ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಗೆಲ್ಲಲು ಪುಟ್ಟಗೌರಿ ಕಾರಣವೇ?

ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಂಗಳವಾರ ಸಂಜೆ ಕ್ರಿಕೆಟ್ ನದ್ದೇ ಸುದ್ದಿ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 75 ರನ್ ಗಳ ವಿಜಯ ಸಾಧಿಸಿದ್ದನ್ನು ಅಭಿಮಾನಿಗಳು ವಿಶ್ವಕಪ್ ಗೆದ್ದ ರೇಂಜ್ ಗೆ ಸೆಲೆಬ್ರೇಟ್ ಮಾಡುತ್ತಿದ್ದಾರೆ.

By Mahesh

ಬೆಂಗಳೂರು, ಮಾರ್ಚ್ 07: ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಂಗಳವಾರ ಸಂಜೆ ಕ್ರಿಕೆಟ್ ನದ್ದೇ ಸುದ್ದಿ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 75 ರನ್ ಗಳ ವಿಜಯ ಸಾಧಿಸಿದ್ದನ್ನು ಅಭಿಮಾನಿಗಳು ವಿಶ್ವಕಪ್ ಗೆದ್ದ ರೇಂಜ್ ಗೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಗೆಲುವಿಗೆ ಕಾರಣವೇನು ಎಂಬುದಕ್ಕೆ ಥರಾವರಿ ಹಾಸ್ಯಮಯ ಉತ್ತರಗಳು ಸಿಗುತ್ತಿವೆ.

ಇದಕ್ಕೂ ಕಾರಣವಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಈ ಗೆಲುವು ಅನಿವಾರ್ಯವಾಗಿತ್ತು.

ವಿರಾಟ್ ಕೊಹ್ಲಿ ಮುಖದಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಲು ಕೆಎಲ್ ರಾಹುಲ್, ಆರ್ ಅಶ್ವಿನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ ಅವರು ಕಾರಣ ಎಂದರೆ ತಪ್ಪಾಗಲಾರದು.[2ನೇ ಟೆಸ್ಟ್ : ಆಸ್ಟ್ರೇಲಿಯಾ 112ಕ್ಕೆ ಕುಸಿತ, ಭಾರತಕ್ಕೆ ವಿಜಯ]

ಆದರೆ, ಟೀಂ ಇಂಡಿಯಾ ಗೆಲುವಿಗೆ ಬೇರೆಯದ್ದೇ ಕಾರಣವಿದೆ ಎನ್ನುತ್ತಿದೆ ಕ್ರಿಕೆಟ್ ಅಭಿಮಾನಿಗಳ ಬಳಗ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 188 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 112 ರನ್ ಗಳಿಗೆ ಕುಸಿತ ಕಂಡಿತು. [ಗ್ಯಾಲರಿ : ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ]

ಈ ಮೂಲಕ 75 ರನ್ ಗಳಿಂದ ಪಂದ್ಯವನ್ನು ಗೆದ್ದ ಕೊಹ್ಲಿ ಪಡೆ 1-1 ರಲ್ಲಿ ಸರಣಿ ಸಮ ಮಾಡಿಕೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪಂದ್ಯದ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ....

ಸೇಡು ತೀರಿಸಿಕೊಂಡ ಭಾರತ

ಸೇಡು ತೀರಿಸಿಕೊಂಡ ಭಾರತ

ಸುಮಾರು 19 ಪಂದ್ಯಗಳ ನಂತರ ಪುಣೆಯಲ್ಲಿ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ತಂಡ ಭಾರಿ ಸೋಲುಣಿಸಿ, ಗರ್ವಭಂಗ ಮಾಡಿತ್ತು. ಹಾಗಾಗಿ ಬೆಂಗಳೂರಿನ ಪಂದ್ಯ ಮಹತ್ವ ಪಡೆದಿತ್ತು. ಈ ಪಂದ್ಯವನ್ನು 75ರನ್ ಗಳಿಂದ ಗೆದ್ದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮನಾಗಿಸಿದೆ.

ಬೆಂಗಳೂರಲ್ಲಿ ಜಯ ವಿಶೇಷ

ಬೆಂಗಳೂರಲ್ಲಿ ಜಯ ವಿಶೇಷ

ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವು ಯಾವತ್ತಿದ್ದರೂ ವಿಶೇಷ. ಅದರಲ್ಲೂ ಬೆಂಗಳೂರಿನ ಪಿಚ್ ನಲ್ಲಿ ಗೆಲುವು ಸಾಧಿಸುವುದು ಇನ್ನೂ ವಿಶೇಷ.

ಬೆಂಗಳೂರಲ್ಲಿ ಆರ್ ಸಿಬಿ ನಾಯಕ

ಬೆಂಗಳೂರಲ್ಲಿ ಆರ್ ಸಿಬಿ ನಾಯಕ

ಪುಣೆಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಗೆಲುವು ಸಾಧಿಸಿದರೆ, ಬೆಂಗಳೂರಿನ ಪಿಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗೆಲುವು ಸಾಧಿಸಿದ್ದಾರೆ.

ಸೇಡು ತೀರಿಸಿಕೊಳ್ಳದೆ ಬಿಡಲ್ಲ

ಸೇಡು ತೀರಿಸಿಕೊಳ್ಳದೆ ಬಿಡಲ್ಲ

ಭಾರತದಲ್ಲಿ ನಾವು ಸುಮ್ಮನೆ ಸೋಲಲ್ಲ. ಸೋತರೆ ಸೇಡು ತೀರಿಸಿಕೊಳ್ಳದೆ ಬಿಡಲ್ಲ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X