ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿ

Social media words war turns ugly: Harbhajan singh reminds spot fixing scandal to Mohammad Amir
ಆಮೀರ್ ನಿಂಗಿದು ಬೇಕಿತ್ತಾ??ಕೇಳಿ ಇಸ್ಕೊಳ್ಳೋದು ಅಂದ್ರೆ ಇದೇ ಅನ್ಸತ್ತೆ | Oneindia Kannada

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ಪಂದ್ಯ ಮುಕ್ತಾಯವಾಗಿ ಅದಾಗಲೇ ಮೂರು ದಿನಗಳು ಕಳೆದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರ ದುರ್ವರ್ತನೆ ಮುಂದುವರಿದಿದೆ. ಅದರಲ್ಲೂ ಭಾರತದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಹಾಗೂ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮಿರ್ ನಡುವಿನ ಕಿತ್ತಾಟ ಕೆಟ್ಟ ಸ್ಥಿತಿಗೆ ತಲುಪಿದೆ. ಪಾಕಿಸ್ತಾನದ ಮೊಹಮ್ಮದ್ ಆಮಿರ್ ಟ್ವೀಟ್ ದಾಳಿಗೆ ಹರ್ಭಜನ್ ಸಿಂಗ್ ಕಟುವಾಗಿಯೇ ಪ್ರತಿಕ್ರಿಯಸಿದ್ದು ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ನೆನಪಿಸಿದ್ದಾರೆ. ಈ ಮೂಲಕ ಪಾಕ್ ಮಾಜಿ ಆಟಗಾರನಿಗೆ ತಿರುಗೇಟು ನೀಡಿದ್ದಾರೆ.

ಕಳೆದ ಭಾನುವಾರ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೂಖಾಮುಖಿಯಾದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮಿರ್ ಹರ್ಭಜನ್ ಸಿಂಗ್ ಅವರನ್ನು ಕೆಣಕಲು ಆರಂಭಿಸಿದ್ದರು. ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು ಭಾರತದ ಹಿರಿಯ ಕ್ರಿಕೆಟಿಗ ಈಗ ಪಾಕ್ ಮಾಜಿ ಆಟಗಾರನಿಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ನೆನಪಿಸಿದ್ದಾರೆ.

'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಮೊದಲು ಕೆಣಕಿದ್ದೇ ಅಮಿರ್

ಇನ್ನು ಈ ಟ್ವಿಟ್ಟರ್ ಸಮಯ ವೈಯಕ್ತಿಕ ಮಟ್ಟಕ್ಕೆ ಇಳಿಯಲು ಕಾರಣವೇ ಮೊಹಮ್ಮದ್ ಆಮಿರ್. ಭಾರತದ ವಿರುದ್ಧ ಗೆಲುವು ಸಾಧಿಸಿದ ಉತ್ಸಾಹದಲ್ಲಿ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಗುರಿಯಾಗಿರಿಸಿ ದಾಳಿ ಮಾಡಲು ಆರಂಭಿಸಿದ್ದರು ಆಮಿರ್. ಈ ಸಂದರ್ಭದಲ್ಲಿ ಮೊಹಮ್ಮದ್ ಆಮಿರ್ ದಶಕದ ಹಿಂದಿನ ವಿಡಿಯೋವೊಂದನ್ನು ಹಂಚಿಕೊಂಡು ಹರ್ಭಜನ್ ಸಿಂಗ್‌ಗೆ ಕೆಳಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಶಾಹಿದ್ ಅಫ್ರಿದಿ ಹರ್ಭಜನ್ ಸಿಂಗ್‌ ಎಸೆತಕ್ಕೆ ಸತತ ನಾಲ್ಕು ಸಿಕ್ಸರ್ ಬಾರಿಸುವ ವಿಡಿಯೋ ಇದಾಗಿದ್ದು ಇದಕ್ಕೆ ವ್ಯಂಗ್ಯವಾದ ತಲೆಬರಹವನ್ನು ಕೂಡ ನೀಡಿದ್ದರು.

"ನಾನು ಯೂಟ್ಯೂಬ್‌ನಲ್ಲಿ ವಿಡಿಯೋ ನೀಡುವುದರಲ್ಲಿ ತಲ್ಲೀನನಾಗಿದ್ದೆ ಹರ್ಭಜನ್ ಸಿಂಗ್. ನಿಮ್ಮ ಬೌಲಿಂಗ್ ನೋಡುತ್ತಿದ್ದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಿಮ್ಮ ಬೌಲಿಂಗ್‌ಗೆ ಲಾಲಾ(ಶಾಹೀದ್ ಅಫ್ರಿದಿ) ನಾಲ್ಕು ಎಸೆತಗಳಿಗೆ ನಾಲ್ಕು ಸಿಕ್ಸರ್ ಸಿಡಿಸಿದ್ದರು. ಕ್ರಿಕೆಟ್ ಅಂದರೆ ಇದು ನಡಿಯುತ್ತೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಇದು ಅತಿಯಾಯಿತು" ಎಂದು ಕೊಹಮ್ಮದ್ ಆಮಿರ್ ವ್ಯಂಗ್ಯವಾಡಿದ್ದರು.

