ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆ

Sourav Ganguly didn’t work hard only wanted to remain captain says Greg Chappell

ಸೌರವ್ ಗಂಗೂಲಿ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕರಲ್ಲೊಬ್ಬರು. ಸಾಲು ಸಾಲು ಸೋಲು ಮತ್ತು ಮ್ಯಾಚ್ ಫಿಕ್ಸಿಂಗ್ ಭೂತಕ್ಕೆ ಸಿಲುಕಿಕೊಂಡಿದ್ದ ಟೀಮ್ ಇಂಡಿಯಾವನ್ನು ಬಲಿಷ್ಠಪಡಿಸಿ ಗೆಲುವಿನ ಹಾದಿಗೆ ಕರೆತಂದದ್ದೇ ಸೌರವ್ ಗಂಗೂಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಸೌರವ್ ಗಂಗೂಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಸಂದರ್ಭದಲ್ಲಿ ಬಲಿಷ್ಠ ತಂಡವೊಂದನ್ನು ಕಟ್ಟಿಕೊಟ್ಟರು. ಟೀಮ್ ಇಂಡಿಯಾ ಮೇಲೆ ಮತ್ತೆ ಕ್ರೀಡಾಭಿಮಾನಿಗಳಲ್ಲಿ ಅಭಿಮಾನ ಹುಟ್ಟುವಂತೆ ಮಾಡಿದ್ದೇ ಸೌರವ್ ಗಂಗೂಲಿ.

ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!

ಅಂದು ನಾಯಕನಾಗಿ ಟೀಮ್ ಇಂಡಿಯಾವನ್ನು ಸದೃಢವಾಗಿ ಬಲಪಡಿಸಿದ ಗಂಗೂಲಿ ಇಂದು ಬಿಸಿಸಿಐ ಅಧ್ಯಕ್ಷನಾಗಿ ಮತ್ತಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಕೇವಲ ಪುರುಷರ ತಂಡವನ್ನು ಮಾತ್ರವಲ್ಲದೆ ಟೀಮ್ ಇಂಡಿಯಾ ವನಿತೆಯರ ತಂಡವನ್ನು ಕೂಡ ಸೌರವ್ ಗಂಗೂಲಿ ಬಲಪಡಿಸಿದ್ದು ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಹಲವಾರು ಬಾರಿ ಹೇಳಿದ್ದಾರೆ. ಹೀಗೆ ಭಾರತೀಯ ಕ್ರಿಕೆಟ್ ತಂಡಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಹಂಬಲವಿರುವಂತಹ ಸೌರವ್ ಗಂಗೂಲಿ ಮೇಲೆ ಇದೀಗ ಮಾಜಿ ಆಸ್ಟ್ರೇಲಿಯಾ ನಾಯಕ, ಮಾಜಿ ಟೀಮ್ ಇಂಡಿಯಾ ಕೋಚ್ ಗ್ರೆಗ್ ಚಾಪೆಲ್ ದೊಡ್ಡ ಮಟ್ಟದ ಆರೋಪವೊಂದನ್ನು ಮಾಡಿದ್ದಾರೆ.

 ಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವು ಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವು

ಗಂಗೂಲಿ ನಾಯಕನಾಗಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಗ್ರೆಗ್ ಚಾಪೆಲ್ ಸೌರವ್ ಗಂಗೂಲಿ ನಾಯಕತ್ವ ಮತ್ತು ಆಟದ ಬಗ್ಗೆ ಈ ಕೆಳಕಂಡಂತೆ ಲಘುವಾಗಿ ಮಾತನಾಡಿದ್ದಾರೆ.

1. ಗಂಗೂಲಿಗೆ ಆಟಕ್ಕಿಂತ ನಾಯಕತ್ವ ಹೆಚ್ಚಾಗಿತ್ತು

1. ಗಂಗೂಲಿಗೆ ಆಟಕ್ಕಿಂತ ನಾಯಕತ್ವ ಹೆಚ್ಚಾಗಿತ್ತು

ಸೌರವ್ ಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ಹೆಚ್ಚಿನ ಅಭ್ಯಾಸದಲ್ಲಿಯೂ ಸಹ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿರಲಿಲ್ಲ ಆದರೆ ತಂಡದಲ್ಲಿ ನಾಯಕನಾಗಿ ಉಳಿಯಬೇಕೆಂಬ ಆಸೆ ಮಾತ್ರ ಗಂಗೂಲಿಗಿತ್ತು ಎಂದು ಗ್ರೆಗ್ ಚಾಪೆಲ್ ಹೇಳಿಕೊಂಡಿದ್ದಾರೆ.

2. ನಾನು ಟೀಮ್ ಇಂಡಿಯಾ ಕೋಚ್ ಆಗಲು ಗಂಗೂಲಿಯೇ ಕಾರಣ

2. ನಾನು ಟೀಮ್ ಇಂಡಿಯಾ ಕೋಚ್ ಆಗಲು ಗಂಗೂಲಿಯೇ ಕಾರಣ

ಗಂಗೂಲಿ ನಾಯಕನಾಗಿದ್ದ ಸಮಯದಲ್ಲಿ 2 ವರ್ಷಗಳ ಕಾಲ ಟೀಮ್ ಇಂಡಿಯಾ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ತಾನು ಟೀಮ್ ಇಂಡಿಯಾ ಕೋಚ್ ಆಗಲು ಸೌರವ್ ಗಂಗೂಲಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗಲು ಸೌರವ್ ಗಂಗೂಲಿ ಅವರೇ ನನ್ನನ್ನು ಆಹ್ವಾನಿಸಿದರು ಎಂದು ಚಾಪೆಲ್ ತಿಳಿಸಿದ್ದಾರೆ.

3. ಗಂಗೂಲಿಗೆ ಕ್ರಿಕೆಟ್ ಅಭಿವೃದ್ಧಿಪಡಿಸುವ ಚಿಂತನೆ ಇರಲಿಲ್ಲ

3. ಗಂಗೂಲಿಗೆ ಕ್ರಿಕೆಟ್ ಅಭಿವೃದ್ಧಿಪಡಿಸುವ ಚಿಂತನೆ ಇರಲಿಲ್ಲ

ಗಂಗೂಲಿಗೆ ನಾಯಕತ್ವದ ಮೇಲೆ ಹೆಚ್ಚಿನ ಆಸಕ್ತಿಯಿದ್ದ ಕಾರಣ ಆತನಿಗೆ ತನ್ನ ಕ್ರಿಕೆಟ್ ಅಭಿವೃದ್ಧಿಪಡಿಸಿಕೊಳ್ಳುವಂತಹ ಯೋಜನೆಗಳೇ ಇರಲಿಲ್ಲ. ಬದಲಾಗಿ ತಂಡ ತನ್ನ ಹಿಡಿತದಲ್ಲಿರಬೇಕು ಎಂದು ಗಂಗೂಲಿ ಆಶಿಸುತ್ತಿದ್ದರು ಎಂದು ಗ್ರೆಗ್ ಚಾಪೆಲ್ ತಿಳಿಸಿದ್ದಾರೆ.

Story first published: Thursday, May 20, 2021, 15:11 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X