ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ಯಾವಾಗಲೂ ಮಾರಿಗೋಲ್ಡ್‌ ಬಿಸ್ಕೆಟ್‌ ಕೊಡುತ್ತಿದ್ರು: ಪಾರ್ಥೀವ್ ಪಟೇಲ್

Sourav ganguly

ಟೀಂ ಇಂಡಿಯಾ ಅತ್ಯಂತ ಯಶಸ್ವಿ ನಾಯಕರಲ್ಲಿ ಪ್ರಮುಖರಾದ ಮಾಜಿ ಆಟಗಾರ ಸೌರವ್‌ ಗಂಗೂಲಿ ಕುರಿತಾಗಿ, ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥೀವ್ ಪಟೇಲ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸೌರವ್ ಗಂಗೂಲಿ ನಾಯಕರಾಗಿದ್ದ ವೇಳೆಯಲ್ಲಿ ಯಾವುದೇ ಪ್ರವಾಸದಲ್ಲೂ ಮಾರಿಗೋಲ್ಡ್‌ ಬಿಸ್ಕೆಟ್‌ ಜೊತೆಯಲ್ಲಿರುತ್ತಿತ್ತು ಎಂದಿದ್ದಾರೆ.

ಸೌರವ್‌ ಗಂಗೂಲಿಗೆ ಮಾರಿಗೋಲ್ಡ್ ಬಿಸ್ಕೆಟ್‌ ಅಂದ್ರೆ ಅಷ್ಟೊಂದು ಇಷ್ಟನಾ ಎಂದು ನೀವು ಅಂದುಕೊಳ್ಳಬಹುದು? ಆದ್ರೆ ಮಾರಿಗೋಲ್ಡ್‌ ಬಿಸ್ಕೆಟ್‌ ಹಾಗೂ ಗಂಗೂಲಿ ಲವ್ ಏನೂ ಎಂಬುದನ್ನ ಪಾರ್ಥೀವ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಗಂಗೂಲಿ ನಾಯಕತ್ವದ ಗುಣಗಳ ಕುರಿತು ಪಾರ್ಥೀವ್ ಪಟೇಲ್ ಗುಣಗಾನ

ಗಂಗೂಲಿ ನಾಯಕತ್ವದ ಗುಣಗಳ ಕುರಿತು ಪಾರ್ಥೀವ್ ಪಟೇಲ್ ಗುಣಗಾನ

ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಿದ್ದ ಪಾರ್ಥೀವ್ ಪಟೇಲ್, ಗಂಗೂಲಿ ಆಟಗಾರರನ್ನ ನಿರ್ವಹಣೆಯ ಕೌಶಲ್ಯದ ಕುರಿತು ಹೊಗಳಿಕೆಯ ಮಾತನಾಡಿದ್ದಾರೆ. ಗಂಗೂಲಿ ತಂಡವನ್ನ ಗೆದ್ದಾಗ ಮತ್ತು ಸೋತಾಗ ತೆಗೆದುಕೊಂಡು ಹೋಗುತ್ತಿದ್ದ ರೀತಿಯನ್ನು ವಿವರಿಸಿದ್ರು. ಜೊತೆಗೆ ಒಂದು ವಿಶೇಷ ಸಂಗತಿಯನ್ನ ಸಹ ಬಿಚ್ಚಿಟ್ಟಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ 2022: 10,000 ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿಯಾಂಕಾ

146 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ಗಂಗೂಲಿ

146 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ಗಂಗೂಲಿ

ಸೌರವ್‌ ಗಂಗೂಲಿ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ ಎರಡನೇ ನಾಯಕರಾಗಿದ್ದಾರೆ. 1999ರಿಂದ 2005ರವರೆಗೆ 146 ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಸೌರವ್‌, ಮೊಹಮ್ಮದ್ ಅಜರುದ್ದೀನ್ ಬಳಿಕ ಅತಿ ಹೆಚ್ಚು ಒಡಿಐ ಪಂದ್ಯದ ನಾಯಕರಾಗಿದ್ದಾರೆ.