ಲಾರ್ಡ್ಸ್ ಟೆಸ್ಟ್ ನೆನಪಿಸಿದ ಭಜ್ಜಿ

ಮೊಹಮ್ಮದ್ ಆಮಿರ್ ಈ ರೀತಿ ಹದ್ದು ಮೀರಿ ಟ್ವೀಟ್ ಮಾಡಲು ಆರಂಭಿಸಿದ ನಂತರ ಹರ್ಭಜನ್ ಸಿಂಗ್ ಕೂಡ ಅದೇ ದಾಟಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಅದರಲ್ಲೂ ಹರ್ಭಜನ್ ಸಿಂಗ್ ಈ ಸಂದರ್ಭದಲ್ಲಿ ಲಾರ್ಡ್ಸ್‌ನ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಮೊಹಮ್ಮದ್ ಆಮಿರ್‌ಗೆ ನೆನಪಿಸಿದ್ದಾರೆ. "ಲಾರ್ಡ್ಸ್‌ನಲ್ಲಿ ನೋ ಬಾರಿ ಯಾವ ರೀತಿ ಆಗಿತ್ತು? ಅದಕ್ಕಾಗಿ ಯಾರು ಎಚಷ್ಟು ಕೊಟ್ಟಿದ್ದರು? ಟೆಸ್ಟ್ ಕ್ರಿಕೆಟ್ ಅಂದರೆ ನೋ ಬಾಲ್ ಹೇಗಾಗುತ್ತದೆ? ಈ ಸುಂದರವಾಗಿ ಆಟವನ್ನು ಮಲಿನಗೊಳಿಸಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ನಾಚಿಕೆಯಾಗಬೇಕು" ಎಂದು ಹರ್ಭಜನ್ ಸಿಂಗ್ ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.

ಮುಂದುವರಿದ ಆಮಿರ್ ಉದ್ದಟತನ ಬದ್ಧತೆಯ ಪಾಠ ಹೇಳಿದ ಭಜ್ಜಿ

ಹರ್ಭಜನ್ ಸಿಂಗ್ ಈ ಟ್ವೀಟ್‌ನ ನಂತರವೂ ಮೊಹಮ್ಮದ್ ಆಮಿರ್ ತನ್ನ ಉದ್ದಟತನವನ್ನು ಬಿಟ್ಟಿರಲಿಲ್ಲ. ಹರ್ಭಜನ್ ಸಿಂಗ್ ವಿರುದ್ಧ ಮತ್ತೆ ಕೆಣಕುವ ಟ್ವಿಉಟ್ ಮಾಡಿದ್ದರು. ನಂತರ ಹರ್ಭಜನ್ ಸಿಂಗ್ ಮತ್ತೊಂದು ಟ್ವೀಟ್ ಮಾಡಿದ್ದಾರೆ "ಕೇವಲ ಹಣ, ಹಣ ಹಣ, ಮಾನ ಮರ್ಯಾದೆ ಯಾವುದೂ ಇಲ್ಲ.. ಕೇವಲ ಹಣ. ನಿಮಗೆ ಎಷ್ಟು ದೊರೆತಿದೆ ಎಂದು ನಿಮ್ಮ ದೇಶದ ಜನರಿಗೆ ಹಾಗೂ ನಿಮ್ಮ ಬೆಂಬಲಿಗೆ ತಿಳಿಸಿ. ಆಟವನ್ನು ಅವಮಾನಿಸಿದ ಮತ್ತು ಜನರನ್ನು ಮೂರ್ಖರನ್ನಾಗಿಸಿದ ನಿಮ್ಮಂತವರೊಂದಿಗೆ ಮಾತನಾಡಲೂ ಅಸಹ್ಯವಾಗುತ್ತಿದೆ" ಎಂದು ಹರ್ಭಜನ್ ಖಾರವಾಗಿಯೇ ಟ್ವಿಟ್ ಮಾಡಿದ್ದಾರೆ.

ಕೊನೇಯ ಟ್ವೀಟ್‌ನಲ್ಲಿ ಮತ್ತೊಂದು ಸಿಕ್ಸರ್!

ನಂತರ ಟೀಮ್ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತೊಂದು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಇದು ಹರ್ಭಜನ್ ಸಿಂಗ್ ಮೊಹಮ್ಮದ್ ಆಮಿರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವನ್ನಾಚರಿಸಿದ ವಿಡಿಯೋವಾಗಿದೆ. ಇದಕ್ಕೆ ಹರ್ಭಜನ್ ಸಿಂಗ್ "ಫಿಕ್ಸರ್‌ಗೆ ಸಿಕ್ಸರ್. ಮೈದಾನಕ್ಕಿಂತ ಹೊರಗೆ" ಎಂದು ಹರ್ಭಜನ್ ಸಿಂಗ್ ವ್ಯಂಗ್ಯವಾಡಿದ್ದಾರೆ.

Story first published: Wednesday, October 27, 2021, 17:46 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X