ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಜ್ಜಾದ ಮಾಜಿ ನಾಯಕ ಸೌರವ್ ಗಂಗೂಲಿ!

 Sourav Ganguly set to be new BCCI president, Brijesh Patel likely to be IPL Chairman

ಮುಂಬೈ, ಅಕ್ಟೋಬರ್ 14: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧಿಕಾರ ಚುಕ್ಕಾಣಿ ಹಿಡಿಯಲು ಮಾಜಿ ನಾಯಕ ಸೌರವ್ ಗಂಗೂಲಿ ಸಜ್ಜಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯಂಥ ಪ್ರಮುಖ ಹುದ್ದೆಗಳಲ್ಲದೆ, ಹೊಸದಾಗಿ ರಚನೆಯಾಗಿರುವ ಬಿಸಿಸಿಐನ ಶಕ್ತಿಶಾಲಿ ಅಪೆಕ್ಸ್ ಕೌನ್ಸಿಲ್ ಗೆ ಚುನಾವಣೆ ನಡೆಯಲಿದ್ದು, ಪ್ರಮುಖ ಹುದ್ದೆಗಳಿಗೆ ಕೇಳಿ ಬಂದಿರುವ ಹೆಸರುಗಳು ಕುತೂಹಲಕಾರಿಯಾಗಿವೆ.

ಬಿಸಿಸಿಐ ಚುನಾವಣಾಧಿಕಾರಿ ಎನ್.ಗೋಪಾಲಸ್ವಾಮಿ ಸೋಮವಾರದಂದೇ ನಾಮಪತ್ರ ಸಲ್ಲಿಸಬೇಕಿದೆ. ಮಂಗಳವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶವಿದ್ದು, ಅಂತಿಮ ಪಟ್ಟಿ ಬುಧವಾರ ಪ್ರಕಟಗೊಳ್ಳಲಿದೆ. ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಿರೀಕ್ಷಿಸಲಾಗಿದೆ. ಬಿಸಿಸಿಐನ 38 ಅಂಗಸಂಸ್ಥೆಗಳ ಪೈಕಿ 30 ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸಲಿವೆ.

ಈ ನೇಮಕಾತಿ ಮೂಲಕ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತಾಧಿ ಕಾರಿಗಳ ಸಮಿತಿಯ (ಸಿಒಎ) ಹಿಡಿತದಿಂದ ಬಿಸಿಸಿಐ ಹೊರ ಬರಲಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಪತ್ರಕರ್ತ, ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮ ಹೆಸರು ಕೇಳಿಬಂದಿದೆ. ಇದಲ್ಲದೆ, ಐಪಿಎಲ್ ಚೇರ್ಮನ್ ಹುದ್ದೆಗೆ ಬ್ರಿಜೇಶ್ ಪಟೇಲ್ ಹೆಸರು ಬಲವಾಗಿ ಕೇಳಿ ಬಂದಿದೆ.

ಗೃಹ ಸಚಿವ ಅಮಿತ್ ಷಾ ಪುತ್ರ ಹಾಗೂ ಗುಜರಾತ್ ಕ್ರಿಕೆಟ್ ಸಂಸ್ಥೆ ಪ್ರತಿನಿಧಿ ಜಯ್ ಷಾ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅರುಣ್ ಸಿಂಗ್ ಧುಮಲ್ ಬಿಸಿಸಿಐನಲ್ಲಿ ಉನ್ನತ ಹುದ್ದೆ ಪಡೆಯಲಿದ್ದಾರೆ.

Story first published: Monday, October 14, 2019, 10:33 [IST]
Other articles published on Oct 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X