ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್ ನೆಗೆಟಿವ್ ವರದಿ ಪಡೆದ ಸೌರವ್ ಗಂಗೂಲಿ, ಪುತ್ರಿ ಸನಾ ಕೋವಿಡ್ ಪಾಸಿಟಿವ್

Sourav ganguly return covid report negetive, His Daughter Sana test Positive for Covid-19

ಕೆಲ ದಿನಗಳ ಹಿಂದೆ ಕೋರೊನಾವೈರಸ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೌರವ್ ಗಂಗೂಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇಂದು(ಬುಧವಾರ) ಅವರ ಕೊರೊನಾವೈರಸ್‌ನ ಮತ್ತೊಂದು ರಿಪೋರ್ಟ್ ಬಂದಿದ್ದು ಅದರಲ್ಲಿ ಗಂಗೂಲಿ ಕೋವಿಡ್‌ನಿಂದ ಮುಕ್ತವಾಗಿರುವುದು ದೃಢಪಟ್ಟಿದೆ.

ಆದರೆ ಈ ಸಂದರ್ಭದಲ್ಲಿ ಗಂಗೂಲಿ ಕುಟುಂಬಕ್ಕೆ ಕೊರೊನಾವೈರಸ್ ಮತ್ತೊಂದು ಆಘಾತ ನೀಡಿದ್ದು ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಕೊರೊನಾವೈರಸ್‌ಗೆ ತುತ್ತಾಗಿರುವುದು ವರದಿಯಿಂದ ಬೆಳಕಿಗೆ ಬಂದಿದೆ. ಆದರೆ ಸನಾ ಗಂಗೂಲಿ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಹೀಗಾಗಿ ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಲು ವೈದ್ಯರು ಸೂಚನೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಆದರೆ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ.

ಶಾರ್ದೂಲ್ ಶಾರ್ದೂಲ್ "ಲಾರ್ಡ್ ಶಾರ್ದೂಲ್" ಆಗಿದ್ದು ಹೇಗೆ, ಎಲ್ಲಿ? ಕುತೂಹಲಕಾರಿ ಸಂಗತಿ ವಿವರಿಸಿದ ವೇಗಿ

ಸೌರವ್ ಗಂಗೂಲಿ ಕೊರೊನಾವೈರಸ್‌ಗೆ ತುತ್ತಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಮೆನೆಗೆ ಬಂದ ಕೆಲ ದಿನಗಳ ನಂತರ ಅವರ ಪುತ್ರಿ ಸನಾ ಕೂಡ ಕೋವಿಡ್ ವೈರಸ್‌ಗೆ ತುತ್ತಾಗಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ಗಂಗೂಲಿ ಅವರಲ್ಲಿ ಕೊರೊನಾವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಗಾಗಿದ್ದರು. ಕೊವಿಡ್ ಪಾಸಿಟಿವ್ ಬಂದ ಕಾರಣ ಅವರು ಆಸ್ಪತ್ರೆಯಲ್ಲಿ ಕೆಲ ದಿನಗಳ ಚಿಕಿತ್ಸೆ ಪಡೆದು ನಂತರ ನಿವಾಸಕ್ಕೆ ಮರಳಿ ಐಸೋಲೇಶನ್‌ನಲ್ಲಿ ಮುಂದುವರಿದಿದ್ದರು.

ದೇಶಾದ್ಯಂತ ನಿಯಂತ್ರಣಕ್ಕೆ ಬಂದಿದ್ದ ಕೊರೊನಾವೈರಸ್ ಈಗ ಮೂರನೇ ಅಲೆಯ ರೂಪದಲ್ಲಿ ಅಬ್ಬರಿಸಲು ಆರಂಭಿಸಿದೆ. ಅದರಲ್ಲೂ ಒಮೈಕ್ರಾನ್ ರೂಪಾಂತರಿಯ ಆತಂಕ ಈಗ ವಿಶ್ವದೆಲ್ಲೆಡೆಯಿದ್ದು ಭಾರತಲ್ಲಿಯೂ ಒಮಿಕ್ರಾನ್ ರೂಪಾಂತರಿ ವೈರಸ್‌ನ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು: ಹೊಸ ದಾಖಲೆವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು: ಹೊಸ ದಾಖಲೆ

ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಪತ್ತೆಯಾದ ಕೊರೊನಾವೈರಸ್‌ನ ಹೊಸ ರೂಪಾಂತರಿ ಒಮೈಕ್ರಾನ್ ಈಗ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾವೈರಸ್‌ನ ಅತ್ಯಂತ ಅಪಾಯಕಾರಿ ರೂಪಾಂತರಿಯಾದ ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುವ ಒಮೈಕ್ರಾನ್ ಆಫ್ರಿಕಾ, ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿ ಹೊಸ ಅಲೆಗೆ ಕಾರಣವಾಗಿದೆ. ಇದೀಗ ಭಾರತದಲ್ಲಿಯೂ ಮೂರನೇ ಅಲೆ ಆರಂಭಿಕ ಹಂತದಲ್ಲಿದೆ.

ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್

Rishab Pantಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ | Oneindia Kannada

ಇನ್ನು ಸೌರವ್ ಗಂಗೂಲಿ ಈ ವರ್ಷದಲ್ಲಿ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಜನವರಿಯಲ್ಲಿ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. 20 ದಿನಗಳ ನಂತರ ಗಂಗೂಲಿಗೆ ಮತ್ತೊಮ್ಮೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜನವರಿ 28ರಂದು ಎರಡನೇ ಬಾರಿಗೆ ಸೌರವ್ ಗಂಗೂಳಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. ಒಟ್ಟು ಎರಡು ಸ್ಟಂಟ್‌ಗಳನ್ನು ಸೌರವ್ ಗಂಗೂಲಿಗೆ ಅಳವಡಿಸಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡ ಸೌರವ್ ಗಂಗೂಲಿ ಮಾರ್ಚ್ ತಿಂಗಳ ಬಳಿಕ ಮತ್ತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗತೊಡಗಿದ್ದಾರೆ. ಇನ್ನು ಸೌರವ್ ಗಂಗೂಲಿ ಕೊರೊನಾವೈರಸ್‌ನ ಎರಡು ಡೋಸ್ ವ್ಯಾಕ್ಸಿನ್ ಕೂಡ ಹಾಕಿಸಿಕೊಂಡಿದ್ದಾರೆ

Story first published: Wednesday, January 5, 2022, 17:00 [IST]
Other articles published on Jan 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X