ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ನಾಯಕನಾಗಿ ಕೊಹ್ಲಿ ಏಳಿಗೆಯನ್ನು ತುಂಬಾ ಮಂದಿಗೆ ಸಹಿಸಲು ಆಗುತ್ತಿರಲಿಲ್ಲ: ರವಿ ಶಾಸ್ತ್ರಿ ಟಾಂಗ್ ಕೊಟ್ಟಿದ್ದು ಯಾರಿಗೆ?

some wouldnt have digested Virat Kohli Success in test cricket as captain: Ravi Shastri

ಟೀಮ್ ಇಂಡಿಯಾದ ನಾಯಕನಾಗಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಬಳಿಕ ಟೆಸ್ಟ್ ಮಾದಿಯಲ್ಲಿಯೂ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಈ ಮೂಲಕ ಮೂರು ಮಾದರಿಯಿಂದಲೂ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಂತಾಗಿದೆ. ಕೊಹ್ಲಿಯ ಈ ನಿರ್ಧಾರ ಸಾಕಷ್ಟು ಚರ್ಚೆಗಳು ಹಾಗೂ ಪ್ರಶ್ನೆಗಳನ್ನೇಳುವಂತೆ ಮಾಡಿದೆ. ಅಭಿಮಾನಿಗಳಲ್ಲಿ ಈ ವಿಚಾರವಾಗಿ ಸಾಕಷ್ಟು ಗೊಂದಲಗಳು ಇನ್ನೂ ಇವೆ. ಈ ಎಲ್ಲಾ ಗೊಂದಲಗಳ ಮಧ್ಯೆ ಬಿಸಿಸಿಐ ಹೊಸ ನಾಯಕನ ಘೋಷಣೆಗೆ ಸಜ್ಜಾಗಿದೆ.

ಇನ್ನು ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಕ್ಕಿಳಿದ ಬಳಿಕ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರವಿ ಶಾಸ್ತ್ರಿ ಟೀಮ್ ಇಂಡಿಯಾ ವನ್ನು ವಿರಾಟ್ ಕೊಹ್ಲಿ ಇನ್ನೂ ಎರಡು ವರ್ಷಗಳ ಕಾಲ ಸುಲಭವಾಗಿ ಮುನ್ನಡೆಸುತ್ತಿದ್ದರು. ಟೆಸ್ಟ್ ಮಾದರಿಯಲ್ಲಿ ಸರ್ವ ಶ್ರೇಷ್ಠ ನಾಯಕನಾಗಿ ನಾಯಕತ್ವ ಕೊನೆಗೊಳಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ಆದರೆ ಬಹಳ ಜನರು ಅದನ್ನು ಇಷ್ಟಪಡಲಿಲ್ಲ ಎಂದು ರವಿ ಶಾಸ್ತ್ರಿ ನೇರವಮಾತುಗಳನ್ನು ಆಡಿದ್ದಾರೆ.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಹೆಸರು ಹೇಳದೆಯೇ ರವಿ ಶಾಸ್ತ್ರಿ ಟಾಂಗ್

ಹೆಸರು ಹೇಳದೆಯೇ ರವಿ ಶಾಸ್ತ್ರಿ ಟಾಂಗ್

ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಮದ ಕೆಳಕ್ಕಿಳಿದ ವಿಚಾರವಾಗಿ ರವಿ ಶಾಸ್ತ್ರಿ ಯಾವುದೇ ಹೆಸರನ್ನು ಹೇಳದೆಯೇ ತಮ್ಮ ಅಸಮಾಧಾನ, ಆಕ್ರೋಶವನ್ನು ಹೊರಹಾಕಿದ್ದಾರೆ. ರವಿ ಶಾಸ್ತ್ರಿ ಇತ್ತೀಚೆಗಷ್ಟೇ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಭಾರತದ ಹೋರಾಟ ಅಂತ್ಯವಾಗುತ್ತಿದ್ದಂತೆಯೇ ಕೋಚ್ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಅದಾದ ಬಳಿಕ ವಿರಾಟ್ ಕೊಹ್ಲಿ ಕೂಡ ಮೊದಲಿಗೆ ಟಿ20 ನಂತರ ಏಕದಿನ ಹಾಗೂ ಈಗ ಟೆಸ್ಟ್ ನಾಯಕತ್ವದಿಂದ ಕೂಡ ಕೆಳಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ರವಿ ಶಾಸ್ತ್ರಿ ಟೆಸ್ಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ಸಾಧಿಸಿದ ಯಶಸ್ಸನ್ನು ಅರಗಿಸಿಕೊಳ್ಳಲು ಬಹಳ ಮಂದಿಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕನಿಷ್ಠ ಎರಡು ವರ್ಷ ಖಂಡಿತಾ ಮುನ್ನಡೆಸುತ್ತಿದ್ದರು

