ನನ್ನ ಹಾಗೂ ರೋಹಿತ್ ಶರ್ಮಾ ಹಳೆಯ ಸಂಬಂಧದ ಕುರಿತು ಮಾತನಾಡದಿರಿ: ನನಗೆ ಆತನ ನೆನಪೇ ಇಲ್ಲ ಎಂದ ಸೋಫಿಯಾ!

ನಟಿ ಮತ್ತು ರೂಪದರ್ಶಿ ಸೋಫಿಯಾ ಹಯಾತ್ ಅವರು ಟೀಂ ಇಂಡಿಯಾ ನಾಯಕ ಮತ್ತು ಸ್ಟಾರ್ ಓಪನರ್ ರೋಹಿತ್ ಶರ್ಮಾ ಅವರೊಂದಿಗಿನ ಹಳೆಯ ಸಂಬಂಧದ ಕುರಿತು ಮಾತನಾಡಿದ್ದಾರೆ. ಆಕೆಯ ವೃತ್ತಿಜೀವನದ ಆರಂಭದಲ್ಲಿ, ರೋಹಿತ್ ಮತ್ತು ಸೋಫಿಯಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿದ್ದವು. ಅಷ್ಟೇ ಅಲ್ಲದೆ ಕೆಲವೊಮ್ಮೆ ಒಟ್ಟಿಗೆ ಸಹ ಕಾಣಿಸಿಕೊಂಡಿದ್ದರು. ಆದ್ರೆ ಇದೀಗ ಅದೆಲ್ಲಾ ಮುಗಿದ ಹೋದ ಕಥೆ ಎಂದು ಸೋಫಿಯಾ ಹಯಾತ್ ಹೇಳಿದ್ದಾರೆ.

ಸೋಫಿಯಾ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ರೋಹಿತ್ ರಿತಿಕಾ ಸಜ್ದೆಯನ್ನು ಪ್ರೀತಿಸಿದರು. ದಂಪತಿಗಳು 2015 ರಲ್ಲಿ ವಿವಾಹವಾದರು ಮತ್ತು ಈಗ ಸಮೀರಾ ಎಂಬ ಮಗಳನ್ನು ಹೊಂದಿದ್ದಾರೆ. ಹೀಗಾಗಿ ರೋಹಿತ್ ಜೊತೆಗಿನ ಹಳೆಯ ಸಂಬಂಧದ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ಸೋಫಿಯಾ ಈಗ ಪ್ರತಿಕ್ರಿಯಿಸಿದ್ದಾರೆ.

ನನ್ನ ಹಾಗೂ ರೋಹಿತ್ ಹೆಸರನ್ನು ಮತ್ತೆ ಚರ್ಚೆ ಮಾಡಬೇಡಿ

ನನ್ನ ಹಾಗೂ ರೋಹಿತ್ ಹೆಸರನ್ನು ಮತ್ತೆ ಚರ್ಚೆ ಮಾಡಬೇಡಿ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ತಮ್ಮ ಮತ್ತು ರೋಹಿತ್ ಶರ್ಮಾ ನಡುವಿನ ಹಳೆಯ ಸಂಬಂಧದ ಕುರಿತು ಮಾತನಾಡುವುದನ್ನು ಕೊನೆಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ. ದಯವಿಟ್ಟು ಇದನ್ನು ಮುಗಿಸುವಿರಾ? ನನ್ನ ಮತ್ತು ರೋಹಿತ್ ಶರ್ಮಾ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಜನರು ಇನ್ನೂ ನಾವಿಬ್ಬರು ಒಟ್ಟಿಗೆ ಇರಬೇಕೆಂದು ಬಯಸುತ್ತಾರೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸೋಫಿಯಾ ಹೇಳಿದ್ದಾರೆ.

3ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ 3 ಆಟಗಾರರು (ಏಕದಿನ ಕ್ರಿಕೆಟ್‌)

ಸೋಫಿಯಾ ಮತ್ತು ರೋಹಿತ್ ಹೆಸರು ಟ್ರೆಂಡಿಂಗ್

ಸೋಫಿಯಾ ಮತ್ತು ರೋಹಿತ್ ಹೆಸರು ಟ್ರೆಂಡಿಂಗ್

ಕಳೆದ ಕೆಲವು ದಿನಗಳಿಂದ ಸೋಫಿಯಾ ಮತ್ತು ರೋಹಿತ್ ಹೆಸರುಗಳು ಟ್ರೆಂಡಿಂಗ್ ಆಗಿವೆ. ಅವನು ಈಗ ಮದುವೆಯಾಗಿದ್ದಾನೆ ಮತ್ತು ಮಗುವನ್ನು ಹೊಂದಿದ್ದಾನೆ ಎಂಬ ಅಂಶವನ್ನು ನಾವು ಗೌರವಿಸಬೇಕಲ್ಲವೇ? ಎಂದು ಸೋಫಿಯಾ ಪ್ರಶ್ನಿಸಿದ್ದಾರೆ. ಜೊತೆಗೆ ರೋಹಿತ್ ಮದುವೆಗೆ ಸ್ವಲ್ಪ ಗೌರವ ನೀಡುವುದಾಗಿ ಆಕೆ ಹೇಳಿದ್ದಾರೆ.

ರೋಹಿತ್ ಶರ್ಮಾ ಹಾಗೂ ಸೋಫಿಯಾ ಅವರೊಂದಿಗಿನ ಸಂಬಂಧವು ಟ್ಯಾಗ್‌ಗಳ ಮೂಲಕ ಟ್ರೆಂಡಿಂಗ್ ಆಗಿದೆ. ನಮ್ಮ ಅಭಿಮಾನಿಗಳು ಈ ಸಂಬಂಧದ ಬಗ್ಗೆ ಟ್ರೆಂಡ್ ಮಾಡಲು ಪ್ರಾರಂಭಿಸಿದರು. ಈಗ ಎಲ್ಲವೂ ಮುಗಿದಿದೆ, ನಮ್ಮ ಸಂಬಂಧ ಬಹಳ ಹಿಂದೆಯೇ ಇತ್ತು. ನಾವಿಬ್ಬರೂ ಈಗ ಸಂತೋಷದಿಂದ ನಮ್ಮಿಷ್ಟಕ್ಕೆ ನಾವು ಮುನ್ನಡೆಯುತ್ತಿದ್ದೇವೆ ಎಂದು ಸೋಫಿಯಾ ಹೇಳಿದ್ದಾರೆ.

IND vs IRE: ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಭುವನೇಶ್ವರ್ ಕುಮಾರ್

ನನ್ನ ಹಾಗೂ ರೋಹಿತ್ ಬಗ್ಗೆ ಮಾತನಾಡುವುದರ ಬದಲು, ಬೇರೆ ಏನನ್ನಾದ್ರೂ ಹುಡುಕಿ

ರೋಹಿತ್ ಮತ್ತು ನಾನು ಒಟ್ಟಿಗೆ ಇರಲು ಎಲ್ಲರೂ ಬಯಸುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಇನ್ನು ಜೀವನದಲ್ಲಿ ಹಾಗಾಗುವುದಿಲ್ಲ. ರೋಹಿತ್ ಮತ್ತು ನನ್ನ ಬದಲು ಮಾತನಾಡುವ ಬದಲು ಬೇರೆ ಏನನ್ನಾದರೂ ಹುಡುಕಿ.ನಾನು ಅವನು ಯಾರೆಂಬುದನ್ನು ಮರೆತಿದ್ದೇನೆ ಮತ್ತು ರೋಹಿತ್ ಅವರ ನೋಟ ಮತ್ತು ಮುಖವನ್ನೇ ನಾನು ಮರೆತಿದ್ದೇನೆ ಎಂದು ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ ಜೊತೆ ಸೋಫಿಯಾ ಹಯಾತ್ ಅವರ ಹಳೆಯ ಸಂಬಂಧ ಈಗ ಹಾಟ್ ಟಾಪಿಕ್ ಆಗಿದೆ. ಕೆಲವು ದಿನಗಳ ಹಿಂದೆ, ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ಮತ್ತು ಸೋಫಿಯಾ ನಡುವಿನ ಸಂಬಂಧವನ್ನು ಹಲವರು ಟೀಕಿಸಿದ್ದರು. ಇದು ನಂತರ ಟ್ರೆಂಡ್ ಆಯಿತು, ಅಲ್ಲದೆ ಚರ್ಚೆಗೂ ಸಹ ಕಾರಣವಾಯ್ತು.

For Quick Alerts
ALLOW NOTIFICATIONS
For Daily Alerts
Story first published: Monday, June 27, 2022, 17:02 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X