ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ಮೇಲೆ ಬಿಸಿಸಿಐ ಅಧ್ಯಕ್ಷರಲ್ಲಿ ದೂರು ನೀಡಿದ್ರಂತೆ ಆ ವ್ಯಕ್ತಿ: ಬಹಿರಂಗಡಿಸಿದ ಸೌರವ್ ಗಂಗೂಲಿ

Sourav Ganguly Funny reason for Rahul Dravids appointment as head coach of Team India

ಟಿ30 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಅಂತ್ಯವಾಗುತ್ತಿದ್ದಂತೆಯೇ ಟೀಮ್ ಇಂಡಿಯಾಗೆ ಹೊಸ ನೇಮಕವಾಗಿದೆ. ಜಂಟಲ್‌ಮೆನ್ ಗೇಮ್‌ನ ಜಂಟಲ್‌ಮೆನ್ ಆಟಗಾರ ಎಂದೇ ಖಾತ್ಯವಾಗಿದ್ದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಗೆ ಹೊಸ ಕೋಚ್ ಆಗಿ ನೇಮಕವಾಗಿದ್ದಾರೆ. ರಾಹುಲ್ ದ್ರಾವಿಡ್ ಈಗಾಗಲೇ ಟೀಮ್ ಇಂಡಿಯಾ ಪರವಾಗಿ ಹೊಸ ಜವಾಬ್ಧಾರಿ ವಹಿಸಿಕೊಳ್ಳುವ ಸಲುವಾಗಿ ಜೈಪುರಕ್ಕೆ ಬಂದಿಳಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ದ್ರಾವಿಡ್ ಅವರ ಹೊಸ ಜವಾಬ್ಧಾರಿ ಅಧಿಕೃತವಾಗಿ ಆರಂಭವಾಗಲಿದೆ.

ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿದ ಹಿಂದಿನ ಕಾರಣವನ್ನು ಸೌರವ್ ಗಂಗೂಲಿ ಬಿಚ್ಚಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಳಿ ರಾಹುಲ್ ದ್ರಾವಿಡ್ ಬಗ್ಗೆ ಬಂದ ಆ ಒಂದು ದೂರಿನಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

ಕೋಚ್ ಹುದ್ದೆಯ ನೇಮಕದ ಬಗ್ಗೆ ಮಾತನಾಡಿದ ಗಂಗೂಲಿ

ಕೋಚ್ ಹುದ್ದೆಯ ನೇಮಕದ ಬಗ್ಗೆ ಮಾತನಾಡಿದ ಗಂಗೂಲಿ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ಕೋಚ್ ಹುದ್ದೆಯ ಬಗ್ಗೆ ಮಾತನಾಡಿದರು. ಟೀಮ್ ಇಂಡಿಯಾ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ನೇಮಕಕ್ಕೆ ಕಾರಣವಾದ ಸಂಗತಿಯೇನೆಂದು ತಮಾಷೆಯಾಗಿ ವಿವರಿಸಿದ್ದಾರೆ. ಓರ್ವ ವ್ಯಕ್ತಿ ನೀಡಿದ ದೂರಿನ ಕಾರಣಕ್ಕಾಗಿ ರಾಹುಲ್ ದ್ರಾವಿಡ್‌ಗೆ ಈ ಕೋಚ್ ಹುದ್ದೆಯ ಜವಾಬ್ಧಾರಿಯನ್ನು ನೀಡಲಾಯಿತು ಎಂದಿದ್ದಾರೆ ಗಂಗೂಲಿ.

ಸೌರವ್ ಗಂಗೂಲಿಗೆ ದೂರು ನೀಡಿದ ಆ ವ್ಯಕ್ತಿ ಯಾರು?

ಸೌರವ್ ಗಂಗೂಲಿಗೆ ದೂರು ನೀಡಿದ ಆ ವ್ಯಕ್ತಿ ಯಾರು?

