ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮೃತಿ ಮಂಧಾನ ಸ್ಫೋಟಕ ಅರ್ಧ ಶತಕ, ದಕ್ಷಿಣ ಆಫ್ರಿಕಾ ಮಣಿಸಿದ ಭಾರತ

Smriti Mandhana half century, India Women beat South Africa Women in 2nd ODI

ಲಕ್ನೋ: ಲಕ್ನೋದಲ್ಲಿರುವ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 9) ನಡೆದ ಭಾರತದ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಮಹಿಳೆಯರು 9 ವಿಕೆಟ್ ಭರ್ಜರಿ ಜಯ ಗಳಿಸಿದ್ದಾರೆ. ಸ್ಮೃತಿ ಮಂಧಾನ, ಪೂನಂ ರಾವತ್ ಬ್ಯಾಟಿಂಗ್, ಜೂಲನ್ ಗೋಸ್ವಾಮಿ ಬೌಲಿಂಗ್‌ನೊಂದಿಗೆ ಪಂದ್ಯ ಗೆದ್ದಿರುವ ಭಾರತ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ.

ಪಂಜಾಬ್‌ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!ಪಂಜಾಬ್‌ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ವನಿತಾ ತಂಡದಿಂದ, ಸುನೆ ಲೂಸ್ 36, ಲಾರಾ ಗುಡಾಲ್ 49, ಲಾರಾ ವೊಲ್ವಾರ್ಡ್ 9, ಮಿಗ್ನಾನ್ ಡು ಪ್ರೀಜ್ 11, ಮಾರಿಜನ್ನೆ ಕಾಪ್ 10, ತ್ರಿಶಾ ಶೆಟ್ಟಿ 12 ರನ್‌ ಬಾರಿಸಿದರು. ಆಫ್ರಿಕಾ 41 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 157 ರನ್ ಗಳಿಸಿತು.

ಗುರಿ ಬೆನ್ನತ್ತಿದ ಭಾರತದ ವನಿತಾ ತಂಡ, ಜಮಿಮಾ ರೋಡ್ರಿಗಸ್ 9, ಸ್ಮೃತಿ ಮಂಧಾನ 80 (64 ಎಸೆತ), ಪೂನಂ ರಾವತ್ 62 ರನ್‌ನೊಂದಿಗೆ 28.4 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 160 ರನ್‌ ಬಾರಿಸಿ ಗೆಲುವನ್ನಾಚರಿಸಿತು.

ದಿಲ್ಶನ್ ಅಬ್ಬರದಾಟ, ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್‌ಗೆ ಭರ್ಜರಿ ಜಯದಿಲ್ಶನ್ ಅಬ್ಬರದಾಟ, ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್‌ಗೆ ಭರ್ಜರಿ ಜಯ

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ 4, ಮಾನ್ಸಿ ಜೋಶಿ 2, ರಾಜೇಶ್ವರಿ ಗಾಯಕ್ವಾಡ್ 3, ಹರ್ಮನ್‌ಪ್ರೀತ್‌ ಕೌರ್ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1 ವಿಕೆಟ್‌ ಪಡೆದರು. ಜೂಲನ್ ಗೋಸ್ವಾಮಿ ಪಂದ್ಯಶ್ರೇಷ್ಠೆಯೆನಿಸಿದರು.

Story first published: Tuesday, March 9, 2021, 15:20 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X