ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021 ಸೆಮಿಫೈನಲ್: ಕರ್ನಾಟಕ ವಿರುದ್ಧ ಟಾಸ್‌ ಗೆದ್ದ ವಿದರ್ಭ ಬೌಲಿಂಗ್ ಆಯ್ಕೆ

Karnataka team

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಟಾಸ್ ಗೆದ್ದು ವಿದರ್ಭ ತಂಡ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಮೊದಲು ಬೌಲಿಂಗ್ ಆಯ್ಕೆಯನ್ನು ಎದುರು ನೋಡ್ತಿದ್ದ ಕರ್ನಾಟಕ ತಂಡವು ಕ್ವಾಟರ್‌ಫೈನಲ್‌ನಲ್ಲಿ ಆಡಿದ ತಂಡವನ್ನ ಕಣಕ್ಕಿಳಿಸಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿದರ್ಭ ಕೂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.

ಕರ್ನಾಟಕ ಪ್ಲೇಯಿಂಗ್ 11:
ರೋಹನ್ ಕದಂ, ಶರತ್ ಬಿಆರ್(ವಿಕೆಟ್ ಕೀಪರ್), ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್, ಅಭಿನವ್ ಮನೋಹರ್, ಅನಿರುದ್ಧ ಜೋಶಿ, ವಿಜಯಕುಮಾರ್ ವೈಶಾಕ್, ಜಗದೀಶ ಸುಚಿತ್, ಕೆಸಿ ಕರಿಯಪ್ಪ, ವಿದ್ಯಾಧರ್ ಪಾಟೀಲ್, ದರ್ಶನ್ ಎಂ.ಬಿ.

ವಿದರ್ಭ ಪ್ಲೇಯಿಂಗ್ 11:
ಅಥರ್ವ ತೈದೆ, ಗಣೇಶ್ ಸತೀಶ್, ಅಕ್ಷಯ್ ವಾಡ್ಕರ್(ನಾಯಕ), ಶುಭಂ ದುಬೆ, ಜಿತೇಶ್ ಶರ್ಮಾ, ಅಪೂರ್ವ್ ವಾಂಖಡೆ, ಅಕ್ಷಯ್ ಕರ್ನೇವರ್, ದರ್ಶನ್ ನಲ್ಕಂಡೆ, ಲಲಿತ್ ಎಂ ಯಾದವ್, ಯಶ್ ಠಾಕೂರ್, ಅಕ್ಷಯ್ ವಾಖರೆ

ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಳ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೂಪರ್ ಓವರ್‌ನಲ್ಲಿ ಪಂದ್ಯ ಗೆದ್ದು ಸೆಮೀಸ್‌ಗೆ ಎಂಟ್ರಿ ನೀಡಿತು. ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಕರ್ನಾಟಕವು ಮೂರನೇ ಬಾರಿಗೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಕರ್ನಾಟಕವು ಈ ಮೊದಲಿನಂತೆ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಆದ್ರೆ ಈ ಬಾರಿ ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿ ಉಳಿದಿರುವ ವಿದರ್ಭ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ದೊಡ್ಡ ಸವಾಲೊಡ್ಡಲಿದೆ.

ಇನ್ನು ವಿದರ್ಭ ತಂಡವು ಅಕ್ಷಯ್ ವಾಡ್ಕರ್ ನೇತೃತ್ವದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಾ ಬಂದಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ವಿದರ್ಭ ತಂಡ ರಾಜಸ್ಥಾನ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಎದುರಾಳಿಯನ್ನ 84 ರನ್‌ಗಳಿಗೆ ಕಟ್ಟಿಹಾಕಿದ್ದ ವಿದರ್ಭ ಕರ್ನಾಟಕದೆದುರು ಅಂತಹದ್ದೇ ಪ್ರದರ್ಶನ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ವಿದರ್ಭ ಗ್ರೂಪ್ ಸ್ಟೇಜ್‌ನಲ್ಲಿ ಅಂತಹ ದೊಡ್ಡ ಮಟ್ಟದ ಸವಾಲನ್ನು ಎದುರಿಸಿಲ್ಲ.

ವಿದರ್ಭ ತಂಡದ ಬ್ಯಾಟಿಂಗ್ ಶಕ್ತಿ ಗಣೇಶ್ ಸತೀಶ್ ತಂಡದ ಕೀ ಪ್ಲೇಯರ್ ಆಗಿದ್ದಾರೆ. ಇವರ ಜೊತೆಗೆ ಅಕ್ಷಯ್ ತೈಡೆ, ಅಕ್ಷಯ್ ವಾಡಕರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಅಕ್ಷಯ್ ಕಾರ್ನೆವಾರ್ ಹಾಗೂ ಅಕ್ಷಯ್ ವಾಖರ್ ಅವರ ಬೌಲಿಂಗ್ ದಾಳಿಯ ವಿರುದ್ಧ ಕರ್ನಾಟಕ ತಂಡದ ಪ್ರದರ್ಶನ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

Story first published: Saturday, November 20, 2021, 13:13 [IST]
Other articles published on Nov 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X