ಬಿಸಿಸಿಐ ಅಧಕ್ಷನಾಗಿರುವ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕವಾದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಹುಲ್ ದ್ರಾವಿಡ್ ಮಗನಿಂದಲೇ ತನಗೆ ಕರೆಯೊಂದು ಬಂದಿತ್ತು. ಆ ಕರೆಯಲ್ಲಿ ದ್ರಾವಿಡ್ ಬಗ್ಗೆ ಅವರ ಪುತ್ರ ದೂರನ್ನು ನೀಡಿದ್ದರು. ಹಾಗಾಗಿ ಆತನ ದೂರನ್ನು ಪರಿಗಣಿಸಿ ದ್ರಾವಿಡ್‌ಗೆ ಕರೆ ಮಾಡಿ ಕೋಚ್ ಹುದ್ದೆ ಸ್ವೀಕರಿಸಲು ಹೇಳಿದ್ದಾಗಿ ತಮಾಷೆಯಾಗಿ ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.

ಅಪ್ಪ ತುಂಬಾ ಸ್ಟ್ರಿಕ್ಟ್ ಎಂದಿದ್ದರಂತೆ ದ್ರಾವಿಡ್ ಪುತ್ರ

ಅಪ್ಪ ತುಂಬಾ ಸ್ಟ್ರಿಕ್ಟ್ ಎಂದಿದ್ದರಂತೆ ದ್ರಾವಿಡ್ ಪುತ್ರ

ಶಾರ್ಜಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾನಾಡಿದ ಸೌರವ್ ಗಂಗೂಲಿ "ನನಗೆ ಒಂದು ಕರೆ ಬಂದಿತ್ತು. ಅದರಲ್ಲಿ ನನ್ನ ತಂದೆ ನನ್ನ ಜೊತೆಗೆ ತುಂಬಾ ಸ್ಟ್ರಿಕ್ಟ್ ಆಗಿ ವರ್ತಿಸುತ್ತಾರೆ. ಹಾಗಾಗಿ ನೀವು ಅವರನ್ನು ದೂರವಿರುವಂತೆ ಮಾಡಬೇಕು ಎಂದಿದ್ದರು. ಆ ಕೂಡಲೇ ನಾನು ರಾಹುಲ್ ದ್ರಾವಿಡ್‌ಗೆ ಕರೆ ಮಾಡಿ ಈಗ ನಿಮಗೆ ರಾಷ್ಟ್ರೀಯ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಸಮಯ ಬಂದಿದೆ ಎಂದು ತಿಳಿಸಿದ್ದೆ" ಎಂದು ಸೌರವ್ ಗಂಗೂಲಿ ನಗೆ ಚಟಾಕಿಯನ್ನು ಹಾರಿಸಿದ್ದಾರೆ.

ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada
ನಾವು ಜೊತೆಯಾಗಿಯೇ ಬೆಳೆದೆವು

ನಾವು ಜೊತೆಯಾಗಿಯೇ ಬೆಳೆದೆವು

ಇನ್ನು ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ತಮ್ಮ ನಡುವಿನ ಬಾಂಧವ್ಯವನ್ನು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ. "ನಾವು ಜೊತೆಯಾಗಿಯೇ ಬೆಳೆದೆವು. ಒಂದೆ ಸಮಯದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದೆವು. ಬಹುತೇಕ ಕಾಲ ಜೊತೆಯಾಗಿ ಆಟವಾಡುತ್ತಾ ಕಾಲ ಕಳೆದೆವು. ಹಾಗಾಗಿ ಆತನನ್ನು ಕೋಚ್ ಆಗಿ ಬಯಸುವುದು ಹಾಗೂ ಆ ಹುದ್ದೆಗೆ ಸ್ವಾಗತಿಸುವುದು ನನಗೆ ಬಹಳ ಸುಲಭವಾಯಿತು" ಎಂದಿದ್ದಾರೆ ಸೌರವ್ ಗಂಗೂಲಿ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ರಾಹುಲ್ ದ್ರಾವಿಡ್ ಅಂಟರ್ 19 ಹಾಗೂ ಭಾರತ ಎ ತಂಡಕ್ಕೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2019ರಿಂದ 2021ರವರೆಗೆ ಎನ್‌ಸಿಎನಲ್ಲಿ ಮುಖ್ಯಸ್ಥರಾಗಿ ಜವಾಬ್ಧಾರಿ ವಹಿಸಿಕೊಂಡಿದ್ದರು. ಇದೀಯ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಸ್ಥಾನವನ್ನು ವಹಿಸಿಕೊಂಡಿದ್ದಾರೆ.,

Story first published: Sunday, November 14, 2021, 22:11 [IST]
Other articles published on Nov 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X