ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂತ್ ಮೂರು ಮಾದರಿಯಲ್ಲೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಬಲ್ಲ: ಸೌರವ್ ಗಂಗೂಲಿ

Sourav Ganguly praised Rishabh Pant, says Will be an all-time great in all formats

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಭರ್ಜರಿ ಆಟವನ್ನು ಪ್ರದರ್ಶಿಸಿ ಶತಕವನ್ನು ಸಿಡಿಸಿದ್ದಾರೆ. ಪಂತ್ ಅದ್ಭುತ ಆಟದ ಪರಿಣಾಮವಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಉತ್ತಮ ಮೊತ್ತದ ಮುನ್ನಡೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಪಂತ್ ನೀಡಿದ ಈ ಪ್ರದರ್ಶನಕ್ಕೆ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಸೌರವ್ ಗಂಗೂಲಿ ಪಂತ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ರಿಷಭ್ ಪಂತ್ ಮೂರು ಮಾದರಿಯಲ್ಲೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಬಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಒತ್ತಡದಲ್ಲಿ ನೀಡಿದ ಪ್ರದರ್ಶನವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್

ಎಷ್ಟು ಅದ್ಭುತ ಈತ? ನಂಬುವುದು ಅಸಾಧ್ಯ. ಒತ್ತಡದ ಮಧ್ಯೆ ಎಂತಾ ಶ್ರೇಷ್ಠ ಪ್ರದರ್ಶನ. ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ. ಮುಂಬರುವ ವರ್ಷಗಳಲ್ಲಿ ಮೂರು ಮಾದರಿಯ ಆಟದಲ್ಲೂ ಸಾರ್ವಕಾಲಿಕ ಶ್ರೇಷ್ಠನಾಗಬಲ್ಲ. ಇದೇ ಆಕ್ರಮಣಕಾರಿ ರೂಪದಲ್ಲಿ ಆಡುತ್ತಿರು. ಅದಕ್ಕಾಗಿಯೇ ಮ್ಯಾಚ್‌ವಿನ್ನರ್ ಹಾಗೂ ತುಂಬಾ ವಿಶೇಷ" ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ ಬಳಿಕ ಪಂತ್ ಕ್ರೀಸ್‌ಗೆ ಇಳಿದರು. ಆ ವೇಲೆಗೆ ಟೀಮ್ ಇಂಡಿಯಾ 80 ರನ್‌ಗಳಿಗೆ 4 ವಿಕೆಟ್ ಕಲೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ರೋಹಿತ್ ಶರ್ಮಾ, ಆರ್ ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ಜೊತೆ ಸೇರಿಕೊಂಡು ಪಂತ್ ಅದ್ಭುತ ಆಟವನ್ನು ಪ್ರದರ್ಶಿಸಿ ಶತಕವನ್ನು ಪೂರೈಸಿದರು.

ರಿಷಭ್ ಪಂತ್ ಅವರ ಶತಕ ಹಾಗೂ ವಾಶಿಂಗ್ಟನ್ ಸುಂದರ್ ಜೊತೆಗಿನ ಜೊತೆಯಾಟ ಪ್ರವಾಸಿಗರ ವಿರುದ್ಧ ಬಾರತ ತಂಡ ಮೇಲುಗೈ ಸಾಧಿಸಲು ಸಾಧ್ಯವಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 294 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ವಾಶಿಂಗ್ಟನ್ ಸುಂದರ್ 60 ರನ್‌ಗಳಿಸಿದ್ದರೆ ಅಕ್ಷರ್ ಪಟೇಲ್ 11 ರನ್‌ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Friday, March 5, 2021, 18:16 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X