ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ

Sourav Ganguly names 5 players he would pick from current Indian side in his Test team

ಕೋಲ್ಕತ್ತಾ: ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಟೀಮ್ ಇಂಡಿಯಾದ ಪ್ರಭಾವಶಾಲಿ ನಾಯಕ ಕೂಡ ಆಗಿದ್ದವರು. ಗಂಗೂಲಿಯ ಆಕ್ರಮಣಕಾರಿ ಆಟ, ನಾಯಕನಾಗಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಭಾರತ ತಂಡದಲ್ಲಿ ಅನೇಕ ಬದಲಾವಣೆಯ ಗಾಳಿ ಬೀಸಲು ಕಾರಣವಾಗಿತ್ತು. ಇದೇ ದಾದ ಜುಲೈ 8ಕ್ಕೆ 48ರ ಹರೆಯಕ್ಕೆ ಕಾಲಿರಿಸಿದ್ದಾರೆ.

ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 ‍XIನಲ್ಲಿ ಮೂವರು ಭಾರತೀಯರು!ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 ‍XIನಲ್ಲಿ ಮೂವರು ಭಾರತೀಯರು!

ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ಝಹೀರ್ ಖಾನ್ ಇಂಥ ದಿಗ್ಗಜರಿದ್ದರು.

ಪುತ್ರಿಯ ಫೋಟೋ ಶೇರ್ ಮಾಡಿ ಹೆಸರು ಬಹಿರಂಗಪಡಿಸಿದ ಉಸೇನ್ ಬೋಲ್ಟ್ಪುತ್ರಿಯ ಫೋಟೋ ಶೇರ್ ಮಾಡಿ ಹೆಸರು ಬಹಿರಂಗಪಡಿಸಿದ ಉಸೇನ್ ಬೋಲ್ಟ್

ಗಂಗೂಲಿ ಅವರಿದ್ದ ತಂಡ ವಿಶ್ವದ ಬಲಿಷ್ಠ ತಂಡಗಳೆದುರು ಟೆಸ್ಟ್ ಸರಣಿಗಳನ್ನು ಗೆದ್ದಿತ್ತು. ಅಷ್ಟೇ ಅಲ್ಲ, 2003ರ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೂ ಪ್ರವೇಶಿಸಿತ್ತು.

ಬಲಿಷ್ಠರೆದುರು ಮಿಂಚಿದ್ದ ಭಾರತ

ಬಲಿಷ್ಠರೆದುರು ಮಿಂಚಿದ್ದ ಭಾರತ

ಟೆಸ್ಟ್ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾದ ಆಸ್ಟ್ರೇಲಿಯಾವನ್ನು ತವರಿನಲ್ಲಿ ಮತ್ತು ವಿದೇಶದಲ್ಲೂ ಸೋಲಿಸಿದ ಹಿರಿಮೆ ಗಂಗೂಲಿ ಅವರಿದ್ದಾಗಿನ ತಂಡದ್ದು. ಆದರೆ 2018-19ರಲ್ಲಿ ವಿರಾಟ್ ಕೊಹ್ಲಿ ಪಡೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿತ್ತು.

ಈಗಿರುವವರಲ್ಲಿ ಯಾರನ್ನು ಆರಿಸುತ್ತೀರಿ?

ಈಗಿರುವವರಲ್ಲಿ ಯಾರನ್ನು ಆರಿಸುತ್ತೀರಿ?

