ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

14 ವರ್ಷದ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದೆ ದಕ್ಷಿಣ ಆಫ್ರಿಕಾ

South Africa confirm first tour of Pakistan in 14 years

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬುಧವಾರ ಖಚಿತಪಡಿಸಿದೆ. 2021ರ ಜನವರಿ ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಪಾಕಿಸ್ತಾನಕ್ಕೆ ತೆರಳಿ ಎರಡು ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸುದೀರ್ಘ ಕಾಲದ ನಂತರ ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಿದ್ದು ಐತಿಹಾಸಿಕ ಸರಣಿ ಎಂದು ಈ ಪ್ರವಾಸವನ್ನು ದಕ್ಷಿಣ ಆಫ್ರಿಕಾ ಬಣ್ಣಿಸಿದೆ. ಈ ಮೂಲಕ ಪಾಕಿಸ್ತಾನ ಕೂಡ ಪ್ರಮುಖ ಕ್ರಿಕೆಟ್ ತಂಡಕ್ಕೆ ಆತಿಥ್ಯವಹಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಹತ್ವದ ಹೆಜ್ಜೆಯಿಡುತ್ತಿದೆ.

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡ

ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ಆತಿಥ್ಯವಹಿಸಲಿದೆ. ಮೊದಲ ಟೆಸ್ಟ್ ಪಂದ್ಯ ಕರಾಚಿಯಲ್ಲಿ ಜನವರಿ 26ನೇ ತಾರೀಕಿನಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ರಾವಲ್ಪಿಂಡಿಯಲ್ಲಿ ನಡೆಯಲಿದ್ದು ಫೆಬ್ರವರಿ 4 ರಿಂದ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಜನವರಿ 16ಕ್ಕೆ ಪಾಕಿಸ್ತಾನಕ್ಕೆ ತೆರಳಲಿದೆ. ಬಳಿಕ ಕ್ವಾರಂಟೈನ್ ಅವಧಿಯನ್ನು ಪೂರೈಸಲಿದೆ.

ಎಲ್ಲಾ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್ಎಲ್ಲಾ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ಪಾಕಿಸ್ತಾನಕ್ಕೆ 2007ರಲ್ಲಿ ಕೊನೆಯ ಬಾರಿಗೆ ಪ್ರವಾಸ ಮಾಡಿತ್ತು. ಆದರೆ ಅದಾದ ಬಳಿಕ ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಯಾವ ತಮಡಗಳು ಪ್ರವಾಸ ಕೈಗೊಳ್ಳಲು ಹಿಂಜರಿಯುತ್ತಿದ್ದವು. ಆದರೆ ಈಗ ಪಾಕಿಸ್ತಾನದಲ್ಲಿ ಮತ್ತೆ ನಿಧಾನವಾಗಿ ಕ್ರಿಕೆಟ್ ಸರಣಿಗಳು ನಡೆಯುತ್ತಿದೆ.

ಪಾಕಿಸ್ತಾನದ ದಕ್ಷಿಣ ಆಫ್ರಿಕಾ ಪ್ರವಾಸ 2021:
ಮೊದಲ ಟೆಸ್ಟ್- 26-30 ಜನವರಿ, ಕರಾಚಿ
ಎರಡನೇ ಟೆಸ್ಟ್- 04-08 ಫೆಬ್ರವರಿ, ರಾವಲ್ಪಿಂಡಿ
ಮೊದಲ ಟಿ20- 11 ಫೆಬ್ರವರಿ, ಲಾಹೋರ್
ಎರಡನೇ ಟಿ20- 13 ಫೆಬ್ರವರಿ, ಲಾಹೋರ್
ಮೂರನೇ ಟಿ20, 14 ಫೆಬ್ರವರಿ ಟಿ 20, ಲಾಹೋರ್

Story first published: Wednesday, December 9, 2020, 18:55 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X