ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಾರ್ಷಿಕ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಮೃತಿ ಮಂದಾನ ಸಾಧನೆ

Smriti Mandhana in ICC Womens ODI and T20 teams of the year

ಭಾರತದ ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಈ ವರ್ಷವೂ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರ ಈ ಅದ್ಭುತ ಪ್ರದರ್ಶನ ಐಸಿಸಿಯ ವಾರ್ಷಿಕ ತಂಡದಲ್ಲಿ ಏಕದಿನ ಹಾಗೂ ಟಿ20 ಎರಡು ತಂಡದಲ್ಲೂ ಸ್ಥಾನ ಪಡೆಯುವಂತೆ ಮಾಡಿದೆ. ಹೀಗಾಗಿ ಸ್ಮೃತಿ ಮಂದನಾಗೆ ಈ ವರ್ಷ ಮತ್ತಷ್ಟು ಸ್ಮರಣೀಯವಾಗಿದೆ.

ಐಸಿಸಿ ವಾರ್ಷಿಕ ಏಕದಿನ ತಂಡದಲ್ಲಿ ಸ್ಮೃತಿ ಮಂದನಾ ಜೊತೆಗೆ ಜೂಲನ್ ಗೋಸ್ವಾಮಿ, ಪೂನಮ್ ಯಾದವ್, ಶಿಖಾ ಪಾಂಡೆ ಕೂಡ ಸ್ಥಾನವನ್ನು ಪಡೆದುಕೊಂಡಿದ್ದು ನಾಲ್ವರು ಭಾರತೀಯರು ಮಹಿಳಾ ಆಟಗಾರ್ತಿಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಟಿಟ್ವೆಂಟಿ ತಂಡದಲ್ಲಿ ಸ್ಮೃತಿ ಮಂದನಾಗೆ ಆಲ್‌ರೌಂಡರ್ ದೀಪ್ತಿ ಶರ್ಮಾ ಸಾಥ್ ನೀಡಿದ್ದಾರೆ.

ಸಿಎಎ ವಿರುದ್ಧದ ಪ್ರತಿಭಟನೆ ಮಧ್ಯೆಯೂ ಐಪಿಎಲ್ ಹರಾಜಿಗೆ ಅಂತಿಮ ಸಿದ್ಧತೆಸಿಎಎ ವಿರುದ್ಧದ ಪ್ರತಿಭಟನೆ ಮಧ್ಯೆಯೂ ಐಪಿಎಲ್ ಹರಾಜಿಗೆ ಅಂತಿಮ ಸಿದ್ಧತೆ

23 ವರ್ಷದ ಸ್ಪೋಟಕ ಆಟಗಾರ್ತಿ ಮಂದಾನ 51 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನು ಟೀಮ್ ಇಂಡಿಯಾ ಪರವಾಗಿ ಆಡಿದ್ದಾರೆ. ಎರಡು ಟೆಸ್ಟ್ ಪಂದ್ಯಗಳಲ್ಲೂ ಸ್ಮೃತಿ ಮಂದಾನ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಈ ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆ 3476 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಆಟಗಾರ್ತಿ ಅಲೆಸ್ಸಾ ಹ್ಯಾಲಿ ವರ್ಷದ ಶ್ರೇಷ್ಠ ಟಿ20 ಮಹಿಳಾ ಕ್ರಿಕೆಟರ್ ಎಂದು ಐಸಿಸಿ ಆಯ್ಕೆ ಮಾಡಿದೆ. ಶ್ರೀಲಂಕಾ ವಿರುದ್ಧ ಅಲೆಸ್ಸಾ ಈ ವರ್ಷಾರಂಭದಲ್ಲೇ ವಿಶ್ವದಾಖಲೆಯ ಅಜೇಯ 148ರನ್‌ಗಳನ್ನು ದಾಖಲಿದ್ದರು.

ಐಪಿಎಲ್ ಹರಾಜು; ಈ ಪ್ರಮುಖ ಆಟಗಾರರು ಅಂದು ಹರಾಜಾಗದೆ ಉಳಿದುಕೊಂಡಿದ್ದರು!ಐಪಿಎಲ್ ಹರಾಜು; ಈ ಪ್ರಮುಖ ಆಟಗಾರರು ಅಂದು ಹರಾಜಾಗದೆ ಉಳಿದುಕೊಂಡಿದ್ದರು!

ಇನ್ನು ವಾರ್ಷಿಕ ಏಕದಿನ ಮಹಿಳಾ ಕ್ರಿಕೆಟರ್ ಎಂಬ ಗೌರವಕ್ಕೆ ಎಲಿಸೆ ಪೆರ್ರಿ ಆಯ್ಕೆಯಾಗಿದ್ದಾರೆ. ಪೆರ್ರಿ 73.50ರ ಸರಾಸರಿಯಲ್ಲಿ 441 ರನ್ ಹಾಗೂ 13.52 ರ ಸರಾಸರಿಯಲ್ಲ 21 ವಿಕೆಟ್ ಪಡೆದು ಮಿಂಚಿದ್ದಾರೆ. ಎರಡೂ ತಂಡಗಳ ನಾಯಕರಾಗಿ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನ್ನಿಂಗ್ ಏಕದಿನ ಹಾಗೂ ಟಿ20 ವಾರ್ಷಿಕ ವಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Story first published: Wednesday, December 18, 2019, 12:45 [IST]
Other articles published on Dec 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X