ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಸರಣಿ ಬಿಟ್ಟು ಕೌಂಟಿಯಲ್ಲಿ ಪಾಲ್ಗೊಂಡಿದ್ದ ಕಾರಣ ಹೇಳಿದ ಕನ್ನಡಿಗ ಶ್ರೀನಾಥ್

Sourav Ganguly Said You Better Be Part Of England Eour: Javagal Srinath

ಭಾರತ ಕಂಡ ಅತ್ಯಂತ ಪರಿಣಾಮಕಾರಿ ವೇಗದ ಬೌಲರ್‌ಗಳಲ್ಲಿ ಶ್ರೀನಾಥ್ ಕೂಡ ಒಬ್ಬರು. ಅದೆಷ್ಟೋ ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಕಾರಣರಾಗಿದ್ದ ಶ್ರೀನಾಥ್ 2002ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸವನ್ನು ಬಿಟ್ಟು ಅದೇ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಕೌಂಟ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು. ಈ ವಿಚಾರದ ಬಗ್ಗೆ ಸ್ವತಃ ಶ್ರೀನಾಥ್ ಮಾತನಾಡಿದ್ದಾರೆ.

ವಿಶ್ವಕಪ್‌ಗೂ ಮುನ್ನ ನಾವು ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದೆವು. ಆ ಸಂದರ್ಭದಲ್ಲಿ ಆಯ್ಕೆಗಾರರು ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಸಾಮಾನ್ಯವಾಗಿ ವಿಶ್ರಾಂತಿ ಬೇಕೆನಿಸಿದ್ದರೆ ನಾವಾಗಿಯೇ ಮನವಿಯನ್ನು ಮಾಡಿಕೊಂಡು ಪಡೆಯುತ್ತಿದ್ದೆವು. ಆದರೆ ಅಂದು ಹಾಗಾಗಿರಲಿಲ್ಲ ಎಂದು ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಆ ಕೆಟ್ಟ ಘಟನೆ ನನ್ನನ್ನು ಸಂಪೂರ್ಣ ಬದಲಾಯಿಸಿಬಿಟ್ಟಿತ್ತು: ಕೆಎಲ್ ರಾಹುಲ್

ಆ ಸಂದರ್ಭದಲ್ಲಿ ಆಯ್ಕೆಗಾರರು ನಾವು ನಿಮಗೆ ವಿಶ್ರಾಂತಿಯನ್ನು ನಿಡುತ್ತಿದ್ದೇವೆ ಎಂದಷ್ಟೇ ಹೇಳಿದ್ದರು. ಹಾಗೂ ಅಂದು ಯಾವುದೂ ಚೆನ್ನಾಗಿ ನಡೆಯಲಿಲ್ಲ. ಸಹಜವಾಗಿಯೇ ನನಗೆ ಅಸಮಾಧಾನ ಉಂಟಾಯಿತು. ಇನ್ನೊಬ್ಬರ ಕೈಯ್ಯಲ್ಲಿ ನನ್ನ ವೃತ್ತಿಜೀವನ ಆಡಿಸಲ್ಪಡಬಾರದು ಎಂದು ತೀರ್ಮಾನವನ್ನು ಮಾಡಿಕೊಂಡೆ ಎಂದು ಸ್ಪೋರ್ಟ್ಸ್ ಕೀಡಾ ವೆಬ್‌ಸೈಟ್ ಜೊತೆಗೆ ಮಾತನಾಡಿದ ಶ್ರೀನಾಥ್ ಅಂದಿನ ಘಟನೆಯ ಬಗ್ಗೆ ವಿವರಿಸಿದ್ದಾರೆ.

ನಾನು ಆ ಇಂಗ್ಲೆಂಡ್ ಪ್ರವಾಸವನ್ನು ಕಳೆದುಕೊಂಡಿದ್ದೆ. ಆ ಸಂದರ್ಭದಲ್ಲಿ ನಾಯಕ ಸೌರವ್ ಗಂಗೂಲಿ ನನಗೆ ಕರೆ ಮಾಡಿದ್ದರು, ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ನೀವಿದ್ದರೆ ಉತ್ತಮವಾಗಿರುತ್ತದೆ ಎಂದು ಕೇಳಿಕೊಂಡಿದ್ದರು. ಆದರೆ ನಾನು ಅಸಮಾದಾನಗೊಂಡಿದ್ದೆ ಮತ್ತು ಗಂಗೂಲಿ ಬಳಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ ಶ್ರೀನಾಥ್.

ಆದರೆ ಈಗ ಆ ಬಗ್ಗೆ ಯೋಚಿಸಿದರೆ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ನಿರ್ಧಾರದ ಬದಲು ನಾನು ಟೀಮ್ ಇಂಡಿಯಾಗೆ ಆಡಬೇಕಿತ್ತು ಎಂದು ಅನಿಸುತ್ತದೆ. ಬಳಿಕ ಪರಿಸ್ಥಿತಿ ತಣ್ಣಗಾದ ಬಳಿಕ ನಾನು ಭಾರತ ತಂಡಕ್ಕೆ ವಾಪಾಸ್ಸಾಗಿದ್ದೆ. ವಿಶ್ವಕಪ್‌ನಲ್ಲೂ ಆಡಲು ಬಯಸಿದ್ದೆ ಎಂದು ಶ್ರೀನಾಥ್ ವಿವರಿಸಿದರು.

Story first published: Sunday, June 14, 2020, 15:39 [IST]
Other articles published on Jun 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X