾಲ್ ತಂಡ 3 ವಿಕೆಟ್ ಕಳೆದುಕೊಂಡು 18 ಓವರ್‌ಗಳಲ್ಲಿ ಗುರಿ ತಲುಪಿತ್ತು

ಕರ್ನಾಟಕ ಆಡುವ ಬಳಗ: ರೋಹನ್ ಕದಂ, ಶರತ್ ಬಿಆರ್ (ವಿಕೆಟ್ ಕೀಪರ್), ಕರುಣ್ ನಾಯರ್, ಮನೀಶ್ ಪಾಂಡೆ (ನಾಯಕ), ಅನಿರುದ್ಧ ಜೋಶಿ, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ವಿ ಕೌಶಿಕ್, ವಿಜಯ್‌ಕುಮಾರ್ ವೈಶಾಕ್, ಕೆ ಸಿ ಕಾರಿಯಪ್ಪ, ಜಗದೀಶ ಸುಚಿತ್

ಬೆಂಚ್: ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಆದಿತ್ಯ ಸೋಮಣ್ಣ, ನಿಹಾಲ್ ಉಳ್ಳಾಲ್, ದರ್ಶನ್ ಎಂಬಿ, ಪ್ರತೀಕ್ ಜೈನ್, ರಿತೇಶ್ ಭಟ್ಕಳ್

ಭಾರತ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿ ಆಡಲು ಜೈಪುರಕ್ಕೆ ಬಂದಿಳಿದ ನ್ಯೂಜಿಲೆಂಡ್ಭಾರತ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿ ಆಡಲು ಜೈಪುರಕ್ಕೆ ಬಂದಿಳಿದ ನ್ಯೂಜಿಲೆಂಡ್

ಸೌರಾಷ್ಟ್ರ ಆಡುವ ಬಳಗ: ಹಿಮಾಲಯ ಬರಾದ್, ಅರ್ಪಿತ್ ವಾಸವಾಡ, ವಿಶ್ವರಾಜ್ ಜಡೇಜಾ, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಸಮರ್ಥ ವ್ಯಾಸ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಚೇತನ್ ಸಕರಿಯಾ, ಕುಶಾಂಗ್ ಪಟೇಲ್, ಧರ್ಮೇಂದ್ರಸಿನ್ಹ್ ಜಡೇಜಾ

ಬೆಂಚ್: ದಿವ್ಯರಾಜ್ ಚೌಹಾಣ್, ವಂದಿತ್ ಜೀವರಾಜನಿ, ಜಯ್ ಚೌಹಾಣ್, ಹಾರ್ವಿಕ್ ದೇಸಾಯಿ, ಪಾರ್ಥ್ ಚೌಹಾಣ್, ಪಾರ್ಥ್ ಭುತ್, ದೇವಾಂಗ್ ಕರಮ್ತಾ, ಜಯ್ ಗೋಹಿಲ್

Story first published: Wednesday, November 17, 2021, 18:15 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X