ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT : ಅಬ್ಬರಿಸಿದ ರಾಬಿನ್ ಉತ್ತಪ್ಪ, ಡೆಲ್ಲಿ ವಿರುದ್ಧ ದಾಖಲೆಯ ಮೊತ್ತ ಬೆನ್ನಟ್ಟಿ ಗೆದ್ದ ಕೇರಳ

SMAT T20: Kerala won match egainst delhi Robin Uthappa attacking batting

ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ಶುಕ್ರವಾರ ಕೇರಳ ಹಾಗೂ ಡೆಲ್ಲಿ ವಿರುದ್ಧ ಹೈ ಸ್ಕೋರಿಂಗ್ ಪಂದ್ಯ ನಡೆದಿದ್ದು ಕೇರಳ ಅದ್ಭುತವಾಗಿ ಬೆನ್ನಟ್ಟುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ಸತತ ಮೂರನೇ ಗೆಲುವು ಸಾಧಿಸಿದಂತಾಗಿದೆ.

ಈ ಬಾರಿ ಕೇರಳ ತಂಡದ ರೋಚಕ ಗೆಲುವಿಗೆ ಕಾರಣವಾಗಿದ್ದು ಕನ್ನಡಿಗ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅವರ ಆಟ. ಕೇರಳ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ರಾಬಿನ್ ಉತ್ತಪ್ಪ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 9 ರನ್‌ಗಳಿಂದ ಶತಕವನ್ನು ತಪ್ಪಿಸಿಕೊಂಡರು.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

54 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ 8 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ 91 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 168.52ರ ಸರಾಸರಿಯಲ್ಲಿ ಉತ್ತಪ್ಪ ಬ್ಯಾಟ್ ಬೀಸಿದ್ದಾರೆ. ಉತ್ತಪ್ಪಗೆ ಯುವ ಆಟಗಾರ ವಿಷ್ಣು ವಿನೋದ್ ಅದ್ಭುತವಾಗಿ ಸಾಥ್ ನೀಡಿದ್ದು 38 ಎಸೆತಗಳಲ್ಲಿ 71 ರನ್ ಸಿಡಿಸಿ ಮಿಂಚಿದರು.

ಪಂದ್ಯದ ಸಂಪೂರ್ಣ ಸ್ಕೋರ್ ಕಾರ್ಡ್ ಹೀಗಿದೆ

1
9931-nonopta-202050

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಡೆಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಡೆಲ್ಲಿ ತಂಡದ ನಾಯಕ ಶಿಖರ್ ಧವನ್ 48 ಎಸೆತಗಳಲ್ಲಿ 77 ರನ್ ಸಿಡಿಸುವ ಮೂಲಕ ಅಬ್ಬರದ ಆಟ ಪ್ರದರ್ಶಿಸಿದರು. ಇನ್ನೋರ್ವ ಆಟಗಾರ ಲಲಿತ್ ಯಾದವ್ 25 ಎಸೆತಗಳಲ್ಲಿ 52 ರನ್ ಸಿಡಿಸಿ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 212 ರನ್‌ಗಳ ಬೃಹತ್ ಟಾರ್ಗೆಟ್ ಮೀಡಲು ಕಾರಣರಾದರು.

ನಿರ್ಣಾಯಕ ಟೆಸ್ಟ್‌ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್ನಿರ್ಣಾಯಕ ಟೆಸ್ಟ್‌ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್

ಆದರೆ ಈ ಮೊತ್ತವನ್ನು ಕೇರಳ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಬೆನ್ನಟ್ಟಿ ಗೆದ್ದು ಬೀಗಿದೆ. ಇದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ದಾಖಲೆ ಮೊತ್ತದ ರನ್ ಚೇಸಿಂಗ್ ಎನಿಸಿದೆ. ಇದಕ್ಕೂ ಮುನ್ನ 211 ರನ್‌ಗಳ ಗುರಿಯನ್ನು ಮೊದಲಿಗೆ ಡೆಲ್ಲಿ 2016ರಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿದರೆ 2019 ಛತ್ತೀಸ್‌ಘಡ್ ಕೂಡ ಇಷ್ಟೇ ಮೊತ್ತವನ್ನು ಬೆನ್ನಟ್ಟಿ ಗೆದ್ದಿರುವುದು ಈವರೆಗಿನ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ 28 ಸಿಕ್ಸರ್‌ಗಳು ಬಾರಿಸಲ್ಪಟ್ಟಿದ್ದು (ಡೆಲ್ಲಿ12 ಮತ್ತು ಕೇರಳ 16 ) ಸಯ್ಯದ್ ಮುಷ್ತಾಲ್ ಅಲಿ ಟ್ರೋಫಿಯ ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌ ಎನಿಸಿದೆ.

Story first published: Friday, January 15, 2021, 17:27 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X