146 ಏಕದಿನ ಪಂದ್ಯಗಳಲ್ಲಿ ಭಾರತವನ್ನು 76 ಪಂದ್ಯಗಳಲ್ಲಿ ಗೆಲುವಿನ ದಡ ತಲುಪಿಸಿರುವ ಕೀರ್ತಿ ಸೌರವ್‌ ಗಂಗೂಲಿಗಿದೆ. ಆದರೆ ಈ ಅಂಕಿಅಂಶಗಳ ಜೊತೆಗೆ, ಗಂಗೂಲಿ ಅತ್ಯುತ್ತಮ ಮ್ಯಾನೇಜ್‌ಮೆಂಟ್ ಸಾಮರ್ಥ್ಯಗಳನ್ನು ಹೊಂದಿದ್ದರು ಮತ್ತು ಪ್ರತಿಯೊಬ್ಬರನ್ನು ಸಮಾಧಾನಪಡಿಸುವಲ್ಲಿ ಪರಿಣತರಾಗಿದ್ದರು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ- ನಟಿ ನಗ್ಮಾ ನಡುವಿನ ಲವ್ ಸ್ಟೋರಿ & ಬ್ರೇಕಪ್!

ಸೌರವ್‌ ಗಂಗೂಲಿ ಹಾಗೂ ಮಾರಿಗೋಲ್ಡ್‌ ಬಿಸ್ಕೆಟ್‌ ಕುರಿತು ಪಟೇಲ್ ಮಾತು

ಸೌರವ್‌ ಗಂಗೂಲಿ ಹಾಗೂ ಮಾರಿಗೋಲ್ಡ್‌ ಬಿಸ್ಕೆಟ್‌ ಕುರಿತು ಪಟೇಲ್ ಮಾತು

"ನಮ್ಮ ದಿನ ಅಥವಾ ಆಟವು ಸರಿಯಾಗಿ ನಡೆಯದಿದ್ದರೂ ಅವರು ಎಲ್ಲರಿಗೂ ಸಂತೋಷವನ್ನುಂಟುಮಾಡುತ್ತಿದ್ದರು. ಅವರು ಯಾವಾಗಲೂ ತಮ್ಮೊಂದಿಗೆ ಮಾರಿಗೋಲ್ಡ್ ಬಿಸ್ಕೆಟ್‌ಗಳನ್ನು ಕೊಂಡೊಯ್ಯುತ್ತಿದ್ದಲ್ಲದೆ, ಎಲ್ಲರಿಗೂ ನೀಡುತ್ತಿದ್ದರು, "ಎಂದು ಪಟೇಲ್ 'ಕ್ರಿಕ್‌ಚಾಟ್ ಪವರ್ಡ್ ಬೈ ಪ್ಯಾರಿಮ್ಯಾಚ್'ನ ಆಡಿಯೊ ಚಾಟ್‌ರೂಮ್ ಸೆಷನ್‌ನಲ್ಲಿ ಹೇಳಿದರು.

ತಂಡವನ್ನ ಆಯ್ಕೆ ಮಾಡುವುದರ ಮೇಲೆ ಟಿ20 ವಿಶ್ವಕಪ್‌ ಫಲಿತಾಂಶ ಹೊರಬರಲಿದೆ!

ತಂಡವನ್ನ ಆಯ್ಕೆ ಮಾಡುವುದರ ಮೇಲೆ ಟಿ20 ವಿಶ್ವಕಪ್‌ ಫಲಿತಾಂಶ ಹೊರಬರಲಿದೆ!

ಸೌರವ್‌ ಗಂಗೂಲಿ ನಾಯಕತ್ವದ ಕುರಿತಾಗಿ ಮಾತನಾಡಿದ್ದರ ಜೊತೆಗೆ, ಪ್ರಸ್ತುತ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ತಂಡವು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದಲ್ಲಿ ಸಾಕಷ್ಟು ಪರಿಶ್ರಮ ಪಡಬೇಕಿದೆ ಎಂದಿದ್ದಾರೆ.

"ಭಾರತದ ಫಲಿತಾಂಶವು ತಂಡದ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ. ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಆದರ್ಶ ತಂಡವನ್ನು ಆಯ್ಕೆ ಮಾಡುವುದು ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಪ್ರಮುಖ ಕೆಲಸವಾಗಿದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

"ತಂಡವು ಉತ್ತಮವಾಗಿದೆ ಎಂದು ತೋರುತ್ತಿದೆ, ಆಸ್ಟ್ರೇಲಿಯಾವು ಭಾರತಕ್ಕೆ ಸವಾಲಾಗಬಹುದು. ಕಳೆದ ವಿಶ್ವಕಪ್‌ನಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಬಲಗೊಂಡಿದ್ದರೂ, ಆಸ್ಟ್ರೇಲಿಯಾ ಹೆಚ್ಚು ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣುತ್ತದೆ'' ಎಂದು ಪಾರ್ಥೀವ್ ಅಭಿಪ್ರಾಯ ಪಟ್ಟಿದ್ದಾರೆ.

Story first published: Sunday, August 7, 2022, 9:02 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X