ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ದ್ವಿಶತಕ ಬಾರಿಸಬಲ್ಲ ಭಾರತೀಯಳನ್ನು ಹೆಸರಿಸಿದ ಪೂನಂ ಯಾದವ್

Smriti Mandhana Can Hit Double-century In ODI: Poonam Yadav

ನವದೆಹಲಿ, ಮಾರ್ಚ್ 23: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಬಲ್ಲ ಭಾರತದ ಆಟಗಾರ್ತಿಯನ್ನು ಭಾರತದ ಸ್ಪಿನ್ನರ್ ಪೂನಂ ಯಾದವ್ ಹೆಸರಿಸಿದ್ದಾರೆ. ಭಾರತದ ಆಟಗಾರ್ತಿಯರಲ್ಲಿ ಒಬ್ಬಾಕೆಗೆ ಮಾತ್ರ ಈ ಸಾಧನೆ ಮಾಡಬಲ್ಲ ಸಾಮರ್ಥ್ಯವಿದೆ ಎಂದು ಯಾದವ್ ಹೇಳಿದ್ದಾರೆ. ವಿಶ್ವದಲ್ಲಿ ಈವರೆಗೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಇಬ್ಬರು ಆಟಗಾರ್ತಿಯರಷ್ಟೇ ಏಕದಿನದಲ್ಲಿ ದ್ವಿಶತಕ ಬಾರಿಸಿದ ದಾಖಲೆಗಾಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರುಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರು

ಪುರುಷರ ವಿಭಾಗದಲ್ಲಿ ಮೊದಲ ಬಾರಿಗೆ ಏಕದಿನ ದ್ವಿಶತಕ ಬಾರಿಸಿದ ಕೀರ್ತಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಸಲ್ಲುತ್ತದೆ. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಭರ್ತಿ 200 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಏಕದಿನದಲ್ಲಿ ಅತ್ಯಧಿಕ ರನ್ ದಾಖಲೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ (264 ರನ್) ಹೆಸರಿನಲ್ಲಿದೆ.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮಾಡಿದ 5 ಅಪರೂಪದ ದಾಖಲೆಗಳು!ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮಾಡಿದ 5 ಅಪರೂಪದ ದಾಖಲೆಗಳು!

ಅಷ್ಟೇ ಅಲ್ಲ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಾರಿ, ಅಂದರೆ ಮೂರು ಸಾರಿ ದ್ವಿಶತಕ ಬಾರಿಸಿದ ದಾಖಲೆಯೂ ರೋಹಿತ್ ಶರ್ಮಾ ಅವರದ್ದಾಗಿದೆ.

ಪುರುಷರಲ್ಲಿ ಮೂವರು ಆಟಗಾರರು

ಪುರುಷರಲ್ಲಿ ಮೂವರು ಆಟಗಾರರು

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಮೊದಲ ಬಾರಿಗೆ ದ್ವಿಶತಕ ಬಾರಿಸಿದ ಬಳಿಕ ವೀರೇಂದ್ರ ಸೆಹ್ವಾಗ್ (ಭಾರತ), ರೋಹಿತ್ ಶರ್ಮಾ (ಭಾರತ), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) ಮತ್ತು ಫಕರ್ ಝಮಾನ್ (ಪಾಕಿಸ್ತಾನ) ಈ ಸಾಧನೆ ಮಾಡಿದ್ದರು.

ಕೆರ್ ಮೊದಲ ಸಾಧಕಿ

ಕೆರ್ ಮೊದಲ ಸಾಧಕಿ

ಮಹಿಳಾ ಕ್ರಿಕೆಟ್ ವಿಚಾರಕ್ಕೆ ಬಂದರೆ ಏಕದಿನದಲ್ಲಿ ನ್ಯೂಜಿಲೆಂಡ್‌ನ ಅಮೇಲಿಯಾ ಕೆರ್ ಮತ್ತು ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ದ್ವಿಶಕ ಬಾರಿಸಿದ್ದಾರೆ. ಇದರಲ್ಲಿ ಅತ್ಯಧಿಕ ರನ್ ದಾಖಲೆ ಕೆರ್ ಹೆಸರಿನಲ್ಲಿದೆ. ಐರ್ಲೆಂಡ್ ವಿರುದ್ಧ ಕೆರ್ ಅಜೇಯ 232 ರನ್ ಬಾರಿಸಿದ್ದರು. ಇನ್ನು ಕ್ಲಾರ್ಕ್, ಡೆನ್ಮಾರ್ಕ್ ವಿರುದ್ಧ ಅಜೇಯ 229 ರನ್ ಗಳಿಸಿದ್ದರು.

ದೀಪ್ತಿ ಅತ್ಯಧಿಕ ರನ್ ದಾಖಲೆ

ದೀಪ್ತಿ ಅತ್ಯಧಿಕ ರನ್ ದಾಖಲೆ

ಭಾರತದ ಪರ ಏಕದಿನದಲ್ಲಿ ಅತ್ಯಧಿಕ ವೈಯಕ್ತಿಕ ರನ್ ದಾಖಲೆಗಾಗಿ ದೀಪ್ತಿ ಶರ್ಮಾ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ದೀಪ್ತಿ ಐರ್ಲೆಂಡ್ ವಿರುದ್ಧ 188 ರನ್ ಬಾರಿಸಿದ್ದರು. ಆದರೆ ಭಾರತದ ಸ್ಪಿನ್ನರ್ ಪೂನಂ ಯಾದವ್ ಬೇರೆಯೇ ಆಟಗಾರ್ತಿಯನ್ನು ಹೆಸರಿಸಿದ್ದಾರೆ.

ಭಾರತದ ಸಾಧಕಿ ಯಾರು?

ಭಾರತದ ಸಾಧಕಿ ಯಾರು?

'ವುಮೆನ್ ಇನ್ ಬ್ಲ್ಯೂನಲ್ಲಿ ಏಕದಿನ ದ್ವಿಶತಕ ಬಾರಿಸಬಲ್ಲ ಆಟಗಾರ್ತಿ ಯಾರು' ಎಂದು ಟ್ವಿಟರ್‌ನಲ್ಲಿ ಕೇಳಲಾದ ಪ್ರಶ್ನೆಗೆ ಪೂನಂ ಯಾದವ್, ನನ್ನ ಪ್ರಕಾರ ಅದು ಸ್ಮೃತಿ ಮಂಧಾನ. ನೀವೇನು ಹೇಳುತ್ತೀರಿ?,' ಎಂದು ಪ್ರತಿಕ್ರಿಯಿಸಿದ್ದಾರೆ. ಏಕದಿನದಲ್ಲಿ ಸ್ಮೃತಿ ಮಂಧಾನ ಈವರೆಗಿನ ವೈಯಕ್ತಿಕ ಅತ್ಯಧಿಕ ರನ್ ಸಾಧನೆಯೆಂದರೆ 135 ರನ್.

Story first published: Monday, March 23, 2020, 17:41 [IST]
Other articles published on Mar 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X