ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ vs ಆಸ್ಟ್ರೇಲಿಯಾ: 2ನೇ ಒಡಿಐನಲ್ಲೂ ಆಸ್ಟ್ರೇಲಿಯಾವನ್ನು ಮಣಿಸಿದ ದ.ಆಫ್ರಿಕಾ

South Africa Beat Australia By Six Wickets

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆಯೇ ದಕ್ಷಿಣ ಆಫ್ರಿಕಾ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧದ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ದೊಡ್ಡ ಎಚ್ಚರಿಕೆಯನ್ನು ರವಾನಿಸಿದೆ.

ಮಂಗಾಯುಂಗ್ ಓವಲ್‌ನಲ್ಲಿ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿತು. ಮೊದಲಿಗೆ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತು. ಭರ್ತಿ ಐವತ್ತು ಓವರ್‌ಗೆ ಆಲೌಟ್‌ ಆದ ಆಸ್ಟ್ರೇಲಿಯಾ ತಂಡ 271 ರನ್‌ಗಳನ್ನು ಗಳಿಸಿತು.

ಕನ್ನಡಿಗ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಕ್ಕೆ ಆಕಾಶ್ ಚೋಪ್ರಾಗೆ ಕಣ್ಣುರಿ!ಕನ್ನಡಿಗ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಕ್ಕೆ ಆಕಾಶ್ ಚೋಪ್ರಾಗೆ ಕಣ್ಣುರಿ!

ಆಫ್ರಿಕಾ ಪರವಾಗಿ ಲುಂಗಿ ಎನ್‌ಗಿಡಿ 6 ವಿಕೆಟ್ ಪಡೆದು ಮಿಂಚಿದರು. ಎನ್ರಿಚ್ ನೋಟ್ರ್ಜೆ ಎರಡು ವಿಕೆಟ್ ಕಿತ್ತು ಮಿಂಚಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ಆರೋನ್ ಫಿಂಚ್ ಮತ್ತು ಡಿ'ಆರ್ಸಿ ಶಾರ್ಟ್ ತಲಾ 69 ರನ್‌ ಸಿಡಿಸಿ ಆಸ್ಟ್ರೇಲಿಯಾ ಉತ್ತಮ ಮೊತ್ತ ಪೇರಿಸುವಲ್ಲಿ ಸಹಕಾರಿಯಾದರು.

ಈ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ನಾಯಕ ಕ್ವಿಂಟನ್ ಡಿಕಾಕ್ 1 ರನ್‌ ಗಳಿಸಿದಾಗಲೇ ವಿಕೆಟ್ ಪಡೆಯುವಲ್ಲಿ ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್ ಯಶಸ್ವಿಯಾದರು. ಆದರೆ ಇನ್ನೋರ್ವ ಆರಂಭಿಕ ಜನ್ನೇಮನ್ ಮಾಲನ್ ಅಜೇಯ ಶತಕವನ್ನು ಸಿಡಿಸಿ ಗೆಲುವಿನ ರುವಾರಿಯಾದರು.

ಐಪಿಎಲ್‌ನಲ್ಲಿ ಕಾಸ್ಟ್‌ಕಟ್ಟಿಂಗ್: ಪ್ರೈಸ್‌ಮನಿಯಲ್ಲಿ ಭಾರೀ ಕಡಿತ!ಐಪಿಎಲ್‌ನಲ್ಲಿ ಕಾಸ್ಟ್‌ಕಟ್ಟಿಂಗ್: ಪ್ರೈಸ್‌ಮನಿಯಲ್ಲಿ ಭಾರೀ ಕಡಿತ!

ಮಾಲನ್ ಅಜೆಯ 129 ರನ್‌ಗಳಿಸಿ ಗೆಲುವಿಗೆ ಕಾರಣರಾದರು. ಹೆನ್ರಿಕ್ ಕ್ಲಾಸಿನ್ ಅರ್ಧ ಶತಕ ಗಳಿಸಿದರೆ ಜೆಜೆ ಸ್ಮುತ್ಸ್ ಮತ್ತು ಅಂತಿಮವಾಗಿ ಬಂದ ಡೇವಿಡ್ ಮಿಲ್ಲರ್ ಉತ್ತಮವಾಗಿ ಪ್ರದರ್ಶನವನ್ನು ನೀಡಿ ಮಾಲನ್‌ಗೆ ಉತ್ತಮ ಸಾಥ್ ನೀಡಿದರು.

Story first published: Thursday, March 5, 2020, 11:08 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X