ಕನಿಷ್ಠ ಎರಡು ವರ್ಷ ಖಂಡಿತಾ ಮುನ್ನಡೆಸುತ್ತಿದ್ದರು

ರವಿ ಶಾಸ್ತ್ರಿ ಸದ್ಯ ಒಮಾನ್‌ನಲ್ಲಿದ್ದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಕಮಿಶನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂಡಿಯಾ ಟುಡೇ ಜೊತೆಗೆ ಅವರು ಮಾತನಾಡಿದರು. "ಒಂದು ವೇಳೆ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದರೆ ಖಂಡಿತವಾಗಿಯೂ ಅವರು ಕನಿಷ್ಠ ಎರಡು ವರ್ಷಗಳ ಕಾಲ ಮುಂದುವರಿಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಒಟ್ಟಾರೆ ಟೆಸ್ಟ್ ನಾಯಕನಾಗಿ 50-60 ಗೆಲುವುಗಳನ್ನು ಸಾಧಿಸಿರುತ್ತಿದ್ದರು. ಈ ಸತ್ಯವನ್ನು ಸಾಕಷ್ಟು ಮಂದಿಗೆ ಅರಿಗಿಸಿಕೊಳ್ಳಲು ಸಾಧಯವಾಗಲಿಲ್ಲ" ಎಂದು ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ನಾಯಕತ್ವದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ

ಕೊಹ್ಲಿ ನಾಯಕತ್ವದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ

"ಆತ ಖಂಡಿತಾ ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಆತನ ನಿರ್ಧಾರವನ್ನು ನಾವು ಗೌರವಿಸಬೇಕಿದೆ. ಯಾವುದೇ ದೇಶದ ಪರವಾಗಿಯೂ ಈ ರೀತಿಯ ಅಂಕಿಅಂಶಗಳನ್ನು ಹೊಂದುವುದು ಅಮೋಘವಾದದ್ದು. ಆತ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಗೆಲುವು ಸಾಧಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದಿಮದ ಸೋಲು ಅನುಭವಿಸಿದ್ದರೂ ಇನ್ನೂ ಆತ ನಾಯಕನಾಗಿ ಮುಂದುವರಿಯಬೇಕಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ" ಎಂದು ಭಾರತೀಯ ತಂಡದ ಮಾಜಿ ಕೋಚ್ ಹಾಗೂ ಮಾಜಿ ಆಲ್‌ರೌಂಡರ್ ರವಿ ಶಾಸ್ತ್ರಿ ಹೇಳಿದ್ದಾರೆ.

ಈ ದಾಖಲೆ ಭಾರತದ ಯಾರೂ ಹೊಂದಿಲ್ಲ

ಈ ದಾಖಲೆ ಭಾರತದ ಯಾರೂ ಹೊಂದಿಲ್ಲ

ವಿರಾಟ್ ಕೊಹ್ಲಿ ಭಾರತ ತಂಡವನ್ನು 5-6 ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ಐದು ವರ್ಷಗಳ ಕಾಲ ಭಾರತ ತಂಡ ಟೆಸ್ಟ್ ತಂಡದ ನಂಬರ್ 1 ಆಗಿತ್ತು. ಈ ರೀತಿಯ ದಾಖಲೆಯನ್ನು ಯಾವುದೇ ಭಾರತೀಯ ನಾಯಕ ಕೂಡ ಹೊಂದಿಲ್ಲ. ವಿಶ್ವಮಟ್ಟದಲ್ಲಿಯೂ ಕೆಲವೇ ಕೆಲವು ನಾಯಕರು ಮಾತ್ರವೇ ಇಂತಾ ಸಾಧನೆ ಮಾಡಿದ್ದಾರೆ. ಹಾಗಾಗಿ ಅತ್ಯಂತ ಯಶಸ್ವಿ ನಾಯಕನೊಬ್ಬ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರೆ ಅದು ಆತನ ವೈಯಕ್ತಿಕ ನಿರ್ಧಾರವಾಗಿದೆ. ಏಕೆಂದರೆ ಆತನ 40 ಗೆಲುವುಗಳು ದಾಖಲೆ ಅಮೋಘವಾಗಿದೆ" ಎಂದು ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.

Team India ಹೀನಾಯ ಸೋಲಿಗೆ ಕಾರಣರಾದ್ರಾ ಕನ್ನಡಿಗರು!! | Oneindia Kannada

Story first published: Monday, January 24, 2022, 10:21 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X