ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ರಾಹುಲ್ ದ್ರಾವಿಡ್ ಭೇಟಿಯಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Rahul Dravid and Sourav Ganguly , the Legends of Indian cricket meet for good | Oneindia Kannada
Sourav Ganguly to meet head NCA head Rahul Dravid in Bengaluru

ಬೆಂಗಳೂರು, ಅಕ್ಟೋಬರ್ 29: ಬಿಸಿಸಿಐ ನೂತನ ಅಧ್ಯಕ್ಷ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, 'ಗ್ರೇಟ್‌ ವಾಲ್' ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ನಡೆಯಲಿರುವ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದ ಐರ್ಲೆಂಡ್ ಪಪ್ಪುವಾ ನ್ಯೂ ಗಿನಿಯಾಐಸಿಸಿ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದ ಐರ್ಲೆಂಡ್ ಪಪ್ಪುವಾ ನ್ಯೂ ಗಿನಿಯಾ

ದೀರ್ಘ ಕಾಲ ಟೀಮ್ ಇಂಡಿಯಾದಲ್ಲಿ ಜೊತೆ ಆಟಗಾರರಾಗಿದ್ದ ದ್ರಾವಿಡ್-ಗಂಗೂಲಿ ಅವರಲ್ಲಿ ದ್ರಾವಿಡ್ ಈಗ ಎನ್‌ಸಿಎ ಮುಖ್ಯಸ್ಥರಾಗಿದ್ದರೆ, ಗಂಗೂಲಿ ಬಿಸಿಸಿಐ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇಬ್ಬರೂ ಕ್ರಿಕೆಟ್ ದಿಗ್ಗಜರು ಚರ್ಚಿಸಿ ಭಾರತೀಯ ಕ್ರಿಕೆಟ್‌ಗೆ ಮಾರ್ಗ ಸೂಚಿ ರಚಿಸಲಿದ್ದಾರೆ.

ನತಾಶಾ ಸ್ಟ್ಯಾಂಕೋವಿಕ್ ಬಾಹುಗಳಲ್ಲಿ ಬಂಧಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!ನತಾಶಾ ಸ್ಟ್ಯಾಂಕೋವಿಕ್ ಬಾಹುಗಳಲ್ಲಿ ಬಂಧಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಸಭೆಯಲ್ಲಿ ಬಿಸಿಸಿಐ ನೂತನ ಪದಾಧಿಕಾರಿಗಳು ಮತ್ತು ಎನ್‌ಸಿಎ ಸಿಇಒ ತುಫಾನ್ ಘೋಷ್ ಕೂಡ ಪಾಲ್ಗೊಳ್ಳಲಿದ್ದಾರೆ. ಅಂದ್ಹಾಗೆ ಗಂಗೂಲಿ, ಕೋಲ್ಕತ್ತಾ ಕ್ರಿಕೆಟ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರೆ, ದ್ರಾವಿಡ್- ಭಾರತ ಅಂಡರ್ 19 ಮತ್ತು ಭಾರತ 'ಎ' ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅನುಸರಿಸುತ್ತೇನೆ: ಬಾಬರ್ ಅಝಮ್ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅನುಸರಿಸುತ್ತೇನೆ: ಬಾಬರ್ ಅಝಮ್

ಭಾರತೀಯ ಕ್ರಿಕೆಟ್‌ನ ಪ್ರಮುಖ ಕೇಂದ್ರವಾಗಿರಬೇಕಿದ್ದ ಎನ್‌ಸಿಎ ವಾಸ್ತವದಲ್ಲಿ ಗಾಯಾಳು ಕ್ರಿಕೆಟಿಗರ ಫಿಟ್‌ನೆಟ್‌ ಸುಧಾರಣಾ ಕೇಂದ್ರವಾಗಿ ಮಾರ್ಪಟ್ಟಿದೆ. ಹೀಗಾಗಿ ಸಭೆಯಲ್ಲಿ ಎನ್‌ಸಿಎ ಸುಧಾರಣೆ ಬಗ್ಗೆಯೂ ದ್ರಾವಿಡ್-ಗಂಗೂಲಿ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Story first published: Tuesday, October 29, 2019, 9:45 [IST]
Other articles published on Oct 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X