ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಸಿಬಿ ಜೊತೆ 2028ರ ವರೆಗೆ ಒಪ್ಪಂದ ವಿಸ್ತರಿಸಿದ ಸೋನಿ ನೆಟ್‌ವರ್ಕ್

Sony Pictures Networks India and ECB announce extending broadcast deal till 2028

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೊತೆಗಿನ ಒಪ್ಪಂದವನ್ನು ಸೋನಿ ನೆಟ್‌ವರ್ಕ್ಸ್ ವಿಸ್ತರಿಸಿದೆ. 2028ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಯ ಪ್ರಸಾರವನ್ನು ಭಾರತದಲ್ಲಿ ಸೋನಿ ನೆಟ್‌ವರ್ಕ್ ಮಾಡಲಿದೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯ ಪಂದ್ಯಗಳ ಟೆಲಿವಿಶನ್ ಹಾಗೂ ಬ್ರಾಡ್‌ಕಾಸ್ಟ್ ಹಕ್ಕನ್ನು ಉಳಿಸಿಕೊಂಡಿದ್ದು ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ, ಭೂತಾನ್, ಮಯನ್ಮಾರ್ ಮತ್ತು ಮಾಲ್ಡೀವ್ಸ್‌ನಲ್ಲಿ ಪ್ರಸಾರದ ಹಕ್ಕನ್ನು ಹೊಂದಿರಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು ಕಳೆದುಕೊಂಡ ನಂತರ, ಸೋನಿ ಪಿಚ್ಚರ್ಸ್ ನೆಟ್‌ವರ್ಕ್ಸ್ ಸಾಧ್ಯವಾದಷ್ಟು ಅಂತಾರಾಷ್ಟ್ರೀಯ ತಂಡಗಳ ಹಕ್ಕುಗಳನ್ನು ಪಡೆಯಲು ಬಯಸಿದೆ. ಅದರ ಭಾಗವಾಗಿ ಸೋನಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2028 ರವರೆಗಿನ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವರ್ಷಕ್ಕೆ ಈ ಹಿಂದಿನ ಒಪ್ಪಂದ ಅಂತ್ಯವಾಗಬೇಕಿತ್ತು. ಈಗ ಹೊಸ ಒಪ್ಪಂದದ ಕಾರಣದಿಂದಾಗಿ ಸೋನಿ ಈಗ ಇಂಗ್ಲೆಂಡ್ ಪುರುಷ ಮತ್ತು ಮಹಿಳಾ ತಂಡಗಳ ಎಲ್ಲಾ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಂತಾಗಿದೆ. ಅಷ್ಟೇ ಅಲ್ಲದೆ ಈಗ ಸೋನಿಯು ಉಪಖಂಡದಲ್ಲಿ ಕೌಂಟಿ ಚಾಂಪಿಯನ್‌ಶಿಪ್, ವಿಟಾಲಿಟಿ T20 ಬ್ಲಾಸ್ಟ್ ಮತ್ತು ರಾಯಲ್ ಲಂಡನ್ ಏಕದಿನ ಕಪ್ ಅನ್ನು ಪ್ರಸಾರ ಮಾಡುವ ಅಧಿಕೃತ ಹಕ್ಕುಗಳನ್ನು ಕೂಡ ಹೊಂದಿದೆ.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗAsia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

"ಈ ಪಾಲುದಾರಿಕೆಯನ್ನು ಇನ್ನೂ ಆರು ವರ್ಷಗಳವರೆಗೆ ವಿಸ್ತರಿಸಲು ನಾವು ಸಂತೋಷಪಡುತ್ತೇವೆ, ಇಂಗ್ಲೆಂಡ್‌ನ ತವರಿನಲ್ಲಿ ನಡೆಯಲಿರುವ ಪುರುಷರ ಮತ್ತು ಮಹಿಳೆಯರ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಜಾಗತಿಕ ಪ್ರೇಕ್ಷಕರಿಗೆ ಪ್ರಸಾರ ಮಾಡುತ್ತೇವೆ. ಈ ಪಾಲುದಾರಿಕೆಯು ಪುರುಷರ ಕೌಂಟಿ ಆಟವನ್ನು ವಿಶ್ವದ ಅತಿದೊಡ್ಡ ಕ್ರಿಕೆಟ್ ಪ್ರೇಕ್ಷಕರಿಗೆ ತರಲು ನಮಗೆ ಅನುವು ಮಾಡಿಕೊಡುತ್ತದೆ" ಎಂದುಇ ಸಿಬಿಯ ಮಧ್ಯಂತರ ಸಿಇಒ ಕ್ಲೇರ್ ಕಾನರ್ ಹೇಳಿದ್ದಾರೆ.

ಮತ್ತೊಂದೆಡೆ ಮುಂದಿನ ಏಳು ವರ್ಷಗಳ ಕಾಲ ಆಸ್ಟ್ರೇಲಿಯನ್ ಕ್ರಿಕೆಟ್ ಅನ್ನು ಪ್ರಸಾರ ಮಾಡುವ ಹಕ್ಕನ್ನು ಡಿಸ್ನಿ ಸ್ಟಾರ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋನಿ ಪಿಕ್ಚರ್ಸ್ ಲಿಮಿಟೆಡ್ ಈ ಹಿಂದೆ ಇದರ ಹಕ್ಕುಗಳನ್ನು ಹೊಂದಿತ್ತು. ಆದರೆ ಡಿಸ್ನಿ ಸ್ಟಾರ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ 2023-24ನೇ ಕ್ರಿಕೆಟ್ ಋತುವಿನೊಂದಿಗೆ ಆರಂಭವಾಗಲಿದೆ. ಡಿಸ್ನಿ ಸ್ಟಾರ್ ಕೇವಲ ಅಂತರರಾಷ್ಟ್ರೀಯ ಆಟಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿರುವುದಲ್ಲದೆ ಪುರುಷರ ಮತ್ತು ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ನ ಎಲ್ಲಾ ಪಂದ್ಯಗಳನ್ನು ಕೂಡ ಪ್ರಸಾರ ಮಾಡಲಿದೆ.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada

ಇನ್ನು ಈ ಒಪ್ಪಂದದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಪ್ರತಿಕ್ರಿಯಿಸಿದ್ದಾರೆ. "2023/24 ಸೀಸನ್‌ನಿಂದ ಡಿಸ್ನಿ ಸ್ಟಾರ್‌ನೊಂದಿಗೆ ಈ ಹೊಸ ಸಂಬಂಧವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಡಿಸ್ನಿ ಸ್ಟಾರ್ ಭಾರತದಲ್ಲಿ ಕ್ರಿಕೆಟ್‌ಗೆ ಸಮಾನಾರ್ಥಕವಾಗಿದೆ. ಪ್ರತಿ ಬೇಸಿಗೆಯಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಅತ್ಯುತ್ತಮ ಕ್ರಿಕೆಟ್ ಪ್ರದರ್ಶಿಸಲು ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ" ಎಂದು ಹೇಳಿದ್ದಾರೆ.

Story first published: Thursday, August 11, 2022, 10:28 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X