ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2023ರ ಅ-19 ಮಹಿಳಾ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಆತಿಥ್ಯ

South Africa Hosting Under-19 Womens T20 World Cup in 2023

ಕ್ರಿಕೆಟ್ ಅಭಿಮಾನಿಗಳ ಬಹುನಿರಿಕ್ಷಿತ ಪಂದ್ಯಾವಳಿ ಮುಂಬರುವ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಈ ಬಾರಿ ಕಾಮನಬಿಲ್ಲು ರಾಷ್ಟ್ರ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ. ಕೋವಿಡ್‌ ಕಾರಣಾಂತರಗಳಿಂದ ಎರಡು ವರ್ಷದಿಂದ ಮುಂದೂಡಲಾಗಿದ್ದ ಪಂದ್ಯಾವಳಿಯನ್ನು ಮುಂಬರುವ 2023 ರ ಜನವರಿಯಲ್ಲಿ ಆಯೋಜಿಸಿಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಭಾನುವಾರ(ಏಪ್ರಿಲ್ 10)ರಂದು ಜರುಗಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೋಲೆಟ್ಸಿ ಮೊಸೆಕಿ, ಐಸಿಸಿ ನಮ್ಮ ಮೇಲೆ ನಂಬಿಕೆಯಿಟ್ಟು ಈ ಟೂರ್ನಿಯ ಆಯೋಜನೆಯ ಆತಿಥ್ಯ ನೀಡಿರುವುದು ಸಂತೋಷಕರ ಸಂಗತಿ. ಐಸಿಸಿ 2023 ಮಹಿಳಾ ಟಿ20 ವಿಶ್ವ ಕಪ್ ಮತ್ತು ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಈ ಎರಡು ಮಹತ್ತರವಾದ ಟೂರ್ನಿಯ ಆಯೋಜನೆಯ ಜವಾಬ್ದಾರಿ ನೀಡಿದ್ದು, ಎರಡು ತಿಂಗಳ ಅಂತರದ ಅವಧಿಯೊಳಗೆ ಈ ಟೂರ್ನಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಈ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, 41 ಪಂದ್ಯಗಳು ಜರುಗಲಿವೆ. ಎರಡೂ ಟೂರ್ನಿಗಳನ್ನು ಸುಗಮವಾಗಿ ನಡೆಸಲು ಈಗಾಗಲೇ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಐಸಿಸಿಯ ಸಹಯೋಗದೊಂದಿಗೆ ಕೆಲಸ ಮಾಡುವುದು ಹೆಮ್ಮೆಯ ಸಂಗತಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮೊಸೆಕಿ ಹೇಳಿದ್ದಾರೆ.

ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಂದ್ಯಾವಳಿಗಳನ್ನು ಮುಂದೂಡಲಾಗಿತ್ತು, ಈಗ ಅಂಡರ್-19 ಟಿ20 ಮಹಿಳಾ ವಿಶ್ವಕಪ್ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಭವಿಷ್ಯದಲ್ಲಿ ರಾಷ್ಟ್ರಿಯ ತಂಡವನ್ನು ಪ್ರತಿನಿಧಿಸುವ ಉದಯೋನ್ಮುಖ ತಾರೆಗಳನ್ನು ಸ್ವಾಗತಿಸಲು ಸಿದ್ದವಾಗಿದೆ. ಪ್ರಸ್ತುತ ಮಹಿಳಾ ಕ್ರಿಕೆಟ್ ಟೂರ್ನಿ ಉತ್ತಮ ಜನಪ್ರಿಯತೆಯನ್ನು ಗಳಿಸಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ 50 ಓವರ್‌ಗಳ ಮಹಿಳಾ ವಿಶ್ವಕಪ್ 2022, ಆಸ್ಟ್ರೇಲಿಯಾ ವಿಜಯಶಾಲಿಯಾಗಿದ್ದು ಮತ್ತು ಅಭಿಮಾನಿಗಳನ್ನು ಸಂಪೂರ್ಣವಾಗಿ ಮನರಂಜಿಸಿದ ಕಾರಣ ಕೆಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಆದ್ದರಿಂದ, ಮುಂಬರುವ ಟೂರ್ನಿಗಳಲ್ಲಿಯು ಇಂತಹದ್ದೇ ಸ್ಪರ್ಧೆಯ ನಿರೀಕ್ಷೆಗಳಿವೆ ಎಂದರು.

ಇತ್ತೀಚಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನಗಳನ್ನು ವೀಕ್ಷಿಸಿದ್ದು, ಅದೇ ರೀತಿಯ ತಯಾರಿಗಾಗಿ ಆತಿಥೇಯ ನಗರಗಳು ಅಷ್ಟೇ ಉತ್ಸುಕವಾಗಿವೆ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ಪ್ರದರ್ಶನದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಶ್ವ ವೇದಿಕೆಯನ್ನು ಕಲ್ಪಿಸಲಾಗುವುದು ಎಂದು ಮೊಸೆಕಿ ಹೇಳಿದ್ದಾರೆ.

Story first published: Monday, April 11, 2022, 18:17 [IST]
Other articles published on Apr 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X