ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಆಯೋಜಿಸಲು ದ.ಆಫ್ರಿಕಾ ಸಜ್ಜು

South Africa confirmed to host England for limited-overs series in November

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾಗೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ ಎಂಬುದನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧಿಕರತವಾಗಿ ಘೋಷಿಸಿದೆ. ಟಿ20 ಹಾಗೂ ಏಕದಿನ ಪಂದ್ಯಗಳ ಸರಣಿ ಇದಾಗಿದ್ದು ನವೆಂಬರ್ ತಿಂಗಳ ಕೊನೆಯಲ್ಲಿ ಈ ಸರಣಿ ಆರಂಭಗೊಳ್ಳಲಿದೆ.

ಈ ಸರಣಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಗೆ ತೆರಳಲಿರುವ ಇಂಗ್ಲೆಂಡ್ ಆಟಗಾರರು 10 ದಿನಗಳ ಕ್ವಾರಂಟೈನ್ ಪೂರೈಸಲಿದ್ದಾರೆ. ಈ ಸರಣಿ ಆಯೋಜನೆಯ ಬಗ್ಗೆ ಕ್ರಿಕೆಟ್ ಸೌತ್‌ಆಫ್ರಿಕಾ ಸರ್ಕಾರದ ಕಡೆಯಿಂದ ಈಗಾಗಲೇ ಅನುಮತಿಯನ್ನು ಕೂಡ ಪಡೆದುಕೊಂಡಿದೆ.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

ಈ ಸರಣಿ ನವೆಂಬರ್ 27 ರಿಂದ ಆರಂಭವಾಗಲಿದ್ದು ಡಿಸೆಂಬರ್ 9 ರಂದು ಅಂತ್ಯವಾಗಲಿದೆ. ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿ ಇದಾಗಿದೆ. ಸರಿಯ ಎಲ್ಲಾ ಪಂದ್ಯಗಳು ಕೂಡ ಕೇಪ್‌ಟೌನ್ ಹಾಗೂ ಅಲ್ಲಿಗೆ ಸಮೀಪವಿರುವ ಪಾರ್ಲ್ ಕ್ರೀಡಾಂಗಣದಲ್ಲಿ ಮುಚ್ಚಿದ ಬಾಗಿಲುಗಳಲ್ಲಿ ನಡೆಯಲಿದೆ.

"ಈ ರೀತಿಯ ಸರಣಿ ನಮಗೆ ಮೊದಲನೆಯದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಅನ್ನು ಆರಂಭಿಸುವ ಉದ್ದೇಶದಿಂದ ಈ ಶ್ರೇಷ್ಠ ಜವಾಬ್ಧಾರಿಯನ್ನು ಶೀಘ್ರವಾಗಿ ಕಲಿತುಕೊಳ್ಳಲು ಬದ್ಧರಾಗಿದ್ದೇವೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ಇನ್ನು ಈ ಸರಣಿಯ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ಕೂಡ ಖಚಿತಪಡಿಸಿದ್ದು ಇಂಗ್ಲೆಂಡ್‌ನ ಆಟಗಾರರು ಕೇಪ್‌ಟೌನ್‌ಗೆ ಪ್ರಯಾಣವನ್ನು ಚಾರ್ಟರ್ಡ್ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಹ್ಯಾರಿಸನ್ ಕ್ರಿಕೆಟ್ ಸೌತ್ ಆಫ್ರಿಕಾದ ಬಯೋ ಬಬಲ್ ಯೋಜನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ.

Story first published: Thursday, October 22, 2020, 16:23 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X