ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿ

Sourav Ganguly names two contenders for India’s No. 4 spot in ODIs

ಕೋಲ್ಕತ್ತಾ, ಸೆಪ್ಟೆಂಬರ್ 19: ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ, ತಂಡ ನಿರ್ವಹಣಾ ಸಮಿತಿಗೆ ತಲೆನೋವಾಗಿದೆ. 4ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಒಗ್ಗಿ ನೆಲೆ ನಿಲ್ಲುವಂತ ಬ್ಯಾಟ್ಸ್‌ಮನ್‌ಗಳು ಇಲ್ಲದಿರುವುದು ಇದಕ್ಕೆ ಕಾರಣ.

12 ವರ್ಷಗಳಿಗೆ ಹಿಂದೆ ಇದೇ ದಿನ ಯುವರಾಜ್ ಸಿಂಗ್ 6 ಸಿಕ್ಸ್ ಚಚ್ಚಿದ್ದರು!12 ವರ್ಷಗಳಿಗೆ ಹಿಂದೆ ಇದೇ ದಿನ ಯುವರಾಜ್ ಸಿಂಗ್ 6 ಸಿಕ್ಸ್ ಚಚ್ಚಿದ್ದರು!

4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅದೃಷ್ಟ ಪರೀಕ್ಷೆ ಮಾಡಿದ್ದರು. ಅನಂತರ, ಆಲ್ ರೌಂಡರ್ ವಿಜಯ್ ಶಂಕರ್, ರಿಷಬ್ ಪಂತ್ ಕೂಡ ಈ ಪ್ರಮಾಂಕದಲ್ಲಿ ಆಡಿದ್ದಾರೆ. ಆದರೆ ಇವರ್ಯಾರೂ ಈ ಬ್ಯಾಟಿಂಗ್ ಕ್ರಮಾಂಕದಲ್ಲಿ ನೆಲೆ ನಿಲ್ಲುವಂತ ಪ್ರದರ್ಶನ ನೀಡಿಲ್ಲ.

ಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋ

ಭಾರತ ಕ್ರಿಕೆಟ್‌ ತಂಡಕ್ಕೆ ಉಪಯುಕ್ತ ಸಲಹೆ ನೀಡುತ್ತಿರುವ ಮಾಜಿ ನಾಯಕನ ಮಾತು ಪರಿಗಣಿಸಲ್ಪಡುತ್ತೋ ಕಾದು ನೋಡಬೇಕಿದೆ.

ಕ್ರಮಾಂಕಕ್ಕೆ ಒಗ್ಗಿಕೊಳ್ಳಬಲ್ಲರು

ಕ್ರಮಾಂಕಕ್ಕೆ ಒಗ್ಗಿಕೊಳ್ಳಬಲ್ಲರು

ಭಾರತ ತಂಡದ ಮಾಜಿ ನಾಯಕ, ಸದ್ಯ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಭಾರತದ 4ನೇ ಬ್ಯಾಟಿಂಗ್‌ ಕ್ರಮಾಂಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ್ದಾರೆ. ಯುವ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಐಯ್ಯರ್ ಮತ್ತು ಮನೀಶ್ ಪಾಂಡೆ ಈ ಕ್ರಮಾಂಕಕ್ಕೆ ಒಗ್ಗಿಕೊಳ್ಳಬಲ್ಲರು ಎಂದು ಗಂಗೂಲಿ ಸಲಹೆಯಿತ್ತಿದ್ದಾರೆ.

ಪ್ರಭಾವ ಬೀರದ ರಾಹುಲ್

ಪ್ರಭಾವ ಬೀರದ ರಾಹುಲ್

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಬಂಗಾಳ ಹುಲಿ ಗಂಗೂಲಿ, 'ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಟಾಪ್ ಆರ್ಡರ್‌ನಲ್ಲಿ ಬಂದರೆ, ಕೆಎಲ್ ರಾಹುಲ್ ಕೆಳದೂಡಲ್ಪಡುತ್ತಾರೆ. ಟೆಸ್ಟ್‌ನಲ್ಲಿ ಫಾರ್ಮ್‌ ಇಲ್ಲದೆ ರಾಹುಲ್ ಸ್ಥಾನ ಕಳೆದುಕೊಂಡಿದ್ದಾರೆ. ಹೀಗಾಗಿ ಮನೀಷ್ ಪಾಂಡೆ ಮತ್ತು ಶ್ರೇಯಸ್ ಐಯ್ಯರ್ ಬಯಸಿದರೆ 4ನೇ ಕ್ರಮಾಂಕದಲ್ಲಿ ನೆಲೆ ನಿಲ್ಲಬಲ್ಲರು,' ಎಂದರು.

ಐಯ್ಯರ್ ಅರ್ಧ ಶತಕ

ಐಯ್ಯರ್ ಅರ್ಧ ಶತಕ

ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಎರಡು ಏಕದಿನ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಶ್ರೇಯಸ್, ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಅಂದು ಗಮನ ಸೆಳೆದಿದ್ದ ಐಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸದ್ಯ ಆಫ್ರಿಕಾ ವಿರುದ್ಧದ ಟಿ20ಯಲ್ಲಿ ರಿಷಬ್ ಪಂತ್ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ 68 ಎಸೆತಗಳಿಗೆ 71 ರನ್, ತೃತೀಯ ಪಂದ್ಯದಲ್ಲಿ 41 ಎಸೆತಗಳಿಗೆ 65 ರನ್ ಮಾಡಿದ್ದರು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದಿತ್ತು. ಅಂದ್ಹಾಗೆ ಈ ಪಂದ್ಯಗಳಲ್ಲಿ ಐಯ್ಯರ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

Story first published: Thursday, September 19, 2019, 17:30 [IST]
Other articles published on Sep 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X