ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್​ ದಾಖಲಿಸಿದ ಸ್ಮೃತಿ

Smriti Mandhana becomes fastest Indian Women to score 2000 ODI runs

ಅಂಟಿಗಾ, ನವೆಂಬರ್ 07: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತದ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ಗುರುವಾರದಂದು ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ 2000 ರನ್​ ದಾಖಲಿಸಿದ ಭಾರತೀಯ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ತ್ವರಿತವಾಗಿ 2000 ರನ್ ಗಳಿಸಿದ ಆಟಗಾರರ ಪೈಕಿ ಟೀಂ​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರನ್ನು ಸ್ಮೃತಿ ಹಿಂದಿಕ್ಕಿರುವುದು ವಿಶೇಷ. ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ODI rankings: ಸ್ಮೃತಿ ಮಂಧಾನ, ಜೂಲನ್ ಗೋಸ್ವಾಮಿಗೆ ಮೊದಲ ಸ್ಥಾನODI rankings: ಸ್ಮೃತಿ ಮಂಧಾನ, ಜೂಲನ್ ಗೋಸ್ವಾಮಿಗೆ ಮೊದಲ ಸ್ಥಾನ

ಸ್ಮೃತಿ ಸಾಧನೆ: 23 ವರ್ಷ ವಯಸ್ಸಿನ ಮಂಧಾನ 51 ಇನ್ನಿಂಗ್ಸ್ ನಲ್ಲಿ 43.08 ರನ್​​ ಸರಾಸರಿಯಂತೆ 2,025 ರನ್ ಗಳಿಸಿದ್ದು, ಒಟ್ಟಾರೆ, 2000ರನ್ ಗಡಿ ದಾಟಿದ ಮಹಿಳಾ ಕ್ರಿಕೆಟರ್ ಗಳ ಪೈಕಿ ಮೂರನೆಯವರಾಗಿದ್ದಾರೆ. ಬೆಲಿಂಡಾ ಕ್ಲಾರ್ಕ್ 41 ಹಾಗೂ ಮೆಗ್ ಲ್ಯಾನ್ನಿಂಗ್ 45 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

ಪುರುಷರ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ 40 ಇನ್ನಿಂಗ್ಸ್ ಗಳಲ್ಲಿ, ಭಾರತದ ಶಿಖರ್ ಧವನ್ 48 ಇನ್ನಿಂಗ್ಸ್​ನಲ್ಲಿ 2000 ರನ್​ ಗುರಿ ಮುಟ್ಟಿದ್ದಾರೆ. ಭಾರತೀಯ ಕ್ರಿಕೆಟರ್ ಗಳ ಪೈಕಿ ವಿರಾಟ್ ಕೊಹ್ಲಿ 53, ಸೌರವ್ ಗಂಗೂಲಿ 52 ಹಾಗೂ ನವಜ್ಯೋತ್ ಸಿಧು 52 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 74 ರನ್​ ಬಾರಿಸಿದ್ದಲ್ಲದೆ, ಜೆಮಿಮಾ ರೊಡ್ರಿಗಸ್ ಜತೆಗೂಡಿ ಆರಂಭಿಕ ವಿಕೆಟ್ ಗೆ 141 ರನ್​ ಕಲೆಹಾಕಿದರು. ವೆಸ್ಟ್​ ಇಂಡೀಸ್ ಮಹಿಳೆಯರು​ ನೀಡಿದ 195 ರನ್​ ಗುರಿಯನ್ನು ಸುಲಭವಾಗಿ ಮುಟ್ಟಿದ ಭಾರತದ ವನಿತೆಯರು ಮೂರನೆ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದುಕೊಂಡರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಗೆದ್ದು ಸಂಭ್ರಮಿಸಿದರು.

Story first published: Thursday, November 7, 2019, 20:48 [IST]
Other articles published on Nov 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X