ಬಲಿಷ್ಟ ಟೆಸ್ಟ್ ತಂಡವನ್ನು ಹೊಂದಿದ್ದ ಗಂಗೂಲಿಯವರ ಜೊತೆ 'ಓಪನ್ ನೆಟ್ಸ್‌ ವಿತ್ ಮಯಾಂಕ್' ಎಪಿಸೋಡ್‌ನಲ್ಲಿ ಮಾತನಾಡಿದ ಮಯಾಂಕ್ ಪ್ರಶ್ನೆಯೊಂದು ಎಸೆದರು. 'ನಿಮಗೊಂದು ವೇಳೆ ಟೆಸ್ಟ್ ತಂಡ ಆರಿಸುವ ಅವಕಾಶ ಸಿಕ್ಕರೆ, ಈಗಿರುವ ಆಟಗಾರರಲ್ಲಿ ಯಾರನ್ನು ಆರಿಸುತ್ತೀರಿ?' ಎಂದು ಮಯಾಕ್ ಗಂಗೂಲಿಯಲ್ಲಿ ಪ್ರಶ್ನಿಸಿದರು.

ಮಯಾಂಕ್‌ನನ್ನು ಆರಿಸುತ್ತಿಲ್ಲ

ಮಯಾಂಕ್‌ನನ್ನು ಆರಿಸುತ್ತಿಲ್ಲ

ಮಯಾಂಕ್ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, 'ಎಲ್ಲಾ ಪೀಳಿಗೆಯಲ್ಲೂ ವಿಭಿನ್ನ ಆಟಗಾರರಿರುವುದರಿಂದ ಇದು ಕಠಿಣ ಪ್ರಶ್ನೆ. ಈಗಿನ ತಂಡದಲ್ಲಿ ನಾನು ವಿರಾಟ್ ಕೊಹ್ಲಿ ಮತ್ತು ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆರಿಸಲು ಬಯಸುತ್ತೇನೆ. ನನ್ನ ಜೊತೆ ವೀರೇಂದ್ರ ಸೆಹ್ವಾಗ್ ಇರುವುದರಿಂದ ನಿನ್ನನ್ನು (ಮಯಾಂಕ್‌) ಆರಿಸುವುದಿಲ್ಲ. ನಾನು ಜಸ್‌ಪ್ರೀತ್ ಬೂಮ್ರಾ ಅವರನ್ನು ಆರಿಸುತ್ತೇನೆ. ಝಹೀರ್ ಹೇಗೂ ನನ್ನ ತಂಡದಲ್ಲಿರುತ್ತಾರೆ.,' ಎಂದು ಪ್ರತಿಕ್ರಿಯಿಸಿದರು.

ಗಂಗೂಲಿ ಆಯ್ಕೆಯ 6 ಆಟಗಾರರು

ಗಂಗೂಲಿ ಆಯ್ಕೆಯ 6 ಆಟಗಾರರು

ಮಾತು ಮುಂದುವರೆಸಿದ ಗಂಗೂಲಿ, 'ಆಮೇಲೆ ಜಾವಗಲ್ ಶ್ರೀನಾಥ್ ನಿವೃತ್ತಿ ಹೊಂದಿದ ಬಳಿಕ ನಾನು ಮೊಹಮ್ಮದ್ ಶಮಿಯನ್ನು ಆರಿಸುತ್ತಿದ್ದೆ. ನನ್ನ ಬಳಿ ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಇರುವುದರಿಂದ ಮೂರನೇ ಸ್ಪಿನ್ನರ್ ಆಗಿ ಆರ್ ಅಶ್ವಿನ್ ಅವರನ್ನು ಆರಿಸುತ್ತಿದ್ದೆ. ಅಲ್ಲದೆ ರವೀಂದ್ರ ಜಡೇಜಾ ಅವರತ್ತಲೂ ನಾನು ಆಕರ್ಷಿತನಾಗುತ್ತಿದ್ದೆ,' ಎಂದು ಉತ್ತರಿಸಿದ್ದಾರೆ. ಅಂದರೆ ಈಗಿರುವವರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಆರ್‌ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಆರಿಸಲು ಮುಂದಾಗುತ್ತಿದ್ದೆ ಎಂಬರ್ಥದಲ್ಲಿ ಗಂಗೂಲಿ ಮಾತನಾಡಿದ್ದಾರೆ.

Story first published: Thursday, July 9, 2020, 15:42 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X