ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿ

Sourav Ganguly has his say on Yuvraj Singh joining Mumbai Indians

ನವದೆಹಲಿ, ಡಿಸೆಂಬರ್ 21: ಮಂಗಳವಾರ (ಡಿಸೆಂಬರ್ 18) ನಡೆದ ಐಪಿಎಲ್ 2019ರ ಆಟಗಾರರ ಹರಾಜು ವೇಳೆ ಎಲ್ಲಾ 8 ಫ್ರಾಂಚೈಸಿಗಳು ತಮ್ಮ ತಮ್ಮ ತಂಡವನ್ನು ಬಲ ಪಡಿಸಿಕೊಂಡವು. ಈ ಹೊತ್ತು ಚರ್ಚೆಗೀಡಾಗಿದ್ದವರು ಯುವರಾಜ್ ಸಿಂಗ್. ಈಗಲೂ ಯುವಿ ಬಗ್ಗೆ ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಲೇ ಇವೆ.

ಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣ

ಆರಂಭಿಕ ಸುತ್ತಿನಲ್ಲಿ ಆಲ್ ರೌಂಡರ್ ಯುವರಾಜ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಹರಾಜು ಇನ್ನೇನು ಮುಗಿಯಲಿದೆ, ಯುವಿ ಸೇಲಾಗದ ಆಟಗಾರನಾಗಿ ಉಳಿಯುತ್ತಾರೆ ಅಂದುಕೊಳ್ಳುವಷ್ಟರಲ್ಲೇ ಬಲಿಷ್ಠ ಮುಂಬೈ ಯುವರಾಜ್ ಅವರನ್ನು ಖರೀದಿಸಿತು.

'ಫಿಟ್‌'ಗೆ ಮರಳಿದ ಆಲ್‌ ರೌಂಡರ್ ಹಾರ್ದಿಕ್, ಅಶ್ವಿನ್ ತಂಡಕ್ಕೆ ಸೇರ್ಪಡೆ?'ಫಿಟ್‌'ಗೆ ಮರಳಿದ ಆಲ್‌ ರೌಂಡರ್ ಹಾರ್ದಿಕ್, ಅಶ್ವಿನ್ ತಂಡಕ್ಕೆ ಸೇರ್ಪಡೆ?

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯುವಿಯನ್ನು ಮೂಲಬೆಲೆಯಾದ 1 ಕೋ.ರೂ.ಗೆ ಖರೀದಿಸುವ ಮೂಲಕ ಕ್ರೀಡಾ ಪ್ರೇಮಿಗಳು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಈ ಬಗ್ಗೆ ಕ್ರಿಕೆಟ್ ದೈತ್ಯ ಸೌರವ್ ಗಂಗೂಲಿ ಅವರೂ ಪ್ರತಿಕ್ರಿಯಿಸಿದ್ದಾರೆ.

ಶ್ರೇಷ್ಠ ಆಟಗಾರ

ಶ್ರೇಷ್ಠ ಆಟಗಾರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಯುವಿ ಬಗ್ಗೆ ಮಾತನಾಡುತ್ತ, 'ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ದೇಶದಲ್ಲೇ ಶ್ರೇಷ್ಠ ಆಟಗಾರ ಯುವರಾಜ್' ಎಂದು ಕೊಂಡಾಡಿದ್ದಾರೆ. ಯುವಿ ಮುಂಬೈ ಪಾಲಾಗಿದ್ದರ ಬಗ್ಗೆ ಗಂಗೂಲಿ ಟ್ವಿಟರ್ ನಲ್ಲಿ ಖುಷಿ ವ್ಯಕ್ತ ಪಡಿಸಿದ್ದಾರೆ.

ಸಿಕ್ಸ್ ಸಿಕ್ಸ್ ಶೂರ

ಸಿಕ್ಸ್ ಸಿಕ್ಸ್ ಶೂರ

ಯುವರಾಜ್ ವಿಶ್ವದಾದ್ಯಂತ ಹೆಚ್ಚು ಖ್ಯಾತಿಯಾಗಿದ್ದು ಸಿಕ್ಸ್ ಸಿಕ್ಸ್‌ ಮೂಲಕ. ಡರ್ಬನ್‌ನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಎಸೆತಗಳಿಗೆ ಆರು ಸಿಕ್ಸರ್ ಬಾರಿಸಿದರು. ಈ ಪಂದ್ಯದಲ್ಲಿ ಯುವಿ ಕೇವಲ 16 ಎಸೆತಗಳಿಗೆ 58 ರನ್ ಸಿಡಿಸಿದ್ದರು. ಪಂದ್ಯವನ್ನು ಭಾರತ 18 ರನ್‌ಗಳಿಂದ ಜಯಿಸಿತ್ತು.

ಅತೀವ ಖುಷಿಯಾಯ್ತು

ಅತೀವ ಖುಷಿಯಾಯ್ತು

'ಯುವರಾಜ್ ಅವರನ್ನು ಮುಂಬೈ ಆರಿಸಿದ್ದು ನೋಡಿ ತುಂಬಾ ಖುಷಿಯಾಯ್ತು. ಚುಟುಕು ಕ್ರಿಕೆಟ್ ನಲ್ಲಿ ಯುವರಾಜ್ ನಿಜಕ್ಕೂ ಶ್ರೇಷ್ಠ ಆಟಗಾರ. ಯುವಿಗೆ ನಾನು ಮನತುಂಬಿ ಹಾರೈಸುತ್ತೇನೆ' ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದರು.

ಯುವಿಗೆ ಮೊದಲೇ ಗೊತ್ತಿತ್ತು

ಯುವಿಗೆ ಮೊದಲೇ ಗೊತ್ತಿತ್ತು

ಐಪಿಎಲ್ ಹರಾಜಿನ ವೇಳೆ ತಾನು ಆರಂಭಿಕ ಸುತ್ತುಗಳಲ್ಲಿ ಆಯ್ಕೆಯಾಗೋಲ್ಲ ಎಂಬುದು ಕೆಚ್ಚೆದೆಯ ಮಹರಾಜ ಯುವರಾಜ ಅವರಿಗೂ ಗೊತ್ತಿತ್ತಂತೆ. ಹರಾಜಿನ ಬಳಿಕ ಯುವಿ ಇದನ್ನು ಹೇಳಿಕೊಂಡಿದ್ದರು. ಈಗ ಫಾರ್ಮ್ ಕಳೆದುಕೊಂಡು ಅವಮಾನ ಅನುಭವಿಸಿದ್ದ ಯುವಿ 2015ರ ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾಗಿದ್ದರು. ಅಂತೂ ಯುವಿ ಈ ಬಾರಿ ಮುಂಬೈ ಪರ ಭರ್ಜರಿ ಬ್ಯಾಟ್ಬೀಸುವುದು ನಿರೀಕ್ಷಿತ. ಯಾಕೆಂದರೆ ಅವಮಾನಕ್ಕೆ ಸಿಡಿಸಿ ನಿಲ್ಲಿಸುವ ಶಕ್ತಿಯಿದೆ!

Story first published: Friday, December 21, 2018, 17:16 [IST]
Other articles published on Dec 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X