ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಷಸ್‌ ಟೆಸ್ಟ್‌ ಸರಣಿಗೆ ಸಜ್ಜಾದ ಆಸ್ಟ್ರೇಲಿಯಾದ ಮಾಜಿ ನಾಯಕ

Smith raring to go, Khawaja expected to be fit for Ashes opener

ಸೌಥಂಪ್ಟನ್‌, ಜುಲೈ 22: ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬಾಲ್‌ ಟ್ಯಾಂಪರಿಂಗ್‌ ನಡೆಸಿ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌, ಇದೀಗ 16 ತಿಂಗಳ ಬಳಿಕ ಮರಳಿ ಟೆಸ್ಟ್‌ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದು ಇಂಗ್ಲೆಂಡ್‌ ವಿರುದ್ಧದ ಆಷಸ್‌ ಟೆಸ್ಟ್‌ ಸರಣಿಯನ್ನು ಎದುರು ನೋಡುತ್ತಿದ್ದಾರೆ.

ಇದೇ ವೇಳೆ ವಿಶ್ವಕಪ್‌ ಟೂರ್ನಿಯಲ್ಲಿ ಗಾಯಗೊಂಡಿದ್ದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಕೂಡ ಚೇತರಿಸಿದ್ದು, ಆಗಸ್ಟ್‌ 1ರಂದು ಆರಂಭವಾಗಲಿರುವ ಮೊದಲ ಟೆಸ್ಟ್‌ ಹೊತ್ತಿಗೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ನಾಯಕ ಟಿಮ್‌ ಪೇಯ್ನ್‌ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

"ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿರುವುದು ಸುಮ್ಮನೆಯೇನಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ 60ರ ಸರಾಸರಿ ಹೊಂದುವುದು ಸುಲಭದ ಮಾತಲ್ಲ. ಈಗಾಗಲೇ ಸಾವಿರಾರು ಚೆಂಡುಗಳನ್ನು ನೆಟ್ಸ್‌ನಲ್ಲಿ ಎದುರಿಸಿ ಸಜ್ಜಾಗುತ್ತಿದ್ದಾರೆ. ಕೋಚ್‌ಗೆ ಚೆಂಡನ್ನು ಎಸೆದೂ ಎಸೆದು ಕೈ ನೋವಾಗಿದೆ. ಅಷ್ಟು ಕಟ್ಟು ನಿಟ್ಟಿನ ಅಭ್ಯಾಸದಲ್ಲಿ ಸ್ಮಿತ್‌ ನಿರತರಾಗಿದ್ದಾರೆ. ತಂಡಕ್ಕೆ ಸ್ಮಿತ್‌, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಅವರ ಸೇರ್ಪಡೆಯಾಗಿರುವುದು ಅದ್ಭುತವಾಗಿದೆ," ಎಂದು ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಕೇಪ್‌ ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟ್ಯಾಂಪರಿಂಗ್‌ ನಡೆಸಿ ಅದರ ಹೊಣೆ ಹೊತ್ತ ಅಂದಿನ ನಾಯಕ ಮತ್ತು ಉಪನಾಯಕ ಸ್ಮಿತ್‌ ಹಾಗೂ ವಾರ್ನರ್‌ ಜೊತೆಗೆ ಚೆಂಡನ್ನು ವಿರೂಪಗೊಳಿಸಿದ್ದ ಬ್ಯಾಂಕ್ರಾಫ್ಟ್‌ ಆಸೀಸ್‌ ತಂಡಕ್ಕೆ ಮರಳಿರುವುದರ ಕುರಿತಾಗಿ ಪೇಯ್ನ್‌ ಮಾತನಾಡಿದ್ದಾರೆ.

ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!

ಇತ್ತೀಚೆಗಷ್ಟೇ ಅಂತ್ಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ಸ್‌ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇದೀಗ ವಿಶ್ವಕಪ್‌ ವೈಫಲ್ಯವನ್ನು ಮರೆತು ನೂತನ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್‌ ಎದುರು ಆಷಸ್‌ ಟೆಸ್ಟ್‌ ಸರಣಿ ಗೆಲ್ಲುವುದನ್ನು ಕಾಂಗರೂ ಪಡೆ ಎದುರು ನೋಡುತ್ತಿದೆ.

ಇದಕ್ಕೆ ಪೂರ್ವ ಸಿದ್ಧತೆಯಾಗಿ ಮಂಗಳವಾರದಿಂದ ಆರಂಭವಾಗಲಿರುವ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕಠಿಣ ತಾಲೀಮು ನಡೆಸಲಿದೆ. ಸ್ಮಿತ್‌, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಈ ಅಭ್ಯಾಸ ಪಂದ್ಯದಲ್ಲಿ ಬೆವರಿಳಿಸುವ ಸಾಧ್ಯತೆ ಇದೆ.

4ನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲಕ್ಕೆ ಆಯ್ಕೆ ಸಮಿತಿಯಿಂದ ಪರಿಹಾರ!4ನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲಕ್ಕೆ ಆಯ್ಕೆ ಸಮಿತಿಯಿಂದ ಪರಿಹಾರ!

ಇದೇ ವೇಳೆ ಉಸ್ಮಾನ್‌ ಖವಾಜ ಅವರ ಫಿಟ್ನೆಸ್‌ ಕುರಿತಾಗಿ ಮಾತನಾಡಿರುವ ಪೇಯ್ನ್‌, "ಖವಾಜ ಯಾವುದೇ ಗಂಭೀರ ಸ್ವರೂಪದ ಗಾಯದ ಸಮಸ್ಯೆ ಎದುರಿಸಿಲ್ಲ. ಪುನಶ್ಚೇತನದಲ್ಲಿ ಅವರು ಪಾಲ್ಗೊಂಡಿದ್ದಾರೆ. ಇದರ ಬಳಿಕ ಅವರನ್ನು ಆಡಿಸುವ ಕುರಿತಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು," ಎಂದು ಹೇಳಿದ್ದಾರೆ.

Story first published: Monday, July 22, 2019, 19:39 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X