ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಪರ ಈ ದಾಖಲೆಯನ್ನು ಮಾಡಿರುವುದು ರೋಹಿತ್ ಶರ್ಮಾ ಬಿಟ್ಟರೆ ಸ್ಮೃತಿ ಮಂಧಾನ ಮಾತ್ರ!

Smriti Mandhana becomes the second Indian to score 2000 t20 runs as opener after Rohit Sharma

ಸದ್ಯ ಭಾರತ ವನಿತೆಯರ ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಹೌದು, ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಸೇರ್ಪಡೆಗೊಂಡಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾರ್ಬಡೋಸ್ ಹೀಗೆ ಒಟ್ಟು 8 ವನಿತೆಯರ ತಂಡಗಳು ಈ ಕ್ರಿಕೆಟ್ ವಿಭಾಗದಲ್ಲಿ ಭಾಗವಹಿಸಿವೆ. 8 ತಂಡಗಳನ್ನು 2 ಗುಂಪುಗಳಾಗಿ ವಿಭಜನೆ ಮಾಡಿ ಪ್ರತಿ ತಂಡಕ್ಕೂ ಗ್ರೂಪ್ ಹಂತದಲ್ಲಿ ತಲಾ 3 ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡಲಾಗಿತ್ತು. ಹೀಗೆ ಎರಡೂ ಗುಂಪುಗಳಲ್ಲಿ ಯಾವ ತಂಡಗಳು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳುತ್ತವೋ ಆ ತಂಡಗಳು ನೇರವಾಗಿ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ.

ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!

ಸದ್ಯ ಟೀಮ್ ಇಂಡಿಯಾ ಕ್ರಿಕೆಟ್‌ ವಿಭಾಗದ ಗ್ರೂಪ್ ಹಂತದ ಎಲ್ಲಾ ಮೂರೂ ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದು, ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಮೊದಲಿಗೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸಿದ ಭಾರತ ವನಿತೆಯರ ತಂಡ ಆ ಪಂದ್ಯದಲ್ಲಿ ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತ್ತು. ನಂತರ ತನ್ನ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿದ ಭಾರತ ವನಿತೆಯರು ಆ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆದಿದ್ದರು.

IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?

ಹೀಗೆ ಮೊದಲೆರಡು ಪಂದ್ಯಗಳು ಮುಕ್ತಾಯವಾದ ನಂತರ ಮೂರನೇ ಪಂದ್ಯದಲ್ಲಿ ಭಾರತ ವನಿತೆಯರು ತಮ್ಮ ಎದುರಾಳಿ ಬಾರ್ಬಡೋಸ್ ವಿರುದ್ಧ ಗೆಲ್ಲಲೇಬೇಕಿತ್ತು. ಆಗಸ್ಟ್ 3ರಂದು ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ವನಿತೆಯರು ಬಾರ್ಬಡೋಸ್ ವನಿತೆಯರ ವಿರುದ್ಧ ಬರೋಬ್ಬರಿ 100 ರನ್‌ಗ ಜಯ ಸಾಧಿಸಿ ಅಬ್ಬರಿಸಿದರು. ಇನ್ನು ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೇವಲ 7 ಎಸೆತಗಳಲ್ಲಿ 5 ರನ್ ಕಲೆಹಾಕಿ ಹೇಳಿಕೊಳ್ಳುವಂತ ಪ್ರದರ್ಶನ ನೀಡದೇ ಇದ್ದರೂ ದಾಖಲೆಯೊಂದರಲ್ಲಿ ವಿಶೇಷ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಆರಂಭಿಕ ಆಟಗಾರ್ತಿಯಾಗಿ ಅತಿಹೆಚ್ಚು ರನ್

ಆರಂಭಿಕ ಆಟಗಾರ್ತಿಯಾಗಿ ಅತಿಹೆಚ್ಚು ರನ್

ಬಾರ್ಬಡೋಸ್ ವನಿತೆಯರ ವಿರುದ್ಧದ ಪಂದ್ಯದಲ್ಲಿ 5 ರನ್ ಕಲೆಹಾಕಿದ ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 2000 ರನ್‌ಗಳ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ 2000 ರನ್ ಗಳಿಸಿದ ಭಾರತದ ಪ್ರಥಮ ಮಹಿಳಾ ಓಪನರ್ ಎಂಬ ದಾಖಲೆಯನ್ನು ಸ್ಮೃತಿ ಮಂಧಾನ ಬರೆದರು.

ರೋಹಿತ್ ನಂತರ ಈ ಸಾಧನೆ ಮಾಡಿದ ಸ್ಮೃತಿ

ರೋಹಿತ್ ನಂತರ ಈ ಸಾಧನೆ ಮಾಡಿದ ಸ್ಮೃತಿ

ಇನ್ನು ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಓಪನರ್ ಆಗಿ 2000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟರ್ ಎಂಬ ದಾಖಲೆ ಹೊಂದಿದ್ದಾರೆ. 96 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ 2973 ರನ್ ಕಲೆಹಾಕಿದ್ದಾರೆ. ಇನ್ನು ಸ್ಮೃತಿ ಮಂಧಾನ ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದು, 79 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್ ಪೈಕಿ 2004 ರನ್ ಕಲೆಹಾಕಿದ್ದಾರೆ.

ಸ್ಮೃತಿ ಮಂಧಾನ ಅಂಕಿಅಂಶ

ಸ್ಮೃತಿ ಮಂಧಾನ ಅಂಕಿಅಂಶ

ಸ್ಮೃತಿ ಮಂಧಾನ ಇಲ್ಲಿಯವರೆಗೂ ಒಟ್ಟು 4 ಟೆಸ್ಟ್ ಪಂದ್ಯಗಳನ್ನಾಡಿದ್ದು, 325 ರನ್ ಕಲೆಹಾಕಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ 74 ಪಂದ್ಯಗಳನ್ನಾಡಿರುವ ಸ್ಮೃತಿ ಮಂಧಾನ 2892 ರನ್ ಕಲೆಹಾಕಿದ್ದಾರೆ. ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಒಟ್ಟು 90 ಪಂದ್ಯಗಳನ್ನಾಡಿದ್ದು, 88 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸುವ ಅವಕಾಶ ಪಡೆದು 2125 ರನ್ ಕಲೆಹಾಕಿದ್ದಾರೆ. ಟಿ ಟ್ವೆಂಟಿಯಲ್ಲಿ ಒಟ್ಟು 15 ಅರ್ಧ ಶತಕಗಳನ್ನು ಬಾರಿಸಿರುವ ಮಂಧಾನ ಗಳಿಸಿರುವ ಗರಿಷ್ಟ ರನ್ 86.

Story first published: Thursday, August 4, 2022, 18:07 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X