ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸೌರವ್ ಗಂಗೂಲಿ ನಿರ್ಧಾರ

Sourav Ganguly decided To Stay In Hospital One More Day

ಟೀಮ್ ಇಂಡಿಯಾ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೂ ಒಂದು ದಿನ ಆಸ್ಪತ್ರೆಯಲ್ಲೇ ಉಳಿದುಕೊಂಡು ಗುರುವಾರ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲು ನಿರ್ಧರಿಸಿದ್ದಾರೆ. ನಿಗದಿಯಂತೆ ಗಂಗೂಲಿ ಬುಧವಾರ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಬೇಕಿತ್ತು.

ಜನವರಿ 2ರಂದು ಸೌರವ್ ಗಂಗೂಲಿಗೆ ಮನೆಯ ಜಿಮ್‌ನಲ್ಲಿ ಮಧ್ಯಾಹ್ನ ವರ್ಕೌಟ್ ಮಾಡುತ್ತಿದ್ದ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಗಂಗೂಲಿ ತಕ್ಷಣವೇ ಕೊಲ್ಕತ್ತಾದಲ್ಲಿರುವ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಲಘು ಹೃದಯಾಘಾತವಾಗಿರುವುದನ್ನು ತಿಳಿಸಿದ ಆಸ್ಪತ್ರೆ ವೈದ್ಯರು ತಕ್ಷಣವೇ ಗಂಗೂಲಿಗೆ ಆ್ಯಂಜಿಯೋ ಪ್ಲಾಸ್ಟಿ ನಡೆಸಿದ್ದರು.

ಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಆಡುವ ಬಳಗ ಪ್ರಕಟ, ಮಯಾಂಕ್ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಆಡುವ ಬಳಗ ಪ್ರಕಟ, ಮಯಾಂಕ್ ಹೊರಕ್ಕೆ

ಬಳಿಕ ಸೌರವ್ ಗಂಗೂಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು ಚೇತರಿಕೆಯನ್ನು ಕಂಡಿದ್ದಾರೆ. ಮಂಗಳವಾರ ಕೊಲ್ಕತ್ತಾ ಆಸ್ಪತ್ರೆಗೆ ದೇಶದ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಭೇಟಿ ನೀಡಿ ಗಂಗೂಲಿಯನ್ನು ಪರೀಕ್ಷಿಸಿದ್ದರು. ಬುಧವಾರ ಆಸ್ಪತ್ರೆಯಿಂದ ಬಿಡುಗಡೆಹೊಂದಲು ಡಾ. ದೇವಿ ಶೆಟ್ಟಿ ಕೂಡ ಒಪ್ಪಿಗೆ ಸೂಚಿಸಿದ್ದರು.

ಆದರೆ ಬುಧವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿಯನ್ನು ನೀಡಿದ್ದು ಗಂಗೂಲಿ ಒಂದು ದಿನ ಹೆಚ್ಚುವರಿಯಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ನಿರ್ಧಾರವನ್ನು ಸ್ವತಃ ಸೌರವ್ ಗಂಗೂಲಿಯೇ ತೆಗೆದುಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

50ನೇ ವರ್ಷದ ಸಂಭ್ರಮದಲ್ಲಿ ಏಕದಿನ ಕ್ರಿಕೆಟ್: ಮಳೆಯಿಂದಾಗಿ ಜನ್ಮ ತಾಳಿತ್ತು ಜನಪ್ರಿಯ ಮಾದರಿ50ನೇ ವರ್ಷದ ಸಂಭ್ರಮದಲ್ಲಿ ಏಕದಿನ ಕ್ರಿಕೆಟ್: ಮಳೆಯಿಂದಾಗಿ ಜನ್ಮ ತಾಳಿತ್ತು ಜನಪ್ರಿಯ ಮಾದರಿ

ಸೌರವ್ ಗಂಗೂಲಿಗೆ ಮತ್ತೊಂದು ಆಂಜಿಯೋಪ್ಲಾಸ್ಟಿ ನಡೆಸುವ ಅವಶ್ಯಕತೆಯಿದೆ ಎಂದು ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ. ಆದರೆ ಅದನ್ನು ಸದ್ಯದಲ್ಲಿ ನಡೆಸದೆ ಎರಡ್ಮೂರು ವಾರಗಳ ವಿಶ್ರಾಂತಿಯ ಬಳಿಕ ನಡೆಸಲು ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ವ್ಯದ್ಯಾಧಿಕಾರಿಗಳು ಕುಟುಂಬದ ಸದಸ್ಯರ ಜೊತೆಗೆ ಚರ್ಚಿಸಿದ ನಂತರ ನಿರ್ಧರಿಸಿದ್ದಾರೆ.

Story first published: Wednesday, January 6, 2021, 17:13 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X