ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3 ಫಾರ್ಮೆಟ್‌ ಕ್ರಿಕೆಟ್‌ಗೆ ಕೊಡುಗೆ ನೀಡುವ ಸಾಮರ್ಥ್ಯ ಕೆ.ಎಲ್ ರಾಹುಲ್‌ಗಿದೆ: ಸೌರವ್‌ ಗಂಗೂಲಿ

dada

ಕನ್ನಡಿಗ ಕೆ.ಎಲ್ ರಾಹುಲ್ ಅವರು ಮೂರು ಸ್ವರೂಪದ ಕ್ರಿಕೆಟ್ ಆಡುವ ಸಾಮರ್ಥ್ಯದ ಆಟಗಾರ, ಎಲ್ಲಾ ಸ್ವರೂಪದಲ್ಲಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶನಿವಾರ ಹೇಳಿದ್ದಾರೆ.

13ನೇ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ ರಾಹುಲ್, ಪ್ರಸ್ತುತ ಐಪಿಎಲ್ ಸೀಸನ್‌ನಲ್ಲಿ ರನ್-ಸ್ಕೋರರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ ಅವರ ನಾಯಕತ್ವದಿಂದ ಗಂಗೂಲಿ ಪ್ರಭಾವಿತರಾಗಿದ್ದರು.

ಟೆಸ್ಟ್ ಪಂದ್ಯಗಳಲ್ಲಿ ಆಡಲು ಕೆ.ಎಲ್. ರಾಹುಲ್ ಅವರಿಗೆ ನಾನು ಸಾಕಷ್ಟು ಸಮಯವಿದೆ. ಕ್ರಿಕೆಟಿಗನಾಗಿ ನಾನು ಹೇಳುತ್ತಿದ್ದೇನೆ. ಆದರೆ, ಕೊನೆಯಲ್ಲಿ ಯಾರು ಆಡುತ್ತಾರೆ ಮತ್ತು ಯಾರು ಆಡಬಾರದು ಎಂಬುದನ್ನು ನಿರ್ಧರಿಸುವವರು ಆಯ್ಕೆಗಾರರು ಎಂದು ಗಂಗೂಲಿ ಹೇಳಿದ್ದಾರೆ.

ಕೆ.ಎಲ್ ರಾಹುಲ್ , ಅಥಿಯಾ ಶೆಟ್ಟಿ ಸಂಬಂಧಕ್ಕೆ ಮತ್ತಷ್ಟು ಕಿಕ್: ವದಂತಿಗಳಿಗೆ ಮತ್ತಷ್ಟು ಜೀವಕೆ.ಎಲ್ ರಾಹುಲ್ , ಅಥಿಯಾ ಶೆಟ್ಟಿ ಸಂಬಂಧಕ್ಕೆ ಮತ್ತಷ್ಟು ಕಿಕ್: ವದಂತಿಗಳಿಗೆ ಮತ್ತಷ್ಟು ಜೀವ

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅತಿ ಹೆಚ್ಚು ರನ್ ಕಲೆಹಾಕಿದ ರಾಹುಲ್ ತಂಡವು ಪ್ಲೇ ಆಫ್ ಗೆ ತಲುಪಿಲ್ಲ, ಆದರೆ ಅವರು ಭಾರತಕ್ಕಾಗಿ ಬಾರಿಸಿದ ರನ್ ಗಳು ಗೆಲುವಿಗೆ ಕಾರಣವಾಗುತ್ತವೆ ಎಂದು ಗಂಗೂಲಿ ಆಶಿಸಿದರು.

ರಾಹುಲ್ ಎಲ್ಲ ರೀತಿಯ ಆಟಗಳಲ್ಲಿ ಸಹಕರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಅವನಿಗೆ ಎಲ್ಲಾ ಒಳ್ಳೆಯದ್ದಾಗಲಿ ಎಂದು ಬಯಸುತ್ತೇನೆ. ಆಶಾದಾಯಕವಾಗಿ, ಭಾರತದ ಗೆಲುವಿನ ಕಾರಣಕ್ಕಾಗಿ ಅವನು ಕೊಡುಗೆ ನೀಡುತ್ತಾನೆ ಎಂದು ನಂಬಿದ್ದೇನೆ ಎಂದರು.

"ನಾವು ಆಸ್ಟ್ರೇಲಿಯಾದಲ್ಲಿ ಗೆದ್ದೆವು ಏಕೆಂದರೆ ಪೂಜಾರ 500 ರನ್ ಗಳಿಸಿದರು, ವಿರಾಟ್ ಶತಕ ಪಡೆದರು, ಪಂತ್‌ಗೆ ಒಂದು ಶತಕ ಸಿಡಿಸದ್ರು. ನೀವು ಸರಣಿಯನ್ನು ಗೆಲ್ಲಲು ಹೊರಟಿರುವುದು ಹೀಗೆ. ಕಮ್ಮಿನ್ಸ್, ಸ್ಟಾರ್ಕ್, ಹೇಜಲ್‌ವುಡ್ ಮತ್ತು ಲಿಯಾನ್ ಉತ್ತಮ ಬೌಲರ್‌ಗಳು " ಅವರ ವಿರುದ್ಧ ಕಠಿಣವಾಗಿ ಹೋರಾಡಬೇಕು ಎಂದು ಗಂಗೂಲಿ ಹೇಳಿದ್ದಾರೆ.

ಇದು ಒಳ್ಳೆಯ ತಂಡವಾಗಿದೆ ಮತ್ತು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕು. " ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಎಂಬ ಮೂರು ವಿಶ್ವ ದರ್ಜೆಯ ವೇಗಿಗಳೊಂದಿಗೆ ಬೌಲಿಂಗ್ ಘಟಕವು ಸಾಕಷ್ಟು ಗುಣಮಟ್ಟವನ್ನು ಹೊಂದಿದೆ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

Story first published: Saturday, November 7, 2020, 22:28 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X