ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ!

Smriti Mandhana created unique world record in ODI Cricket

ಲಕ್ನೋ: ಭಾರತದ ಸ್ಮೃತಿ ಮಂಧಾನ ಪ್ರತಿಭಾನ್ವಿತ ಆಟಗಾರ್ತಿ. ಅನೇಕದ ದಾಖಲೆಗಳನ್ನು ಸ್ಮೃತಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಮಂಗಳವಾರ (ಮಾರ್ಚ್ 9) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಂಧಾನ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಪುರುಷ ಅಥವಾ ಮಹಿಳಾ ಕ್ರಿಕೆಟರ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್‌ ಎಂಬ ಹೆಗ್ಗಳಿಕೆ ಈಗ ಭಾರತೀಯೆಯದ್ದಾಗಿದೆ.

ಟಿ20ಐನಲ್ಲಿ ಭಾರತ-ಇಂಗ್ಲೆಂಡ್: ಕುತೂಹಲಕಾರಿ ಅಂಕಿ-ಅಂಶಗಳು!ಟಿ20ಐನಲ್ಲಿ ಭಾರತ-ಇಂಗ್ಲೆಂಡ್: ಕುತೂಹಲಕಾರಿ ಅಂಕಿ-ಅಂಶಗಳು!

ಲಕ್ನೋವಿನಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಭಾರತದ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಸ್ಮೃತಿ ಮಂಧಾನ ಅಜೇಯ 80 ರನ್ (64 ಎಸೆತ) ಬಾರಿಸಿದ್ದರು. ಇದರೊಂದಿಗೆ ಸ್ಮೃತಿ ಹೆಸರಿಗೆ ದಾಖಲೆ ನಿರ್ಮಾಣವಾಗಿದೆ.

ಸ್ಮೃತಿ ಹೆಸರಿಗೆ ವಿಶ್ವದಾಖಲೆ

ಸ್ಮೃತಿ ಹೆಸರಿಗೆ ವಿಶ್ವದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ಪುರುಷರು ಅಥವಾ ಮಹಿಳೆಯರಲ್ಲಿ ಚೇಸಿಂಗ್‌ ವೇಳೆ ಸತತ 10ಕ್ಕೂ ಹೆಚ್ಚು ಪಂದ್ಯಗಳಲ್ಲಿ 50+ ರನ್ ದಾಖಲೆ ಮಾಡಿದವರು ಇರಲಿಲ್ಲ. ಆದರೆ ಈಗ ಸ್ಮೃತಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಲಕ್ನೋ ಪಂದ್ಯದೊಂದಿಗೆ ಸ್ಮೃತಿ ಏಕದಿನದಲ್ಲಿ ಚೇಸಿಂಗ್‌ ವೇಳೆ ಸತತ 10 ಪಂದ್ಯಗಳಲ್ಲಿ 50+ ರನ್ ರನ್ ಬಾರಿಸಿದ್ದಾರೆ. ಸ್ಮೃತಿಯ ಬ್ಯಾಟಿಂಗ್ ವಿಡಿಯೋವನ್ನು ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

ದಾಖಲೆ ಶುರುವಾಗಿದ್ದು..

ಏಕದಿನದಲ್ಲಿ ಚೇಸಿಂಗ್‌ ವೇಳೆ ಸ್ಮೃತಿ ಮಂಧಾನ 50+ ಗಳಿಸಲು ಆರಂಭಿಸಿದ್ದು 2018ರಿಂದ. ಆವತ್ತು ಆಸ್ಟ್ರೇಲಿಯಾ ವನಿತೆಯರ ವಿರುದ್ಧ ವಡೋದರದಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಮೃತಿ ಚೇಸಿಂಗ್‌ ವೇಳೆ ಮೊದಲ ಬಾರಿಗೆ 50+ ರನ್ ಗಳಿಸಿದ್ದರು. ಅಲ್ಲಿಂದ ಇಲ್ಲೀವರೆಗೆ ಚೇಸಿಂಗ್ ವೇಳೆ ಎಲ್ಲಾ ಪಂದ್ಯಗಳಲ್ಲೂ ಸ್ಮೃತಿ 50+ ರನ್ ಗಳಿಸಿದ್ದಾರೆ. ಹಿಂದಿನ 10 ಏಕದಿನ ಪಂದ್ಯಗಳಲ್ಲಿ ಚೇಸಿಂಗ್‌ ವೇಳೆ ಸ್ಮೃತಿ ಗಳಿಸಿದ ರನ್ ಗಮನಿಸಿದರೆ 67, 52, 86, 53*, 73*, 105, 90*, 63, 74 ಮತ್ತು 80* ಹೀಗಿದೆ.

ಭಾರತಕ್ಕೆ ಭರ್ಜರಿ ಜಯ

ಭಾರತಕ್ಕೆ ಭರ್ಜರಿ ಜಯ

* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ವನಿತಾ ತಂಡ 41 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 157 ರನ್ ಗಳಿಸಿತ್ತು.
* ಗುರಿ ಬೆನ್ನತ್ತಿದ ಭಾರತದ ವನಿತಾ ತಂಡ, 28.4 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 160 ರನ್‌ ಬಾರಿಸಿ 9 ವಿಕೆಟ್ ಗೆಲುವನ್ನಾಚರಿಸಿತು.
* ಭಾರತ ಪರ ಜೂಲನ್ ಗೋಸ್ವಾಮಿ 4, ಮಾನ್ಸಿ ಜೋಶಿ 2, ರಾಜೇಶ್ವರಿ ಗಾಯಕ್ವಾಡ್ 3, ಹರ್ಮನ್‌ಪ್ರೀತ್‌ ಕೌರ್ 1 ವಿಕೆಟ್ ಪಡೆದು ಮಿಂಚಿದರು.

Story first published: Wednesday, March 10, 2021, 15:14 [IST]
Other articles published on Mar 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X