ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ರಾಹುಲ್ ದ್ರಾವಿಡ್ ಶ್ಲಾಘಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Sourav Ganguly hails Team Indias bench strength, lauds Rahul Dravid

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ಈಗಿನ ಬೆಂಜ್‌ನ ಪ್ರಾಬಲ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಲಿಷ್ಠ ಯುವ ತಂಡ ಕಟ್ಟಲು ನೆರವಾದ ಕನ್ನಡಿಗ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೊಡುಗೆಯನ್ನು ಗಂಗೂಲಿ ಈ ವೇಳೆ ಶ್ಲಾಘಿಸಿದ್ದಾರೆ.

ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!

ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಯುವ ಆಟಗಾರರು ಪ್ರಸ್ತುತ ದಿನಗಳಲ್ಲಿ ಭಾರತಕ್ಕೆ ಹೆಚ್ಚು ಬಲ ತುಂಬುತ್ತಿದ್ದಾರೆ. ಇದೇ ಕಾರಣದಿಂದ ಭಾರತ ತಂಡ ಈಚಿನ ದಿನಗಳಲ್ಲಿ ವಿಶ್ವದ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿದೆ. ಈ ವಿಚಾರ ಗಂಗೂಲಿಗೂ ಗೊತ್ತಿದೆ.

ಇಂಡಿಯಾ ಟುಡೆ ಜೊತೆ ಮಾತನಾಡಿದ ಗಂಗೂಲಿ, 'ಎನ್‌ಸಿಎಯಲ್ಲಿದ್ದು ರಾಹುಲ್ ದ್ರಾವಿಡ್ ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಆಸ್ಟ್ರೇಲಿಯಾ ವಿರುದ್ಧದ ಕೊನೇ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಅವಕಾಶವನ್ನು ಸರಿಯಾಗಿ ಬಳಸಿ ಎದ್ದುನಿಂತರು. ಇದರಲ್ಲಿ ದ್ರಾವಿಡ್ ಕೊಡುಗೆಯೂ ಇದೆ,' ಎಂದರು.

ಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗ

'ನಾವು ಕಳೆದ ವರ್ಷ ಜಸ್‌ಪ್ರೀತ್‌ ಬೂಮ್ರಾ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಭಾರತ ಬೂಮ್ರಾ ಇಲ್ಲದೆಯೂ ಗೆಲ್ಲುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಕೊನೇ ಟೆಸ್ಟ್‌ನಲ್ಲಿ ಬೂಮ್ರಾ, ಇಶಾಂತ್, ಶಮಿ, ವಿರಾಟ್, ಆರ್‌ ಅಶ್ವಿನ್ ಇಂಥ ಯಾವುದೇ ಪ್ರಮುಖ ಆಟಗಾರರಿರಲಿಲ್ಲ. ಹೀಗಿದ್ದೂ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತ್ತು,' ಎಂದು ಯುವ ಭಾರತ ತಂಡದ ಬಗ್ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Monday, March 8, 2021, 19:05 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X