ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಸರಣಿ ಆಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡ ಸೌರವ್ ಗಂಗೂಲಿ

Sourav Ganguly Provides Update On Possibility Of Hosting England Series In India

ಕೊರೊನ ಭೀತಿಯ ಮಧ್ಯೆ ಈ ಬಾರಿಯ ಐಪಿಎಲ್‌ಅನ್ನು ವಿದೇಶದಲ್ಲಿ ಆಯೋಜನೆ ಮಾಡುವಲ್ಲಿ ಬಿಸಿಸಿಐ ಸಫಲವಾಗಿದೆ. ಟೂರ್ನಿಯೂ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ಬಿಸಿಸಿಐ ಮತ್ತಂದು ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಆಯೋಜನೆಗೆ ಸಿದ್ಧವಾಗಿದೆ.

ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಮುಂದಿನ ವರ್ಷ ಜನವರಿಯಿಂದ ಮಾರ್ಚ್ ಮಧ್ಯೆ ಆಯೋಜನೆಗೆ ಮಾಡಲು ಈ ಹಿಂದೆಯೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಸರಣಿ ಆಯೋಜನೆ ಬಗ್ಗೆ ಗೊಂದಲಗಳು ಇವೆ. ಈ ಬಗ್ಗೆ ಸೌರವ್ ಗಂಗೂಲಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್

ಇತ್ತೀಚೆಗೆ ಯುಎಇ ಜೊತೆಗೆ ಕ್ರಿಕೆಟ್ ಆಯೋಜನೆ ವಿಚಾರವಾಗಿ ಒಪ್ಪಂದವೊಂದನ್ನು ಮಾಡಕೊಳ್ಳಲಾಗಿತ್ತು. ಹಾಗಾಗಿ ಇಂಗ್ಲೆಂಡ್ ವಿರುದ್ಧ ಭಾರತ ಆಯೋಜಿಸುವ ಈ ಸರಣಿ ಯುಎಇನಲ್ಲಿ ನಡೆಯಲಿದೆ ಎಂಬ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು. ಈ ವಿಚಾರವಾಗಿಯೂ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಹಾಗೂ ಏಕದಿನ ಮತ್ತು ಮೂರು ಟಿ20 ಸರಣಿಯನ್ನು ಭಾರತದಲ್ಲೇ ಆಯೋಜನೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. 'ಭಾರತದ ಕ್ರೀಡಾಂಗಣದಲ್ಲೇ ಈ ಸರಣಿಯನ್ನು ಆಯೋಜಿಸಲು ನಾವು ಪ್ರಯತ್ನಿಸಲಿದ್ದೇವೆ. ಆದರೆ ಯುಎಇನಲ್ಲಿ ಆಯೋಜನೆ ಮಾಡುವ ಲಾಭವೇನೆಂದರೆ ಇಲ್ಲಿ ಮೂರು ಕ್ರೀಡಾಂಗಣಗಳಿವೆ' ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಮುಂಬೈನಲ್ಲೂ ನಾವು ಇದೇ ರೀತಿಯ ವ್ಯವಸ್ಥೆಯನ್ನು ಹೊಂದಿದ್ದೇವೆ. ಸಿಸಿಐ, ವಾಂಖೆಡೆ ಹಾಗೂ ಡಿವೈ ಪಾಟೀಲ್ ಕ್ರೀಡಾಂಗಣಗಳಿವೆ. ಈಡನ್ ಗಾರ್ಡನ್‌ಅನ್ನು ಕುಡ ನಾವು ಹೊಂದಿದ್ದೇವೆ. ಅಲ್ಲಿ ನಾವು ಜೈವಿಕ ವಲಯವನ್ನು ಸೃಷ್ಟಿಸಿಕೊಳ್ಳಬೃಕಾಗುತ್ತದೆ. ಭಾರತದಲ್ಲಿ ಕ್ರಿಕೆಟ್ ಆರಂಭವಾಗುವುದನ್ನು ನಾವು ಬಯಸುತ್ತೇವೆ ಎಂದು ಗಂಗೂಲಿ ಹೇಳಿದ್ದಾರೆ.

Story first published: Monday, September 28, 2020, 20:06 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X