ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ರ್ಯಾಂಕಿಂಗ್‌: ಟಿ20 ಕ್ರಿಕೆಟ್‌ನಲ್ಲಿ ಟಾಪ್ 2 ಸ್ಥಾನಕ್ಕೇರಿದ ಸ್ಮೃತಿ ಮಂದಾನ

Smriti mandhana

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಗಳವಾರ ಹೊಸದಾಗಿ ಟಿ20 ಆಟಗಾರರ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಟಗಾರರೇ ಹೆಚ್ಚು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಆಟಗಾರರು ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದರೆ, ಮತ್ತೆ ಕೆಲ ಆಟಗಾರರು ತಮ್ಮ ಸ್ಥಾನ ಕಳೆದುಕೊಂಡು ಕುಸಿದಿದ್ದಾರೆ.

ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ರ್ಯಾಂಕಿಂಗ್‌ನ ಮೊದಲೆರಡು ಸ್ಥಾನವನ್ನ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಪಡೆದಿದ್ದಾರೆ. ಆಸಿಸ್ ಸ್ಟಾರ್ ಆಟಗಾರರಾದ ಬೆತ್ ಮೂನಿ ಮತ್ತು ಮೆಗ್ ಲ್ಯಾನಿಂಗ್‌ ಮೊದಲೆರಡು ಸ್ಥಾನ ಪಡೆದಿದ್ದರು. ಆದ್ರೆ ಮಂದಾನ ಅದ್ಭುತ ಪ್ರದೇಶದಿಂದಾಗಿ ಇಬ್ಬರು ಆಟಗಾರ್ತಿಯರ ರ್ಯಾಂಕಿಂಗ್‌ನಲ್ಲಿ ಬದಲಾವಣೆ ಕಾಣಬಹುದಾಗಿದೆ.

ಇಂಗ್ಲೆಂಡ್ ವಿರುದ್ಧ ಕಳೆದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದ ಓಪನರ್ ಸ್ಮೃತಿ ಮಂದಾನಾ ರ್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮಂದಾನಾ 111 ರನ್‌ ಸಿಡಿಸುವ ಮೂಲಕ ಎರಡು ಸ್ಥಾನ ಏರಿಕೆ ಕಂಡಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಮಂದಾನ 91 ರನ್‌ ಕಲೆಹಾಕಿದರು. ಜೊತೆಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದ್ರು.

ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಆಸಿಸ್ ಬೆತ್ ಮೂನಿ ಮೊದಲ ಸ್ಥಾನದಲ್ಲೇ ಉಳಿದಿದ್ದಾರೆ. 743 ಪಾಯಿಂಟ್ಸ್‌ ಪಡೆದಿರುವ ಆಸಿಸ್ ಸ್ಟಾರ್‌ ಅಗ್ರಸ್ಥಾನದಲ್ಲಿದ್ದು, ಸ್ಮೃತಿ ಮಂದಾನ ಕೇವಲ 12 ಪಾಯಿಂಟ್ಸ್‌ ಅಂತರದಲ್ಲಿದ್ದು, 731 ಪಾಯಿಂಟ್ಸ್‌ ಹೊಂದಿದ್ದಾರೆ. ಇತ್ತೀಚಿನ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ರ್ಯಾಂಕಿಂಗ್ ಅಪ್‌ಡೇಟ್ ಆಗಿದೆ.

ಸ್ಮೃತಿ ಮಂದಾನಾ ಅದ್ಭುತ ಪ್ರದರ್ಶನ ನೀಡಿದ ಹಿನ್ನಲೆ ಎರಡನೇ ಸ್ಥಾನದಲ್ಲಿದ್ದ ಆಸಿಸ್ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮೂರನೇ ಸ್ಥಾನಕ್ಕೆ ಕುಸಿದಿದ್ದು 725 ಪಾಯಿಂಟ್ಸ್ ಹೊಂದಿದ್ದಾರೆ. ಸ್ಮೃತಿ ಮಂದಾನ ಬದ್ಧ ಎದುರಾಳಿ ನ್ಯೂಜಿಲೆಂಡ್‌ನ ಸೂಫಿ ಡಿವೈನ್ 715 ಪಾಯಿಂಟ್ಸ್‌ ಮೂಲಕ ಕುಸಿತ ಕಂಡಿದ್ದಾರೆ.

ಏಕದಿನ ರ್ಯಾಂಕಿಂಗ್‌ನಲ್ಲೂ ಏರಿಕೆ ಕಂಡ ಮಂದಾನ
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಅಷ್ಟೇ ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಭರ್ಜರಿ ಪರ್ಫಾಮೆನ್ಸ್ ನೀಡಿದ ಸ್ಮೃತಿ ಮಂದಾನ 99 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲೂ ಮೂರು ಸ್ಥಾನ ಬಡ್ತಿ ಪಡೆದ ಮಂದಾನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.

ಇನ್ನು ಮಹಿಳಾ ತಂಡದ ಇತರೆ ಆಟಗಾರ್ತಿಯರಾದ ಹರ್ಮನ್‌ಪ್ರೀತ್ ಕೌರ್ (9)ನೇ ಸ್ಥಾನ ಮತ್ತು ಯಾಸ್ತಿಕ ಭಾಟಿಯಾ 8 ರ್ಯಾಂಕಿಂಗ್ ಹೆಚ್ಚಾಗಿ 37ನೇ ಸ್ಥಾನಕ್ಕೆ ಏರಿಕೆ ಸಾಧಿಸಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಇಂಗ್ಲೆಂಡ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ರು.

Story first published: Tuesday, September 20, 2022, 15:46 [IST]
Other articles published on Sep 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X