ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಲ್ಲಿ ವೇತನ ತಾರತಮ್ಯ: ಚರ್ಚೆಗೆ ಸ್ಮೃತಿ ಮಂದಾನ ಕೊಟ್ರು ಭರ್ಜರಿ ಉತ್ತರ

Smriti Mandhana Lauded For Why She Thinks Equal Pay For Women Cricketers Is Unfair Right Now

ಭಾರತದಲ್ಲಿ ಕ್ರಿಕೆಟ್ ಶ್ರೀಮಂತ ಆಟ. ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರು ಕೋಟಿ ಕೋಟಿ ವೇತನವನ್ನು ಪಡೆಯುತ್ತಾರೆ. ಆದರೆ ಇದು ಟೀಮ್ ಇಂಡಿಯಾ ಪುರುಷ ಆಟಗಾರರಿಗಷ್ಟೇ ಸೇಮಿತವಾಗಿದೆ. ಮಹಿಳಾ ಕ್ರಿಕೆಟ್‌ ಆಟಗಾರರು ಭಾರಿ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಇದು ಸಾಕಷ್ಟು ಚರ್ಚೆಯ ಕೇಂದ್ರಬಿಂದುವಾಗಿದೆ.

ಪುರುಷರ ಕ್ರಿಕೆಟ್‌ ತಂಡದಿಂದ ಉತ್ತಮ ಅದಾಯ ಹರಿದು ಬರುತ್ತಿದೆ. ಮಹಿಳಾ ತಂಡದಿಂದಲೂ ಅದೇ ರೀತಿ ಆದಾಯ ಬಂದಾಗ ನಾವೂ ಸಮಾನ ವೇತನವನ್ನು ಕೇಳಲು ಬಯಸುತ್ತೇವೆ. ಆದರೆ ಈಗ ಮಹಿಳಾ ತಂಡದಿಂದ ಆದಾಯ ಕಡಿಮೆ ಬರುತ್ತಿರುವುದರಿಂದ ಸಮಾನ ವೇತನ ಕೇಳುವುದು ನ್ಯಾಯ ಅಲ್ಲ ಎಂಬ ಮಾತನ್ನು ಸ್ಮೃತಿ ಮಂದಾನ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿ

ಸಮಾನ ವೇತನ ವಿಚಾರವಾಗಿ ನಡೆಯುತ್ತಿರುವ ಈ ಚರ್ಚೆಗೆ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ ಈ ರೀತಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮಂದಾನ ನೀಡಿರುವ ಉತ್ತರ ವೇತನ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಬಹಳ ಮುಖ್ಯವಾಗಿದೆ.

ಬಿಸಿಸಿಐ ಇತ್ತೀಚೆಗಷ್ಟೇ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಉನ್ನತ ಶ್ರೇಣಿ ಆಟಗಾರರು ವಾರ್ಷಿಕವಾಗಿ 7ಕೋಟಿ ವೇತನವನ್ನು ಪಡೆಯಲಿದ್ದಾರೆ. ಆದರೆ ಮಹಿಳಾ ಅತ್ಯುತ್ತಮ ಆಟಗಾರ್ತಿ ಸ್ಮೃತಿ ಮಂದಾನ ಪಡೆಯುತ್ತಿರುವ ವೇತನ ಕೇವಲ 50 ಲಕ್ಷ. ಇದು ಚರ್ಚೆಗೆ ಕಾರಣವಾಗಿದೆ.

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

ನಮ್ಮ ಗಮನ ತಂಡದ ಪರವಾಗಿ ಅತ್ಯುತ್ತಮವಾಗಿ ಆಟವನ್ನಾಡುವುದು. ತಂಡದ ಇತರ ಆಟಗಾರರು ಆ ಕಡೆಗೇ ತಮ್ಮ ಗಮನವನ್ನು ನೀಡಿದ್ದಾರೆ. ವೇತನದ ಮಧ್ಯೆಯಿರುವ ಈ ಅಂತರದ ಬಗ್ಗೆ ಯಾವ ಆಟಗಾರ್ತಿಯರೂ ತಲೆ ಕೆಡಿಸಿಕೊಂಡಿಲ್ಲ ಎಂಬ ಮಾತನ್ನು ಸ್ಮೃತಿ ಮಂದಾನ ತಮ್ಮ ತಂಡದ ಆಟಗಾರರ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ.

Story first published: Thursday, January 23, 2020, 18:45 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X